2016-17ರಲ್ಲಿ ಸಿಎಸ್ಕೆ ತಂಡಕ್ಕೆ ಎರಡು ವರ್ಷಗಳ ಕಾಲ ನಿಷೇಧ ಹೇರಿದ್ದು ನಿಜ. ಆದರೆ, ಈ ನಿಷೇಧಕ್ಕೆ ಅಂಪೈರ್ ಫಿಕ್ಸಿಂಗ್ ಕಾರಣವಾಗಿರಲಿಲ್ಲ. ಬದಲಿಗೆ, ತಂಡದ ಪ್ರಮುಖ ಸದಸ್ಯ ಗುರುನಾಥ್ ಮೇಯಪ್ಪನ್ ಅವರು ಬೆಟ್ಟಿಂಗ್ನಲ್ಲಿ ತೊಡಗಿದ್ದಕ್ಕಾಗಿ ಮತ್ತು ತಂಡದ ಆಂತರಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ನೇಮಿತ ಸಮಿತಿಯು ಈ ಕ್ರಮ ಕೈಗೊಂಡಿತ್ತು.