

ಲಾಸಾ: ನೇಪಾಳ ಮತ್ತು ಚೀನಾ ಗಡಿಯಲ್ಲಿ ಭೀಕರ ಪ್ರವಾಹ ಬಂದು ದುರಂತ ಸಂಭವಿಸಿ ಮಾಸುವ ಮುನ್ನವೇ ಇಂದು(ಅ. 22) ಟಿಬೆಟ್ನಲ್ಲಿ ಭಾರೀ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಭಾರತೀಯ ಕಾಲಮಾನ ಸುಮಾರು 8:03 ರ ಸುಮಾರಿಗೆ ಟಿಬೆಟ್ನಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
ಚೀನಾ ಅರ್ಥ್ಕ್ವೇಕ್ ನೆಟ್ವರ್ಕ್ಸ್ ಸೆಂಟರ್ ನೀಡಿರುವ ಮಾಹಿತಿಯ ಪ್ರಕಾರ, ಉತ್ತರ ಟಿಬೆಟ್ನ ನಾಗ್ಕು ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 10.33ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು 10 ಕಿ.ಮೀ ಆಳದಲ್ಲಿತ್ತು ಎಂದು ತಿಳಿಸಿದೆ.
ಭೂಕಂಪದ ಕೇಂದ್ರಬಿಂದು ಟಿಬೆಟಿಯನ್ ರಾಜಧಾನಿ ಲಾಸಾದಿಂದ ಸುಮಾರು 400 ಕಿ.ಮೀ ದೂರದಲ್ಲಿತ್ತು. ಭೂಕಂಪದಿಂದ ಉಂಟಾದ ಸಾವುನೋವುಗಳು ಅಥವಾ ಹಾನಿಯ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ. ನೇಪಾಳ-ಚೀನಾ ಪರ್ವತಮಯ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತಗಳಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾವಿರಾರು ಜನರು ಕಾಣೆಯಾದ ಕೆಲವು ವಾರಗಳ ಈ ಭೂಕಂಪ ಸಂಭವಿಸಿದೆ (ಏಜೆನ್ಸೀಸ್).