ಪ್ರಾಕ್ಟೀಸ್ ಬಿಟ್ಟು ಕ್ಯಾಲೆಂಡರ್ ನೋಡ್ತಿದೆ ಪಾಕ್ ಪಡೆ! ಟಿ20 ವಿಶ್ವಕಪ್ ಗೆಲ್ಲಲು ಪಾಕಿಸ್ತಾನದ ಹೊಸ ಪ್ಲಾನ್..? Pakistan Cricket
ಪ್ರಾಕ್ಟೀಸ್ ಬಿಟ್ಟು ಕ್ಯಾಲೆಂಡರ್ ನೋಡ್ತಿದೆ ಪಾಕ್ ಪಡೆ! ಟಿ20 ವಿಶ್ವಕಪ್ ಗೆಲ್ಲಲು ಪಾಕಿಸ್ತಾನದ ಹೊಸ ಪ್ಲಾನ್..?
Published on:
Copied
Follow Us
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್(Pakistan Cricket) ಎಂದರೆ ಅಲ್ಲಿ ಕೇವಲ ಬ್ಯಾಟ್-ಬಾಲ್ ಇರುವುದಿಲ್ಲ, ಜೊತೆಗೆ ಒಂದಿಷ್ಟು ಕುತೂಹಲ, ವಿಚಿತ್ರ ನಂಬಿಕೆ ಮತ್ತು ಮಜಾ ಕೂಡ ಇರುತ್ತದೆ. ಈಗ 2026ರ ಟಿ20 ವಿಶ್ವಕಪ್ ಸಮೀಪಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ಹೊಸದೊಂದು ಅದೃಷ್ಟದ ಚರ್ಚೆ ಶುರುವಾಗಿದೆ.
ತಾಬಿಶ್ ಹಶ್ಮಿ ಕ್ಯಾಲೆಂಡರ್ ಲೆಕ್ಕಾಚಾರ..!
ಪಾಕಿಸ್ತಾನದ ಖ್ಯಾತ ಕಾಮಿಡಿಯನ್ ತಾಬಿಶ್ ಹಶ್ಮಿ ಇತ್ತೀಚೆಗೆ ತಮ್ಮ ಶೋನಲ್ಲಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ನಮ್ಮ ಕ್ರಿಕೆಟ್ ಇತಿಹಾಸಕ್ಕೂ ರಂಜಾನ್‌ಗೂ ಫೆವಿಕಾಲ್ ನಂಟಿದೆ ಭಾಯ್ ಎಂದು ವಿಶ್ಲೇಷಿಸಿದ್ದಾರೆ.
ನೋಡಿ, ನಾವು 1992ರಲ್ಲಿ ವರ್ಲ್ಡ್ ಕಪ್ ಗೆದ್ದಾಗ ರಂಜಾನ್ ಇತ್ತು. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ರಂಜಾನ್ ಇತ್ತು. ಈಗ 2026ರ ಟಿ20 ವಿಶ್ವಕಪ್ ಕೂಡ ರಂಜಾನ್ ತಿಂಗಳಲ್ಲೇ ಬರ್ತಾ ಇದೆ. ಅಂದ್ರೆ, ಟ್ರೋಫಿ ನಮ್ಮ ಫ್ರಿಡ್ಜ್‌ಗೆ ಬರೋದು ಗ್ಯಾರಂಟಿ ಎಂದು ತಾಬಿಶ್ ಭವಿಷ್ಯ ನುಡಿದಿದ್ದಾರೆ.
ಅಂದರೆ, ಪಾಕಿಸ್ತಾನ ತಂಡಕ್ಕೆ ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡುವುದಕ್ಕಿಂತ ಹೆಚ್ಚಾಗಿ ಕ್ಯಾಲೆಂಡರ್‌ನಲ್ಲಿ ರಂಜಾನ್ ತಿಂಗಳು ಯಾವಾಗ ಬರುತ್ತದೆ ಎಂದು ನೋಡುವುದೇ ದೊಡ್ಡ ಸ್ಟ್ರಾಟಜಿ ಆದಂತಿದೆ.
ರಶೀದ್ ಲತೀಫ್ ಅವರ 'ಪಂಚ್' ಡೈಲಾಗ್..
