ಅಲ್ಲಾಹನಿಗೆ ಸ್ತುತಿ!...ಹೊರ್ಮುಜ್ ಈಗ ನಮ್ಮ ಮುಷ್ಟಿಯಲ್ಲಿದೆ ಎಂದ ಟ್ರಂಪ್ | Donald Trump

Donald Trump | ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump | ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on

ಅಮೆರಿಕವು ಹೊರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದು, ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಯುಎಸ್ ನೌಕಾ ದಿಬಂಧನವನ್ನು ಉಕ್ಕಿನ ಗೋಡೆ ಎಂದು ಬಣ್ಣಿಸಿದ್ದು, ಇದರ ವಿರುದ್ಧ ಇರಾನ್ ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಮಧ್ಯಪ್ರಾಚ್ಯದ ಮೂಲಕ ಇಂಧನ ಮತ್ತು ಇತರ ಸರಕುಗಳ ಹರಿವಿಗೆ ಮುಖ್ಯವಾಗಿರುವ ಈ ಕಾರ್ಯತಂತ್ರದ ಜಲಮಾರ್ಗವನ್ನು ಯುಎಸ್ ನಿಯಂತ್ರಿಸುತ್ತದೆ ಎಂದು ಟ್ರಂಪ್ ಪದೇ ಪದೆ ಹೇಳಿದ್ದಾರೆ, ಇರಾನ್​ ಈ ಹೇಳಿಕೆಯನ್ನು ತಿರಸ್ಕರಿಸಿದೆ. ವಾಸ್ತವವಾಗಿ, ಫೆಬ್ರವರಿ 28 ರಂದು ಟ್ರಂಪ್ ಆರಂಭಿಸಿದ ಯುದ್ಧಕ್ಕೆ ಪ್ರತಿಯಾಗಿ, ಇರಾನ್ ಜಲಸಂಧಿಯಲ್ಲಿ ಟೋಲ್ (ಸುಂಕ) ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಅಲ್ಲದೆ, ತಮ್ಮ ನೆಚ್ಚಿನ ಮಾರ್ಗವನ್ನು ಬದಲಿಸಿ ಬೇರೆಡೆ ಹೋಗಲು ಯತ್ನಿಸುತ್ತಿವೆ ಎಂದು ಆರೋಪಿಸಿರುವ ಇರಾನ್, ಆ ಹಡಗುಗಳ ಮೇಲೆ ಸತತವಾಗಿ ದಾಳಿಗಳನ್ನು ನಡೆಸುತ್ತಿದೆ.
ಇರಾನ್ ಬಳಿ ನೌಕಾಪಡೆ ಮತ್ತು ವಾಯುಪಡೆ ಇಲ್ಲ ಹಾಗೂ ಅವರ ಸೈನಿಕರಿಗೆ ಸಂಬಳ ಸಿಗುತ್ತಿಲ್ಲ ಎಂದಿರುವ ಟ್ರಂಪ್​, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಾಶವಾಗಿದೆ ಮತ್ತು ಓಡಿಹೋಗುತ್ತಿದೆ ಎಂದು ಅವರು ಹೇಳಿದರು. ಇರಾನ್ ಇನ್ನು ಮುಂದೆ ಮಧ್ಯಪೂರ್ವದ ಬುಲ್ಲಿ ಅಲ್ಲ, ಅಲ್ಲಾಹನಿಗೆ ಸ್ತುತಿ ಎಂದು ತಮ್ಮ ಪೋಸ್​​ನಲ್ಲಿ ಬರೆದುಕೊಂಡಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ನ ನಿಬಂಧನೆಗಳೇನೆಂದರೆ, ಅಮೆರಿಕಾ ನೌಕಾ ದಿಬಂಧನವನ್ನು ತೆರವುಗೊಳಿಸುವವರೆಗೆ, ಅದರ ಆಸ್ತಿಗಳನ್ನು ಮುಕ್ತಗೊಳಿಸುವವರೆಗೆ, ನಿರ್ಬಂಧಗಳನ್ನು ವಾಪಸ್ ಪಡೆಯುವವರೆಗೆ ಮತ್ತು ಯುದ್ಧಕಾಲದ ಹಾನಿಗೆ ಯುಎಸ್ ಪರಿಹಾರ ನೀಡುವವರೆಗೆ ಹೊರ್ಮುಜ್ ಜಲಸಂಧಿಯನ್ನು ಮರುಪ್ರಾರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಇರಾನ್ ಹೇಳಿದೆ. ಇರಾನ್‌ನ ಕ್ರಾಂತಿಕಾರಿ ಕಾವಲುಗಾರರು ಭಾನುವಾರ ಮಾತನಾಡಿ, ಶತ್ರುವು ನಮ್ಮ ಎಲ್ಲಾ ಷರತ್ತುಗಳನ್ನು ಸ್ವೀಕರಿಸುವವರೆಗೆ ದಿಬಂಧನವನ್ನು ಮುಂದುವರಿಸುವುದೇ ನಮ್ಮ ಕಾರ್ಯತಂತ್ರವಾಗಿದೆ ಮತ್ತು ಜಲಸಂಧಿಯು ಈಗ ನಮಗೆ ಕೇವಲ ಜಲಮಾರ್ಗವಲ್ಲದೆ ಯುದ್ಧದ ರಂಗಭೂಮಿಯಾಗಿದೆ ಎಂದು ಹೇಳಿದರು.

ನಾವು ಇರಾನ್ ಜೊತೆ ಪೂರ್ಣ ಮಟ್ಟದಲ್ಲಿ ಅಲ್ಲದೆ, ಅರೆ-ಮಾತುಕತೆ ಮಾತ್ರ ನಡೆಸುತ್ತಿದ್ದೇವೆ. ಇರಾನ್‌ನಲ್ಲಿರುವ ವಿಪರೀತ ಹಣದುಬ್ಬರ ಮತ್ತು ಅವರ ಬಳಿ ಹಣವಿಲ್ಲದಿರುವ ಪರಿಸ್ಥಿತಿಯನ್ನೇ ನಾವು ಗಮನಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಇದು ಕೊನೆಗೆ ಯಶಸ್ವಿಯಾಗುತ್ತದೆ, ಇದು ಒಂದು ಚೆಸ್ ಆಟವಿದ್ದಂತೆ ಎಂದೂ ಅವರು ತಿಳಿಸಿದ್ದಾರೆ. ಮತ್ತೊಂದೆಡೆ, ಅಮೆರಿಕದೊಂದಿಗೆ ನೇರ ಮಾತುಕತೆ ಇಲ್ಲದೆ, ಕೇವಲ ಮಧ್ಯವರ್ತಿಗಳ ಮೂಲಕ ಮಾತ್ರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈ ಹಿಂದೆ ತಿಳಿಸಿದ್ದರು(ಏಜೆನ್ಸೀಸ್​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net