ಬೀಜಿಂಗ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕೇವಲ ಇರಾನ್ ಮತ್ತು ಅಮೆರಿಕಕ್ಕೆ ಸೀಮಿತವಾಗಿಲ್ಲ, ಈಗ ಅದು ಜಾಗತಿಕ ಶಕ್ತಿಗಳ ನಡುವಿನ ಸಂಘರ್ಷವಾಗಿ ಬದಲಾಗಿದೆ. ಇರಾನ್‌ನ ಪ್ರಮುಖ ತೈಲ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಅಮೆರಿಕ ಬೆದರಿಕೆ ಹಾಕಿದ ಬೆನ್ನಲ್ಲೇ, ಚೀನಾ(China Vs US) ಇರಾನ್ ಪರವಾಗಿ ಬಂಡೆಯಂತೆ ನಿಂತಿದೆ. ಇರಾನ್ ಜೊತೆಗಿನ ನಮ್ಮ ವ್ಯಾಪಾರ ಮತ್ತು ಇಂಧನ ಸಂಬಂಧಗಳು ಅಚಲ ಎಂದು ಹೇಳುವ ಮೂಲಕ ಬೀಜಿಂಗ್, ಟ್ರಂಪ್ ಆಡಳಿತಕ್ಕೆ ನೇರ ಸವಾಲು ಹಾಕಿದೆ.