ಫ್ಲೈದುಬೈ ವಿಮಾನ ದಾಳಿ ಪ್ರಕರಣಕ್ಕೆ ಹೊಸ ತಿರುವು: 'ಇದರ ಹಿಂದೆ ಇರುವುದು ಇರಾನ್​ ಕೈವಾಡ'; ಅಮೆರಿಕ ಅಧ್ಯಕ್ಷ​ ಟ್ರಂಪ್​ ಶಂಕೆ! Donald Trump

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಮೇಲೆ ನಡೆದ ದಾಳಿ ಹಿಂದೆ ಇರಾನ್ ಕೈವಾಡವಿರಬಹುದು ಎಂದು ಟ್ರಂಪ್ ಶಂಕೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಪೈಲಟ್ ಸಾಹಸದ ಸಂಪೂರ್ಣ ಮಾಹಿತಿ ಇಲ್ಲಿದೆ.
The attack and attempted tragedy aboard the Flydubai flight; the heroism of Indian Captain Smith Machachar and Donald Trump's statement.
ಫ್ಲೈದುಬೈ ವಿಮಾನದ ಮೇಲೆ ನಡೆದ ಹಲ್ಲೆ ಮತ್ತು ದುರಂತ ಯತ್ನ. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸ ಹಾಗೂ ಡೊನಾಲ್ಡ್ ಟ್ರಂಪ್ ಹೇಳಿಕೆ.
Published on: 

ವಾಷಿಂಗ್ಟನ್​​: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' (flydubai FZ1073) ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ವಿಮಾನದಲ್ಲೇ ಸಹ-ಪೈಲಟ್‌ನಿಂದ ನಡೆದ ಭೀಕರ ದಾಳಿಯನ್ನು ಮೆಟ್ಟಿ ನಿಂತು, ನೂರಾರು ಜೀವಗಳನ್ನು ಉಳಿಸಿದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚಾಚಾರ್ (Smit Machchhar) ಅವರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಈ ಘಟನೆಗೂ ಇರಾನ್‌ಗೂ ನಂಟಿರಬಹುದು ಎಂಬ ಸ್ಫೋಟಕ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

ಟ್ರಂಪ್ ಹೇಳಿದ್ದೇನು?

ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, ದಾಳಿಕೋರನಿಗೂ ಇರಾನ್‌ಗೂ ನೇರ ಸಂಬಂಧವಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಕುರಿತು ತನಿಖೆ ನಡೆಯುತ್ತಿದ್ದು, ನಮಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ಇರಾನ್​ ಕೈವಾಡ ಇರುವುದು ನಿಜ ಎಂದಿದ್ದಾರೆ.

ಸಹ-ಪೈಲಟ್‌ಗೆ ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗಳ ಜತೆ ನಂಟು ಇರಬಹುದೇ ಅಥವಾ ಆತ ಉಗ್ರಗಾಮಿ ಸಿದ್ಧಾಂತಕ್ಕೆ ಪ್ರೇರೇಪಿತನಾಗಿದ್ದನೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, "ಹೌದು, ಇದರ ಸಾಧ್ಯತೆ ಕೂಡ ದಟ್ಟವಾಗಿದೆ. ನಾನು ಈ ತನಿಖೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಿ ಸತ್ಯಾಂಶವನ್ನು ಜಗತ್ತಿನ ಮುಂದೆ ತೆರಲಿಡದಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

Also Read
ವಿಮಾನ ಕುಸಿಯುತ್ತಿತ್ತು, ಕ್ಯಾಪ್ಟನ್​ ತಲೆ ಸೀಳಿತ್ತು, ಮೈತುಂಬಾ ಗಾಯವಾಗಿತ್ತು: ಫ್ಲೈದುಬೈ ವಿಮಾನದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ ವೈದ್ಯ! Fly dubai Flight
The attack and attempted tragedy aboard the Flydubai flight; the heroism of Indian Captain Smith Machachar and Donald Trump's statement.

ಪ್ರಾಣಾಪಾಯದಿಂದ ಪಾರು ಮಾಡಿದ ಭಾರತೀಯ ಕ್ಯಾಪ್ಟನ್

ಬುಧವಾರ ದುಬೈನಿಂದ ಹೊರಟಿದ್ದ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚಾಚಾರ್ ಮೇಲೆ ಸಹ-ಪೈಲಟ್ ಹಠಾತ್ ದಾಳಿ ನಡೆಸಿ, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದನು. ತೀವ್ರವಾಗಿ ಗಾಯಗೊಂಡು, ರಕ್ತಸಿಕ್ತರಾಗಿದ್ದರೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರ ಸಹಾಯ ಕೋರಿದರು. ತಕ್ಷಣವೇ ಎಚ್ಚೆತ್ತ ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಇತರೆ ಸಿಬ್ಬಂದಿ ದುಷ್ಕರ್ಮಿಯನ್ನು ಹಿಡಿದು ಕಟ್ಟಿಹಾಕಿದರು.

ಬಳಿಕ ಮೀಸಲು ಪೈಲಟ್‌ಗಳು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಸಮಯೋಚಿತವಾಗಿ ವರ್ತಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಕ್ಯಾಪ್ಟನ್ ಸ್ಮಿತ್ ಅವರನ್ನು ವಿಶ್ವ ನಾಯಕರು ಕೊಂಡಾಡುತ್ತಿದ್ದಾರೆ.

ನೆತನ್ಯಾಹು ಹೇಳಿದ್ದೇನು?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಆ ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿದ್ದ ಎಂಬುದಕ್ಕೆ ಆತನ ವೈಯಕ್ತಿಕ ಮಾಹಿತಿಯಿಂದ ಸಾಕ್ಷ್ಯ ಸಿಕ್ಕಿದೆ ಎಂದಿದ್ದಾರೆ. ಆದರೆ, ಆತನಿಗೆ ನೇರವಾಗಿ ಇರಾನ್ ಅಥವಾ ಬೇರೆ ಯಾವುದೇ ದೇಶದ ಬೆಂಬಲವಿತ್ತೇ ಎಂಬುದನ್ನು ಖಚಿತಪಡಿಸಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಒಮನ್ ಮೂಲದ ಆ ಸಹ-ಪೈಲಟ್ ವಿಮಾನವನ್ನು ಏಕೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದನು ಮತ್ತು ಈ ಕೃತ್ಯದ ಹಿಂದೆ ದೊಡ್ಡ ಭಯೋತ್ಪಾದಕ ಜಾಲವಿದೆಯೇ ಎಂಬುದರ ಪತ್ತೆಗೆ ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಅಮೆರಿಕದ ತನಿಖಾಧಿಕಾರಿಗಳು ತೀವ್ರ ತನಿಖೆ ಮುಂದುವರೆಸಿದ್ದಾರೆ, (ಏಜೆನ್ಸೀಸ್​).

Related Stories

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net