ಇರಾನ್ ಯುದ್ಧದಲ್ಲಿ ಅಮೆರಿಕಗೆ ಗರ್ವಭಂಗ! ಅತ್ಯಾಧುನಿಕ ಎಫ್-35 ಸೇರಿ ಬರೋಬ್ಬರಿ 42 ಯುದ್ಧ ವಿಮಾನಗಳು ಉಡೀಸ್! ನಲುಗಿದ ಜಗತ್ತು! US aircraft shot down Iran

ಇರಾನ್ ಯುದ್ಧದಲ್ಲಿ ಅಮೆರಿಕಗೆ ಗರ್ವಭಂಗ! ಅತ್ಯಾಧುನಿಕ ಎಫ್-35 ಸೇರಿ ಬರೋಬ್ಬರಿ 42 ಯುದ್ಧ ವಿಮಾನಗಳು ಉಡೀಸ್! ನಲುಗಿದ ಜಗತ್ತು!
ಇರಾನ್ ಯುದ್ಧದಲ್ಲಿ ಅಮೆರಿಕಗೆ ಗರ್ವಭಂಗ! ಅತ್ಯಾಧುನಿಕ ಎಫ್-35 ಸೇರಿ ಬರೋಬ್ಬರಿ 42 ಯುದ್ಧ ವಿಮಾನಗಳು ಉಡೀಸ್! ನಲುಗಿದ ಜಗತ್ತು!
Published on
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗಷ್ಟೇ ನಡೆದು ಹೋದ ಭೀಕರ ಇರಾನ್ ಯುದ್ಧದಲ್ಲಿ ಜಗತ್ತಿನ ಮಹಾಶಕ್ತಿ ಅಮೆರಿಕಕ್ಕೆ(US aircraft shot down Iran) ಬಿಗ್ ಶಾಕ್ ಎದುರಾಗಿದೆ. ಇರಾನ್ ಸೇನೆಯ ವಾಯು ರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿ ದಾಳಿಗಳಿಗೆ ಅಮೆರಿಕದ ಹೆಮ್ಮೆಯ ಎಫ್-35, ಎಫ್-15E ಯುದ್ಧ ವಿಮಾನಗಳು ಹಾಗೂ ಅತ್ಯಾಧುನಿಕ ಎಂಕ್ಯೂ-9 ರೀಪರ್ ಡ್ರೋನ್‌ಗಳು ಸೇರಿದಂತೆ ಬರೋಬ್ಬರಿ 42 ವಾಯುಪಡೆ ವಿಮಾನಗಳು ಸಂಪೂರ್ಣ ಧ್ವಂಸವಾಗಿವೆ.
ಈ ಬಗ್ಗೆ ಅಮೆರಿಕದ ಸಂಸತ್ತಿಗೆ ನೀತಿ ಮತ್ತು ಕಾನೂನು ವಿಶ್ಲೇಷಣೆ ನೀಡುವ ಅಧಿಕೃತ ಸಂಸ್ಥೆಯಾದ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್' (CRS) ಸಿದ್ಧಪಡಿಸಿರುವ ರಹಸ್ಯ ವರದಿಯಿಂದ ಈ ಆಘಾತಕಾರಿ ಸತ್ಯ ಈಗ ಜಾಗತಿಕವಾಗಿ ಬಹಿರಂಗವಾಗಿದೆ.
ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಆರಂಭವಾದ ಈ ಭೀಕರ ಯುದ್ಧ, ಈಗ ಅಮೆರಿಕದ ಮಿಲಿಟರಿ ಶಕ್ತಿಗೆ ದೊಡ್ಡ ಹೊಡೆತ ನೀಡಿದೆ.

ಆಪರೇಷನ್ ಎಪಿಕ್ ಫ್ಯೂರಿಗೆ ಬರೋಬ್ಬರಿ 29 ಬಿಲಿಯನ್ ಡಾಲರ್ ಭಸ್ಮ; ಪೆಂಟಗನ್ ನಡುಕ!

ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಛೇರಿ ಪೆಂಟಗನ್ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗೆ ಆಪರೇಷನ್ ಎಪಿಕ್ ಫ್ಯೂರಿ ಎಂದು ಹೆಸರಿಟ್ಟಿತ್ತು. ಪೆಂಟಗನ್ ಹಣಕಾಸು ಮುಖ್ಯಸ್ಥ ಜೂಲ್ಸ್ ಹರ್ಸ್ಟ್ III ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಇರಾನ್ ವಿರುದ್ಧದ ಈ ಯುದ್ಧದ ವೆಚ್ಚ ಈಗಾಗಲೇ ಬರೋಬ್ಬರಿ 29 ಬಿಲಿಯನ್ ಯುಎಸ್ ಡಾಲರ್ (ಸುಮಾರು 2.4 ಲಕ್ಷ ಕೋಟಿ ರೂಪಾಯಿಗೂ ಅಧಿಕ) ದಾಟಿದೆ.
ಯುದ್ಧದಲ್ಲಿ ಧ್ವಂಸಗೊಂಡಿರುವ ಮತ್ತು ತೀವ್ರವಾಗಿ ಹಾನಿಗೊಳಗಾಗಿರುವ ಅತ್ಯಾಧುನಿಕ ಯುದ್ಧ ವಿಮಾನಗಳ ದುರಸ್ತಿ ಹಾಗೂ ಹೊಸ ವಿಮಾನಗಳ ಮರುಸ್ಥಾಪನೆಯ ವೆಚ್ಚ ಹಠಾತ್ ಏರಿಕೆಯಾಗಿರುವುದೇ ಅಮೆರಿಕದ ಮಿಲಿಟರಿ ಬಜೆಟ್‌ಗೆ ಇಷ್ಟು ದೊಡ್ಡ ಹೊಡೆತ ಬೀಳಲು ಮುಖ್ಯ ಕಾರಣ ಎಂದು ಪೆಂಟಗನ್ ಒಪ್ಪಿಕೊಂಡಿದೆ. ಯುದ್ಧದ ತೀವ್ರತೆಯ ಕಾರಣದಿಂದಾಗಿ ಈ ನಷ್ಟದ ಅಂಕಿ-ಅಂಶಗಳು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಿಆರ್‌ಎಸ್ ವರದಿ ಎಚ್ಚರಿಸಿದೆ.

ಇರಾನ್ ದಾಳಿಗೆ ಕರಗಿ ಹೋದ ಅಮೆರಿಕದ ವಾಯುಪಡೆ ಕೋಟೆ!

ಅಮೆರಿಕದ ಸೆಂಟ್ರಲ್ ಕಮಾಂಡ್ ಮತ್ತು ರಕ್ಷಣಾ ಇಲಾಖೆಯ ಹೇಳಿಕೆಗಳನ್ನು ಪರಿಶೀಲಿಸಿ ಸಿಆರ್‌ಎಸ್ ಸಿದ್ಧಪಡಿಸಿರುವ ವರದಿಯಲ್ಲಿ ಧ್ವಂಸಗೊಂಡಿರುವ ವಿಮಾನಗಳ ಪ್ರಮುಖ ಪಟ್ಟಿ ಇಲ್ಲಿದೆ.
ಎಫ್-35ಎ ಲೈಟ್ನಿಂಗ್ II: ಜಗತ್ತಿನ ಅತ್ಯಂತ ರಹಸ್ಯ ಹಾಗೂ ಅಜೇಯ ಎನ್ನಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 1 ಸ್ಟೆಲ್ತ್ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ.
ಎಫ್-15ಇ ಸ್ಟ್ರೈಕ್ ಈಗಲ್ (F-15E): ಅಮೆರಿಕದ ಅತ್ಯಂತ ಆಕ್ರಮಣಕಾರಿ 4 ಪ್ರಮುಖ ಫೈಟರ್ ಜೆಟ್‌ಗಳು ಭಸ್ಮವಾಗಿವೆ.
ಎಂಕ್ಯೂ-9 ರೀಪರ್ ಡ್ರೋನ್‌ಗಳು (MQ-9 Reaper): ಅಮೆರಿಕ ಸೈನ್ಯದ ಕಣ್ಣು ಎನಿಸಿಕೊಂಡಿದ್ದ ಬರೋಬ್ಬರಿ ೨೪ ಅತ್ಯಾಧುನಿಕ ಸಶಸ್ತ್ರ ಡ್ರೋನ್‌ಗಳನ್ನು ಇರಾನ್ ವಾಯು ರಕ್ಷಣಾ ವ್ಯವಸ್ಥೆ ಧೂಳೀಪಟ ಮಾಡಿದೆ.
ಇತರ ಯುದ್ಧ ವಿಮಾನಗಳು: 1 ಎ-10 ಥಂಡರ್‌ಬೋಲ್ಟ್ ನೆಲದ ಮೇಲಿನ ದಾಳಿ ವಿಮಾನ, 1 ಇ-೩ ಸೆಂಟ್ರಿ ವಾರ್ನಿಂಗ್ ವಿಮಾನ (AWACS), 2 ಸ್ಪೆಷಲ್ ಆಪರೇಷನ್ ವಿಮಾನಗಳು ಮತ್ತು 1 ಯುದ್ಧ ಹೆಲಿಕಾಪ್ಟರ್ ಸಂಪೂರ್ಣ ನಾಶವಾಗಿವೆ.

