ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಲಿಕ್ ಈ ಬಗ್ಗೆ ಮಾತನಾಡಿ, ಈ ಬಿಕ್ಕಟ್ಟು ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ನಮಗೇ ತಿಳಿಯುತ್ತಿಲ್ಲ. ನಮ್ಮ ಬಳಿ ತೈಲ ಸಂಗ್ರಹವಿದೆಯಾದರೂ, ಜಾಗತಿಕವಾಗಿ ಬೆಲೆಗಳು ರಾಕೆಟ್ ವೇಗದಲ್ಲಿ ಏರುತ್ತಿವೆ. ಪೂರೈಕೆ ಸರಪಳಿ ಕಡಿದುಹೋಗದಂತೆ ನೋಡಿಕೊಳ್ಳಲು ನಾವು ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.