ಫಾಕ್ಸ್ ನ್ಯೂಸ್‌ನ 'ಸಂಡೇ ಮಾರ್ನಿಂಗ್ ಫ್ಯೂಚರ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಯಾವ ದೇಶ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತದೆಯೋ, ಆ ದೇಶದ ಸರಕುಗಳ ಮೇಲೆ ಶೇ. 50ರಷ್ಟು ಪ್ರತಿಶತ ಸುಂಕ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ವಿಶೇಷವಾಗಿ ಚೀನಾವನ್ನು ಉದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷ, ನನ್ನ ಮತ್ತು ಚೀನಾ ನಡುವೆ ಉತ್ತಮ ಸಂಬಂಧವಿದೆ, ಅವರು ಹಾಗೆ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ಒಂದು ವೇಳೆ ನಾವು ಅವರನ್ನು ಹಿಡಿದರೆ, ಅವರು ಶೇ.50 ಟ್ಯಾರಿಫ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.