ಟ್ರಂಪ್ ಮತ್ತೆ ಯುದ್ಧಕ್ಕೆ ಬಂದರೆ ಇನ್ನೂ ಭೀಕರ ಸರ್ಪ್ರೈಸ್ ಕಾದಿದೆ! ಇರಾನ್ ಖಡಕ್ ವಾರ್ನಿಂಗ್!

ಅಮೆರಿಕಕ್ಕೆ ಆಗಿರುವ ಈ ಭೀಕರ ನಷ್ಟದ ಸಿಆರ್‌ಎಸ್ ವರದಿಯನ್ನು ಇರಾನ್‌ನ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಜಾಗತಿಕವಾಗಿ ಅಮೆರಿಕದ ವಾಯುಪಡೆಯ ವೈಫಲ್ಯವನ್ನು ಬಯಲಿಗೆಳೆದಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕದನ ವಿರಾಮ ಘೋಷಣೆಯಾಗುವ ಮುನ್ನ ನಡೆದ ಎರಡು ತಿಂಗಳ ಭೀಕರ ಯುದ್ಧದಿಂದ ಇರಾನ್ ಸೈನ್ಯವು ಅಮೆರಿಕದ ಯುದ್ಧ ತಂತ್ರಗಳ ಬಗ್ಗೆ ಅಪಾರ ಜ್ಞಾನ ಮತ್ತು ಅನುಭವವನ್ನು ಪಡೆದುಕೊಂಡಿದೆ ಎಂದು ಅಬ್ಬಾಸ್​ ಹೇಳಿದ್ದಾರೆ.
ಇರಾನ್ ಮೇಲಿನ ಯುದ್ಧದ ತಿಂಗಳುಗಳ ನಂತರ, ಅಮೆರಿಕದ ಸಂಸತ್ತೇ ಕೋಟ್ಯಂತರ ಡಾಲರ್ ಮೌಲ್ಯದ 40ಕ್ಕೂ ಹೆಚ್ಚು ವಿಮಾನಗಳ ನಷ್ಟವನ್ನು ಒಪ್ಪಿಕೊಂಡಿದೆ. ಇಡೀ ವಿಶ್ವದಲ್ಲೇ ಅಮೆರಿಕ ಹೆಮ್ಮೆ ಪಡುವ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಕೀರ್ತಿ ನಮ್ಮ ಸಶಸ್ತ್ರ ಪಡೆಗಳಿಗೆ ಸಂದಿದೆ. ಈ ಯುದ್ಧದಿಂದ ನಾವು ಕಲಿತ ಪಾಠಗಳೊಂದಿಗೆ, ಒಂದು ವೇಳೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್ ವಿರುದ್ಧ ಮಿಲಿಟರಿ ಸಾಹಸಕ್ಕೆ ಕೈಹಾಕಿದರೆ, ಅಮೆರಿಕ ಸೇನೆಗೆ ಇದಕ್ಕಿಂತಲೂ ಭೀಕರವಾದ ಹಲವು ಆಘಾತಕಾರಿ ಸರ್ಪ್ರೈಸ್‌ಗಳು ಕಾಯುತ್ತಿವೆ ಎಂದು ಅರಾಗ್ಚಿ ಬಹಿರಂಗವಾಗಿ ಎಚ್ಚರಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net