ಬಲೂಚಿಸ್ತಾನಕ್ಕೆ ಔಷಧ-ಆಹಾರ ತಡೆ: ಆಗಸ್ಟ್​ 11 ಕ್ಕೆ ಸ್ವಾತಂತ್ರ ದಿನ ಘೋಷಣೆ; ಮಿಲಿಟರಿ ಕಾರ್ಯಾಚರಣೆಗೆ ಮುಂದಾದ ಪಾಕ್​? Balochistan Independence

ಬಲೂಚಿಸ್ತಾನಕ್ಕೆ ಆಹಾರ ಮತ್ತು ಔಷಧಿ ಪೂರೈಕೆ ತಡೆ
ಬಲೂಚಿಸ್ತಾನಕ್ಕೆ ಆಹಾರ ಮತ್ತು ಔಷಧಿ ಪೂರೈಕೆ ತಡೆ
Published on

ಪ್ರಮುಖ ಮುಖ್ಯಾಂಶಗಳು

  • ಬಲೂಚಿಸ್ತಾನಕ್ಕೆ ಆಹಾರ ಮತ್ತು ಔಷಧಿ ಪೂರೈಕೆ ತಡೆ
  • ಆಗಸ್ಟ್ 11 ರಂದು ಸ್ವತಂತ್ರ ದಿನ ಘೋಷಣೆ ಬೆನ್ನಲ್ಲೇ ಬಲೂಚಿಸ್ತಾನದಲ್ಲಿ ತೀವ್ರಗೊಂಡ ಬಿಕ್ಕಟ್ಟು
  • ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ಸಾಧ್ಯತೆ
ಇಸ್ಲಾಮಾಬಾದ್​: ಪಾಕಿಸ್ತಾನ ಹಾಗೂ ಬಲೂಚಿಸ್ತಾನದ ನಡುವಿನ ಬಿಕ್ಕಟ್ಟು ದಿನಕಳೆದಂತೆ ಬಿಗಡಾಯಿಸುತ್ತಿದ್ದು, ಬಲೂಚಿಸ್ತಾನ ಸ್ವಾತಂತ್ರ (Balochistan Independence) ಘೋಷಿಸಿಕೊಂಡ ಹಿನ್ನಲೆಯಲ್ಲಿ ಇಸ್ಲಾಮಾಬಾದ್​​ನಲ್ಲಿ ಭಾರಿ ಸೈನ್ಯದ ಜಮಾವಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಬಲೂಚಿಸ್ತಾನದ ಜನ ಆರೋಪಿಸುತ್ತಿರುವಂತೆ, ಕಳೆದ ಕೆಲ ದಿನಗಳಿಂದ ಬಲೂಚಿಸ್ತಾನ್​ ಹಾಗೂ ಪಾಕಿಸ್ತಾನ್​ ಗಡೆಯಲ್ಲಿರುವ ರಸ್ತೆಗಳನ್ನು ಬ್ಲಾಕ್​ ಮಾಡಲಾಗುತ್ತಿದೆ, ಹಾಗೆಯೇ ನಮ್ಮ ಪ್ರಾಂತ್ಯಕ್ಕೆ ಸಾಗಣೆಯಾಗುವ ವೈದ್ಯಕೀಯ, ದಿನಸಿ ಸೇರಿದಂರೆ ಅಗತ್ಯ ವಸ್ತುಗಳು ಬಲೂಚಿಸ್ತಾನವನ್ನು ತಲುಪದಂತೆ ಪಾಕ್​ ಸೇನೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ನುಷ್ಕಿಯನ್ನು ಜೈಲನ್ನಾಗಿ ಪರಿವರ್ತಿಸಿದ್ದಾರೆ!

ಪಾಕಿಸ್ತಾನ್​ ಹಾಗೂ ಬಲೂಚಿಸ್ತಾನ್​ಗೆ ಗಡಿ ಜಿಲ್ಲೆಯಾಗಿರುವ ನುಷ್ಕಿಯಲ್ಲಿ ಪಾಕ್​ ಸೇನೆ ಬೀಡುಬಿಟ್ಟಿದೆ. ಹಾಗೆಯೇ ನುಷ್ಕಿಯನ್ನು ಒಂದು ರೀತಿಯಲ್ಲಿ ಬಲೂಚ್​​ ಜನರನ್ನು ಬಂಧಿಸಲು ಮೀಸಲಿರುವ ಜೈಲಿನಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆಂದು ಎನ್ನುವುದು ಸ್ಥಳೀಯ ಜನರ ಆರೋಪವಾಗಿದೆ.

