ಶಾಂತಿ ಮಾತುಕತೆ; ಮಿನಾಬ್ 168... ಶಾಲಾ ಮಕ್ಕಳ ಫೋಟೋ, ರಕ್ತಸಿಕ್ತ ಬ್ಯಾಗ್​ಗಳೊಂದಿಗೆ ಪಾಕ್​ಗೆ ಆಗಮಿಸಿದ ಇರಾನ್ ನಿಯೋಗ | Minab 168

ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್
ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್
Published on
ಇಸ್ಲಾಮಾಬಾದ್: ಶಾಂತಿ ಮಾತುಕತೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಆಗಮಿಸಿದ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ಇರಾನ್ ನಿಯೋಗ, ಯುಸ್-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ 168 ಮಿನಾಬ್​ ಶಾಲೆಯ ಬಾಲಕಿಯರನ್ನು ಸ್ಮರಿಸಿ, ವಿಮಾನದಲ್ಲಿ ಅವರ ಫೋಟೋ ಮತ್ತು ರಕ್ತಸಿಕ್ತ ಬ್ಯಾಗ್​ಗಳನ್ನಿರಿಸಿಕೊಂಡು ಬಂದಿದೆ.
ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರ ಎಕ್ಸ್​ ಖಾತೆಯಲ್ಲಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದ, ಅದು ಅಕ್ಷರಶಃ ಎಲ್ಲರ ಗಮನ ಸೆಳೆದಿದ್ದು, ಇಂಟರ್ನೆಟ್​ನಲ್ಲಿ ವೈರಲ್ ಆಗಿದೆ. ಅದಕ್ಕೆ ಇವರು ನಮ್ಮೊಂದಿಗಿನ ಸಹ ಪ್ರಯಾಣಿಕರು ಎಂದು ಕ್ಯಾಪ್ಷನ್ ಕೊಟ್ಟು, ಮಿನಾಬ್ 168 ಎಂದು ಟ್ಯಾಗ್​ಲೈನ್ ಕೊಟ್ಟಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಬಳಿಕ ಇಂದು(ಏ. 11) ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಶಾಂತಿ ಒಪ್ಪಂದ ಮಾತುಕತೆ ನಡೆಯಲಿದ್ದು, ಎರಡು ದೇಶಗಳ ನಿಯೋಗಗಳು ಆಗಮಿಸಿವೆ. ಆದರೆ ಇರಾನ್​ ನಿಯೋಗ ಫೆ. 28ರಂದು ಯುಎಸ್-ಇಸ್ರೇಲಿ ಪಡೆಗಳು ಇರಾನ್ ಮೇಲೆ ದಾಳಿಯಲ್ಲಿ ಮೃತಪಟ್ಟ 168 ಮಿನಾಬ್‌ ಶಾಲೆಯ ಬಾಲಕಿಯರ ಪೋಟೋ ಮತ್ತು ಅವರ ರಕ್ತಸಿಕ್ತ ಬ್ಯಾಗ್​ಗಳನ್ನು ಶಾಂತಿಮಾತುಕತೆಯ ಭಾಗವಾಗಿ ತಂದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net