ವಾಷಿಂಗ್ಟನ್: ಇಡೀ ಜಗತ್ತೇ ಮತ್ತೊಂದು ಭೀಕರ ಮಹಾಯುದ್ಧದ ಭೀತಿಯಲ್ಲಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಾತ್ರ ಮಧ್ಯಪ್ರಾಚ್ಯದ ಸಂಪೂರ್ಣ ಕಂಟ್ರೋಲ್ ತಮ್ಮ ಕೈಯಲ್ಲೇ ಇದೆ ಎಂಬಂತೆ ಅತಿಯಾದ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ. ಇರಾನ್ ವಿರುದ್ಧದ ಯುದ್ಧವನ್ನು ಶಾಶ್ವತವಾಗಿ ಕೊನೆಗಾಣಿಸಲು ರಾಜತಾಂತ್ರಿಕತೆಗೆ ಒಂದು ಕೊನೆಯ ಅವಕಾಶ ನೀಡಿದ ಬೆನ್ನಲ್ಲೇ ಸುದ್ದಿಗಾರರ ಮುಂದೆ ನಿಂತ ಟ್ರಂಪ್, ಇರಾನ್ ವಿಷಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನಾನು ಏನು ಹೇಳುತ್ತೇನೋ ಅದನ್ನೇ ಮಾಡುತ್ತಾರೆ ಎಂದು ಹೇಳಿದ್ದಾರೆ.