ಪಾಕಿಸ್ತಾನದ ರೇಂಜರ್​ಗಳು, ನುಷ್ಕಿಯನ್ನು ದಾಟಿ ಯಾವುದೇ ವಾಹನ ಬಲೂಚಿಸ್ತಾನವನ್ನು ತಲುಪದಂತೆ ನೋಡಿಕೊಳ್ಳುತ್ತಿದ್ದು, ನಮ್ಮ ಜನರಿಗೆ ಸಿಗಬೇಕಿದ್ದ ಆಹಾರ ಪದಾರ್ಥಗಳು ಹಾಗೂ ವೈದ್ಯಕೀಯ ಸೌಲಭ್ಯಗಳು ತಮಗೆ ದೊರೆಯುತ್ತಿಲ್ಲ ಎನ್ನುವುದು ಬಲೂಚ್​​ಗಳ ಆರೋಪವಾಗಿದೆ.


ಆಗಸ್ಟ್​​ 11 ಕ್ಕೆ ಸ್ವಾತಂತ್ಯ ದಿನಾಚರಣೆ!

ಇಸ್ಲಾಮಾಬಾದ್ ಆಡಳಿತ ತಮ್ಮನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಿಕೊಳ್ಳುತ್ತದೆ, ನಮಗೆ ದೇಶದ ಯಾವುದೇ ರಾಜಕೀಯ ಪ್ರಾತಿನಿಧ್ಯವಿಲ್ಲ, ತಿನ್ನಲು ಊಟವಿಲ್ಲ, ಮಾಡಲು ಕೆಲಸವಿಲ್ಲವೆಂದು ರೊಚ್ಚಿಗೆದ್ದಿರುವ ಬಲೂಚಿಸ್ತಾನ, ಆಗಸ್ಟ್​​ 11 ರಂದು ಪಾಕಿಸ್ತಾನದಿಂದ ಸ್ವಾತಂತ್ರ ಪಡೆಯುವುದಾಗಿ ಘೋಷಿಸಿದ್ದು, ಅಂದು ಸ್ವಾತಂತ್ರ ದಿನಾವಚರಣೆ ಅಚರಿಸುವುದಾಗಿ ತಿಳಿಸಿದೆ.

ಈಗಾಗಲೇ, ಪಾಕಿಸ್ತಾನ ಹಾಗೂ ಬಲೂಚಿಸ್ತಾನ ನಡುವೆ ಸಾಕಷ್ಟು ಶಸ್ತ್ರ ಸಜ್ಜಿತ ಹೋರಾಟ ನಡೆದಿದ್ದು, ಆಗಸ್ಟ್​ 11 ರಂದು ಹಿಂಸಾಚಾರ ನಡೆಯವ ಸಾಧ್ಯತೆಯಿದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ವಿಶ್ವಸಂಸ್ಥೆ ಮೆಟ್ಟಿಲೇರಿದ ಬಲೂಚಿಸ್ತಾನ!

ಪಾಕಿಸ್ತಾನದ ಸೈನಿಕರು ನಮ್ಮ ನೆಲದಲ್ಲಿ ರಕ್ತಪಾತ ನಡೆಸುತ್ತಿದ್ದು, ಇಲ್ಲಿವರೆಗೆ ಸುಮಾರು 120 ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದ್ದು 800 ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದಾರೆ. ಇದು ಕೇವಲ 2025 ರಲ್ಲಿ ದೊರಕಿರುವ ದಾಖಲೆಯಾಗಿದ್ದು ಇಷ್ಟು ವರ್ಷ ಇವರು ನಮ್ಮ ಮೇಲೆ ನಡೆಸಿದ ಹಿಂಸಾಚಾರವನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಪಾಕಿಸ್ತಾನದಿಂದ ಬಿಡುಗಡೆ ಬಯಸಿದ್ದು, ನಮ್ಮ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ, ಅದನ್ನು ನೀವು ಮದ್ಯ ಪ್ರವೇಶಿಸಿ ತಡೆಯಬೇಕೆಂದು ಬಲೂಚ್​ ಜನರು ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net