ಥಾಯ್ಲೆಂಡ್​ನ ಫುಕೆಟ್​ನಲ್ಲಿ ಭಾರಿ ಅಗ್ನಿ ಅವಘಡ: 11 ಜನ ಸಾ*, 36ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ | Thailand

ಥಾಯ್ಲೆಂಡ್​ನ ದಕ್ಷಿಣ ಭಾಗದಲ್ಲಿರುವ ಪ್ರವಾಸಿ ದ್ವೀಪ ಫುಕೆಟ್​ನಲ್ಲಿ ಸೋಮವಾರ(ನ. 16) ಮುಂಜಾನೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 11 ಜನ ಮೃತಪಟ್ಟಿದ್ದು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್​ ವರದಿ ಮಾಡಿದೆ.
ಥಾಯ್ಲೆಂಡ್​ನ ಫುಕೆಟ್​ನಲ್ಲಿ ಭಾರಿ ಅಗ್ನಿ ಅವಘಡ: 11 ಜನ ಸಾ*, 36ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ | Thailand
Published on: 

ಫುಕೆಟ್: ಥಾಯ್ಲೆಂಡ್​ನ ದಕ್ಷಿಣ ಭಾಗದಲ್ಲಿರುವ ಪ್ರವಾಸಿ ದ್ವೀಪ ಫುಕೆಟ್​ನಲ್ಲಿ ಸೋಮವಾರ(ನ. 16) ಮುಂಜಾನೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 11 ಜನ ಮೃತಪಟ್ಟಿದ್ದು, 36ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಮುಂಜಾನೆ ಸುಮಾರು 3:17 ಗಂಟೆಗೆ ಬಾಡಿಗೆ ವಾಹನ ವ್ಯವಹಾರ ನಡೆಯುತ್ತಿದ್ದ ಕಟ್ಟಡದಲ್ಲಿ ಈ ಅವಘಡ ನಡೆದಿದೆ. ಬಳಿಕ ಪಕ್ಕದ ಹಲವು ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಿದ್ದಾರೆ ಎನ್ನಲಾಗಿದೆ.

Also Read
ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಅಗತ್ಯವಿಲ್ಲ: ಮತಗಳ್ಳತನ ಹೇಳಿಕೆ ನೀಡಿದ ಫಿಲಿಬೆಕ್​ಗೆ ಮೆಲೋನಿ ಆಪ್ತೆ ಬರ್ಗಾಮಿನಿ ತಿರುಗೇಟು | Deborah Bergamini 
ಥಾಯ್ಲೆಂಡ್​ನ ಫುಕೆಟ್​ನಲ್ಲಿ ಭಾರಿ ಅಗ್ನಿ ಅವಘಡ: 11 ಜನ ಸಾ*, 36ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ | Thailand

ಗಾಯಗೊಂಡವರ ಪೈಕಿ 15 ಮಂದಿ ಥಾಯ್ಲೆಂಡ್ ಪ್ರಜೆಗಳಾಗಿದ್ದು, ಒಬ್ಬರು ಮ್ಯಾನ್ಮಾರ್ ಪ್ರಜೆ ಆಗಿದ್ದಾರೆ. ಮೃತಪಟ್ಟವರಲ್ಲಿ ಅಥವಾ ಗಾಯಗೊಂಡವರಲ್ಲಿ ಯಾವುದೇ ಪ್ರವಾಸಿಗರು ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡ ಕಟ್ಟಡವು ಫುಕೆಟ್‌ನ ಪಶ್ಚಿಮ ಕರಾವಳಿಯಲ್ಲಿರುವ ಜನಪ್ರಿಯ 'ಪಾಟಾಂಗ್' ಕಡಲತೀರದ ಸಮೀಪ, ಪಟ್ಟಣ ಪ್ರದೇಶದಲ್ಲಿದೆ (ಏಜೆನ್ಸೀಸ್).