ಯಾವುದೇ ಕಾರಣಕ್ಕೂ ಬಳಸಬೇಡಿ! ಟ್ರಂಪ್​ ಮುಖವಿರುವ ಮಾತ್ರೆಗಳಿಗೆ ರೆಡ್​ ಅಲರ್ಟ್​ ಘೋಷಿಸಿದ ನೆದರ್​ಲ್ಯಾಂಡ್ಸ್​ | Ecstasy Pills

ಯಾವುದೇ ಕಾರಣಕ್ಕೂ ಬಳಸಬೇಡಿ! ಟ್ರಂಪ್​ ಮುಖವಿರುವ ಮಾತ್ರೆಗಳಿಗೆ ರೆಡ್​ ಅಲರ್ಟ್​ ಘೋಷಿಸಿದ ನೆದರ್​ಲ್ಯಾಂಡ್ಸ್​
ಯಾವುದೇ ಕಾರಣಕ್ಕೂ ಬಳಸಬೇಡಿ! ಟ್ರಂಪ್​ ಮುಖವಿರುವ ಮಾತ್ರೆಗಳಿಗೆ ರೆಡ್​ ಅಲರ್ಟ್​ ಘೋಷಿಸಿದ ನೆದರ್​ಲ್ಯಾಂಡ್ಸ್​
Published on

ಪ್ರಮುಖ ಮುಖ್ಯಾಂಶಗಳು

  • ಡೊನಾಲ್ಡ್ ಟ್ರಂಪ್ ಮುಖವಿರುವ ಎಕ್ಸ್‌ಟಸಿ ಮಾತ್ರೆಗಳ ಬಳಕೆಗೆ ನಿಷೇಧ
  • ನೆದರ್ಲ್ಯಾಂಡ್ಸ್‌ನ ಮದ್ಯಪಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆ 'ಟ್ರಿಂಬೋಸ್ ಇನ್‌ಸ್ಟಿಟ್ಯೂಟ್​ನಿಂದ ಅಲರ್ಟ್​
  • ಈ ಮಾತ್ರೆಗಳು ಜೀವಕ್ಕೆ ಕುತ್ತು ತರುವಷ್ಟು ಅಪಾಯಕಾರಿ ಎಂದು ವಾರ್ನಿಂಗ್​
ನೆದರ್ಲ್ಯಾಂಡ್ಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖವಿರುವ ಎಕ್ಸ್‌ಟಸಿ (Ecstasy Tablets) ಮಾತ್ರೆಗಳ ಬಳಕೆಯ ವಿರುದ್ಧ ಇದೀಗ ನೆಡರ್​ಲ್ಯಾಂಡ್ಸ್​ ರೆಡ್​ ಅಲರ್ಟ್ ಘೋಷಿಸಿದೆ.
ನೆದರ್ಲ್ಯಾಂಡ್ಸ್‌ನ ಪ್ರಮುಖ ಮದ್ಯಪಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯಾದ 'ಟ್ರಿಂಬೋಸ್ ಇನ್‌ಸ್ಟಿಟ್ಯೂಟ್' ಶುಕ್ರವಾರ ರೆಡ್ ಅಲರ್ಟ್ ಅನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ನೀಡಿದ್ದು, ಈ ಮಾತ್ರೆಗಳು ಜೀವಕ್ಕೆ ತುಂಬ ಅಪಾಯಕಾರಿ ಎಂದು ತಿಳಿಸಿದೆ. ಡ್ರಗ್ ಟೆಸ್ಟಿಂಗ್ ಕೇಂದ್ರಗಳಲ್ಲಿ ಇತ್ತೀಚೆಗೆ ಇಂತಹ ಗುಳಿಗೆಗಳ ಸುರಕ್ಷತೆಯನ್ನು ಪರೀಕ್ಷಿಸಲಾಯಿತು. ಈ ಪ್ರಕ್ರಿಯೆ ಬೆನ್ನಲ್ಲೇ ಮಾತ್ರೆಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ ಎಂದು ಸಂಸ್ಥೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಏನಿದು ಮಾತ್ರೆ ಗೊಂದಲ?

