ತನ್ನ ಮರಿಯ ಮೃತದೇಹವನ್ನು ಹೊತ್ತು 6 ದಿನಗಳಿಂದ ಕಣ್ಣೀರಿಡುತ್ತಾ ಸಮುದ್ರದಲ್ಲಿ ಈಜುತ್ತಿರುವ ತಾಯಿ ಡಾಲ್ಫಿನ್! ವಿಡಿಯೋ ವೈರಲ್​...Mother Dolphin

ತನ್ನ ಮರಿಯ ಮೃತದೇಹವನ್ನು ಹೊತ್ತು 6 ದಿನಗಳಿಂದ ಕಣ್ಣೀರಿಡುತ್ತಾ ಸಮುದ್ರದಲ್ಲಿ ಈಜುತ್ತಿರುವ ತಾಯಿ ಡಾಲ್ಫಿನ್! ವಿಡಿಯೋ ವೈರಲ್​...Mother Dolphin
ತನ್ನ ಮರಿಯ ಮೃತದೇಹವನ್ನು ಹೊತ್ತು 6 ದಿನಗಳಿಂದ ಕಣ್ಣೀರಿಡುತ್ತಾ ಸಮುದ್ರದಲ್ಲಿ ಈಜುತ್ತಿರುವ ತಾಯಿ ಡಾಲ್ಫಿನ್! ವಿಡಿಯೋ ವೈರಲ್​...Mother Dolphin
Published on

ಪ್ರಮುಖ ಮುಖ್ಯಾಂಶಗಳು

  • ಮೃತ ಮಗುವಿನ ದೇಹ ಹೊತ್ತು ಆರು ದಿನಗಳಿಂದ ಸಮುದ್ರದಲ್ಲಿ ಈಜುತ್ತಿರುವ ತಾಯಿ ಡಾಲ್ಫಿನ್
  • ಐದನೇ ಮರಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ತಾಯಿ ಡಾಲ್ಫಿನ್ ವಿಡಿಯೋ ವೈರಲ್
  • ಭಾವನೆಗಳು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾದ ದೃಶ್ಯ
  • ನಿರ್ಜೀವ ಮಗುವನ್ನು ಅಗಲಲಾರದೆ ಒಂಟಿ ಹೋರಾಟ ನಡೆಸುತ್ತಿರುವ ತಾಯಿ ಡಾಲ್ಫಿನ್
Mother Dolphin : ಮಕ್ಕಳ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಈ ಭೂಮಿ ಮೇಲೆ ಯಾವ ತಾಯಿಗೂ ಇರುವುದಿಲ್ಲ, ಅದು ಮನುಷ್ಯನಾಗಲಿ ಅಥವಾ ಪ್ರಾಣಿಯಾಗಲಿ. ಇದಕ್ಕೆ ಸಾಕ್ಷಿಯೆಂಬಂತೆ ಹಿಂದೂ ಮಹಾಸಾಗರದಲ್ಲಿ ತಾಯಿ ಡಾಲ್ಫಿನ್​ ಒಂದು ತನ್ನ ನಿರ್ಜೀವ ಮಗುವನ್ನು ಅಗಲಲಾರದೆ, ಕಳೆದ 6 ದಿನಗಳಿಂದ ಅದರ ಮೃತದೇಹವನ್ನು ಹೊತ್ತು, ಕಣ್ಣೀರಿನಿಂದ ಈಜುತ್ತಾ ಸಾಗುತ್ತಿರುವ ಹೃದಯ ವಿದ್ರಾವಕ ದೃಶ್ಯವು ಇಡೀ ಸಾಮಾಜಿಕ ಜಾಲತಾಣವನ್ನು ದುಃಖಕ್ಕೆ ದೂಡಿದ್ದು, ಮೌನವಾಗಿಯೇ ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆ ಮಾಡುತ್ತಿದೆ.
ಕೇವಲ ಎರಡು ವಾರಗಳಷ್ಟೇ ಹಸುಗೂಸಾಗಿದ್ದ ತನ್ನ ಮಗುವನ್ನು ಕಳೆದುಕೊಂಡು ದುಃಖದಲ್ಲಿರುವ ತಾಯಿ ಡಾಲ್ಫಿನ್​ ಫ್ರೇಜಿಲ್, ಮಗುವಿನ ಮೃತದೇಹದೊಂದಿಗೆ ಕಳೆದ ಆರು ದಿನಗಳಿಂದ ಹಿಂದೂ ಮಹಾಸಾಗರದಲ್ಲಿ ನಿರಂತರವಾಗಿ ಈಜುತ್ತಲೇ ಇದೆ. ಮಗುವಿನ ಸಾವಿನಿಂದ ಜರ್ಝರಿತವಾಗಿರುವ ಈ ತಾಯಿ ಡಾಲ್ಫಿನ್ ತನ್ನ ಐದನೇ ಮಗುವಿನ ವಿಯೋಗದ ನೋವನ್ನು ಅನುಭವಿಸುತ್ತಿದ್ದು, ಸಂಶೋಧಕರ ಪ್ರಕಾರ ಈ ಹಿಂದೆ ಈಕೆಯ ನಾಲ್ಕು ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವಿಗೀಡಾದವು.
ತಾಯಿಯ ಈ ಒಂಟಿ ಹೋರಾಟ ಹಾಗೂ ಶೋಕದಲ್ಲಿ ಇತರೆ ಡಾಲ್ಫಿನ್‌ಗಳು ಕೂಡ ಜೊತೆಯಾಗಿ ಈಜುತ್ತಾ ತಮ್ಮ ಒಡನಾಡಿಯ ನೋವನ್ನು ಹಂಚಿಕೊಳ್ಳುತ್ತಿವೆ. ಪ್ರಾಣಿಲೋಕದಲ್ಲಿ ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳು ತಮ್ಮ ಮರಿಗಳು ಸತ್ತ ಮೇಲೂ ಅವುಗಳನ್ನು ದಿನಗಳವರೆಗೆ ಜತೆಯಲ್ಲಿ ಹೊತ್ತುಕೊಂಡು ಹೋಗುವುದನ್ನು ಸಂಶೋಧಕರು ಗಮನಿಸಿದ್ದು, ಇದು ಮನುಷ್ಯರ ಭಾವನೆಗಳಷ್ಟೇ ತೀವ್ರವಾದ ದುಃಖದ ಸಂಕೇತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಈ ವಿಡಿಯೋಗೆ ನೆಟಿಗರಿಂದ ಸಾಕಷ್ಟು ಭಾವನಾತ್ಮಕ ಕಾಮೆಂಟ್‌ಗಳು ಹರಿದುಬರುತ್ತಿವೆ. ಭಾವನೆಗಳು ಮತ್ತು ಪ್ರೀತಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ ಎಂದು ಜನ ಕೊಂಡಾಡುತ್ತಿದ್ದಾರೆ.
ತಮ್ಮ ಜೊತೆಗಾರನ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ಈ ಡಾಲ್ಫಿನ್‌ಗಳ ನಡವಳಿಕೆ ಮನುಷ್ಯರಿಗೂ ಒಂದು ದೊಡ್ಡ ಪಾಠವಾಗಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಈ ಹೃದಯ ವಿದ್ರಾವಕ ದೃಶ್ಯವನ್ನು ನೋಡಿದ ಪ್ರತಿಯೊಬ್ಬರ ಕಣ್ಣಲ್ಲೂ ಅರಿವಿಲ್ಲದಂತೆ ನೀರುತುಂಬಿಕೊಳ್ಳುತ್ತದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net