CNN ವರದಿ ಮಾಡಿರುವ ಪ್ರಕಾರ, ಜೋರ್ಡಾನ್ನಲ್ಲಿರುವ ಅಮೆರಿಕದ ಪ್ರಮುಖ ಮಿಲಿಟರಿ ನೆಲೆ ಮುವಾಫಕ್ ಸಾಲ್ಟಿ ಏರ್ ಬೇಸ್ ಮೇಲೆ ಇರಾನ್ ಫೆಬ್ರವರಿ 28 ಮತ್ತು ಮಾರ್ಚ್ 3 ರಂದು ಕ್ಷಿಪಣಿ ದಾಳಿ ನಡೆಸಿತ್ತು. ಆರಂಭದಲ್ಲಿ ಅಮೆರಿಕ ಈ ದಾಳಿಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿಕೊಂಡಿತ್ತಾದರೂ, ಈಗ ಹೊರಬಂದಿರುವ ವಾಣಿಜ್ಯ ಉಪಗ್ರಹ ಚಿತ್ರಗಳು ಭಿನ್ನವಾದ ಕಥೆಯನ್ನು ಹೇಳುತ್ತಿವೆ.