ಟ್ರಿಂಬೋಸ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿರುವ ಮಾತ್ರೆಯ ಫೋಟೋ ಪ್ರಕಾರ, ಈ ಗುಳಿಗೆಯ ಒಂದು ಬದಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಮುಖದ ಆಕಾರವಿದ್ದರೆ, ಇನ್ನೊಂದು ಬದಿಯಲ್ಲಿ ಲಂಬ ರೇಖೆಯ ಎರಡೂ ಮಗ್ಗುಲಿನಲ್ಲಿ NL ಮತ್ತು Trump ಎಂದು ಹಾಕಲಾಗಿದೆ. ಈ ಮಾತ್ರೆಗಳು ಹಸಿರು ಮತ್ತು ಹಳದಿ ಬಣ್ಣಗಳಲ್ಲಿ ಪತ್ತೆಯಾಗಿವೆ. ಟೆಸ್ಟಿಂಗ್​ ವೇಳೆ, ಇದರಲ್ಲಿ ಅಪಾಯಕಾರಿ PMMA ಕೆಮಿಕಲ್​ ಅಂಶವು ವರದಿಯಾಗಿದೆ. ಸಾಮಾನ್ಯ ಎಕ್ಸ್‌ಟಸಿ ಮಾತ್ರೆಗಳಲ್ಲಿ MDMA ಎಂಬ ರಾಸಾಯನಿಕ ಇರುತ್ತದೆ. ಆದರೆ, ಇಲ್ಲಿ ಪಿಎಂಎಂಎ ಇರುವುದು ಆತಂಕಕಾರಿಯಾಗಿದೆ.
ಟ್ರಂಪ್ ಆಕಾರದ ಈ ಮಾತ್ರೆಗಳಲ್ಲಿ ಅತ್ಯಂತ ಅಪಾಯಕಾರಿ ಹಾಗೂ ಸಾಂದ್ರತೆಯುಳ್ಳ ಪ್ಯಾರಾ-ಮೆಥಾಕ್ಸಿ ಮೆಥಾಂಫೆಟಮೈನ್' (PMMA) ಎಂಬ ಕೆಮಿಕಲ್​ ಅಂಶವು ಶರೀರದಲ್ಲಿ ತಕ್ಷಣವೇ ತನ್ನ ಪ್ರಭಾವವನ್ನು ತೋರಿಸುವುದಿಲ್ಲ. ಇದೊಂದು ರೀತಿ ಸ್ಲೋ ಪಾಯ್ಸನ್​ ಇದ್ದಂತೆ ಎಂದು ವಿವರಿಸಲಾಗಿದೆ. ಹೀಗಾಗಿ ಮೊದಲ ಡೋಸ್ ಕೆಲಸ ಮಾಡುತ್ತಿಲ್ಲವೆಂದು, ಇನ್ನೊಂದು ಮಾತ್ರೆ ಏನಾದರೂ ತೆಗೆದುಕೊಂಡರೆ ಅಪಾಯ ಕಟ್ಟಿಟ್ಟಬುತ್ತಿ. ಇದು ದೇಹದ ಉಷ್ಣಾಂಶವನ್ನು ದಿಢೀರ್​ ಹೆಚ್ಚಿಸಿ ಸಾವಿಗೆ ದೂಡುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗಿದೆ.
ಪ್ರಸ್ತುತ ಈ ಮಾತ್ರೆಗಳನ್ನು ಸೇವಿಸಿ ಯಾರಾದರೂ ಮೃತಪಟ್ಟಿರುವ ಅಥವಾ ಗಂಭೀರವಾಗಿ ಅಸ್ವಸ್ಥಗೊಂಡಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಟ್ರಿಂಬೋಸ್ ಇನ್‌ಸ್ಟಿಟ್ಯೂಟ್ ವಕ್ತಾರರಾದ ಅನ್ನೀಕ್ ಗ್ರೂತ್‌ಹುಯಿಸ್ ತಿಳಿಸಿದ್ದಾರೆ. ಯಾರ ರಕ್ತದಲ್ಲೂ PMMA ಪತ್ತೆಯಾದ ಪ್ರಕರಣಗಳು ಇದುವರೆಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಎರಡನೇ ಬಾರಿ

ಏನಿದು ಎಕ್ಸ್​ಟಸಿ?

ಎಕ್ಸ್‌ಟಸಿ ಮಾತ್ರೆ ಎಂಬುದು ಎಂಡಿಎಂಎ (3,4-ಮೀಥೈಲೀನ್‌ಡೈಆಕ್ಸಿಮೆಥಾಂಫೆಟಮೈನ್) ಎಂಬ ಕೃತಕವಾಗಿ ತಯಾರಿಸಲಾದ ಅಪಾಯಕಾರಿ ಸಿಂಥೆಟಿಕ್​ ಡ್ರಗ್​ (Synthetic Drug). ಇದು ಸಣ್ಣ ಮಾತ್ರೆ ಅಥವಾ ಟ್ಯಾಬ್ಲೆಟ್ ರೂಪದಲ್ಲಿ ಲಭ್ಯವಿದೆ. ನಿಯಮಗಳ ಪ್ರಕಾರ, ಇಂತಹ ಮಾತ್ರೆಗಳು ನರಮಂಡಲದ ಮೇಲೆ ಪ್ರಭಾವ ಬೀರುವ (Psychoactive) ಒಂದು ಅನಧಿಕೃತ ಮಾದಕ ವಸ್ತು ಎನ್ನಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net