ಇನ್ನೊಂದು ಆತಂಕಕಾರಿ ವಿಷಯವೆಂದರೆ, ರಷ್ಯಾ ಮತ್ತು ಅಮೆರಿಕ ನಡುವೆ ಇದ್ದ ಕೊನೆಯ ಪರಮಾಣು ಶಸ್ತ್ರಾಸ್ತ್ರ ಒಪ್ಪಂದವು ಇದೇ ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದೆ. ಅಂದರೆ ಅರ್ಧ ಶತಮಾನದ ನಂತರ ಇದೇ ಮೊದಲ ಬಾರಿಗೆ, ವಿಶ್ವದ ಅತಿ ದೊಡ್ಡ ಪರಮಾಣು ಶಕ್ತಿ ಹೊಂದಿರುವ ಈ ಎರಡು ದೇಶಗಳ ಮೇಲೆ ಯಾವುದೇ ಕಾನೂನು ಮಿತಿಗಳಿಲ್ಲ. ಇದು ಜಗತ್ತಿನಲ್ಲಿ ಮತ್ತೆ ಅಣು ಅಸ್ತ್ರಗಳ ರೇಸ್ ಆರಂಭವಾಗುವ ಭಯವನ್ನು ಹುಟ್ಟಿಸಿದೆ ಎಂದರೆ ಸುಳ್ಳಲ್ಲ, (ಏಜನ್ಸೀಸ್).