ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಅಗತ್ಯವಿಲ್ಲ: ಮತಗಳ್ಳತನ ಹೇಳಿಕೆ ನೀಡಿದ ಫಿಲಿಬೆಕ್​ಗೆ ಮೆಲೋನಿ ಆಪ್ತೆ ಬರ್ಗಾಮಿನಿ ತಿರುಗೇಟು | Deborah Bergamini 

ಬಿಜೆಪಿಯನ್ನು ಗುರಿಯಾಗಿಸಿಕೊಂಡು ಹೈದರಾಬಾದ್​ನಲ್ಲಿ ನಡೆದ ಭಾರತ್ ಸಮ್ಮಿಟ್​ನಲ್ಲಿ ಮತಗಳ್ಳತನ ಘೋಷಣೆ ಕೂಗಿದ ಯುರೋಪಿಯನ್ ಸಮಾಜವಾದಿ ನಾಯಕ ಜಿಯಾಕೊಮೊ ಫಿಲಿಬೆಕ್ ಅವರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಪ್ತೆ ಮತ್ತು ಶಾಸಕಿ ಡೆಬೊರಾ ಬರ್ಗಾಮಿನಿ ಟೀಕಿಸಿದ್ದು, ