ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಕೊರತೆಯು ಕೇವಲ ತಾತ್ಕಾಲಿಕ ಬಿಕ್ಕಟ್ಟು ಎಂದು ಹೇಳಿಕೊಳ್ಳುತ್ತಿದ್ದರೆ, ರಷ್ಯಾದ ಮಾಧ್ಯಮಗಳು ಈ ಬಿಕ್ಕಟ್ಟಿನ ಬಗ್ಗೆ ತುಟಿ ಬಿಚ್ಚದೆ, ಮೌನಕ್ಕೆ ಶರಣಾಗಿವೆ. ಈ ನಡುವೆ ರಷ್ಯಾದ ಸೇನಾ ಮೂಲಸೌಕರ್ಯಗಳ ಮೇಲೆ ಉಕ್ರೇನ್ ತೀವ್ರ ದಾಳಿ ನಡೆಸುತ್ತಿದ್ದು, ರಷ್ಯಾದ ವಾಸ್ತವ ಆರ್ಥಿಕ ಮತ್ತು ಸೇನಾ ಹಿನ್ನಡೆಯ ಸ್ಥಿತಿಗತಿಯನ್ನು ಪರಿಶೀಲಿಸಲು ಅಮೆರಿಕದ ಸಿಐಎ (CIA) ನಿರ್ದೇಶಕ ಜಾನ್ ರೇಟ್‌ಕ್ಲಿಫ್ ಗೌಪ್ಯವಾಗಿ ಮಾಸ್ಕೋಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).