ತಾಬಿಶ್ ಅವರ ಈ ಅದೃಷ್ಟದ ಮಾತುಗಳನ್ನು ಕೇಳಿಸಿಕೊಂಡ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಮಾತ್ರ ಸಖತ್ ಕಾಮಿಡಿ ಟ್ವಿಸ್ಟ್ ಕೊಟ್ಟಿದ್ದಾರೆ. ತಾಬಿಶ್ ಮಾತಿಗೆ ನಗುತ್ತಲೇ ಉತ್ತರಿಸಿದ ಲತೀಫ್, ಬರೀ ರಂಜಾನ್ ಬಂದ್ರೆ ಸಾಲದು ಅಬ್ಬಾ. ಟೀಮ್‌ನಲ್ಲಿ ಒಬ್ಬ ಪುಣ್ಯವಂತ ಆಟಗಾರ ಇರೋದು ಕೂಡ ಅಷ್ಟೇ ಮುಖ್ಯ ಎಂದಿದ್ದಾರೆ.
ಲತೀಫ್ ಅವರ ಈ ಮಾತಿನ ಒಳಾರ್ಥ ಕೇಳಿ ಅಭಿಮಾನಿಗಳು ಬಿದ್ದು ಬಿದ್ದು ನಗುತ್ತಿದ್ದಾರೆ. ಹಾಗಾದ್ರೆ ಸದ್ಯದ ಟೀಮ್‌ನಲ್ಲಿ ಅಂತಹ ಪುಣ್ಯವಂತ ಆಟಗಾರರು ಯಾರೂ ಇಲ್ವಾ ಆಥವಾ ಎಲ್ಲರೂ ಕೇವಲ ಬಿರಿಯಾನಿ ತಿನ್ನೋದ್ರಲ್ಲೇ ಬ್ಯುಸಿ ಇದ್ದಾರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯಲಾಗುತ್ತಿದೆ.
ಪ್ರಾಕ್ಟೀಸ್ ಮುಖ್ಯವೋ, ಅದೃಷ್ಟವೋ..?
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಪ್ರತಿ ಬಾರಿಯೂ ಹೀಗೆಯೇ ಆಗುತ್ತದೆ. ಬ್ಯಾಟಿಂಗ್ ಸರಿಯಿಲ್ಲದಿದ್ದಾಗ ಹವಾಮಾನ ಚೆನ್ನಾಗಿಲ್ಲ ಎನ್ನುತ್ತಾರೆ, ಬೌಲಿಂಗ್ ಕೈಕೊಟ್ಟಾಗ ಪಿಚ್ ಸರಿ ಇಲ್ಲ ಎನ್ನುತ್ತಾರೆ. ಆದರೆ ಈಗ ಇಡೀ ವಿಶ್ವಕಪ್ ಗೆಲ್ಲಲು ತಿಂಗಳ ಅದೃಷ್ಟವನ್ನೇ ನಂಬಿಕೊಂಡಿರುವುದು ಮಾತ್ರ ಪಕ್ಕಾ ಕಾಮಿಡಿಯಾಗಿದೆ. ತಾಬಿಶ್ ಹಶ್ಮಿ ಅವರ ಈ ಲಕ್ಕಿ ಮಂತ್ ಥಿಯರಿ ವರ್ಕ್ ಆಗುತ್ತಾ ಅಥವಾ ರಶೀದ್ ಲತೀಫ್ ಹೇಳಿದಂತೆ ಆ ಒಬ್ಬ ಪುಣ್ಯವಂತ ಆಟಗಾರ ಸಿಗುತ್ತಾನಾ ಎಂದು ಕಾದು ನೋಡಬೇಕು.
ಒಟ್ಟಿನಲ್ಲಿ, 2026ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಆಟ ನೋಡುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ರಂಜಾನ್ ತಿಂಗಳ ಕಾರಣಕ್ಕೆ ಅಭಿಮಾನಿಗಳು ಮಾತ್ರ ಟ್ರೋಫಿ ಕನಸು ಕಾಣುತ್ತಿರುವುದು ಸುಳ್ಳಲ್ಲ.(ಏಜೆನ್ಸೀಸ್).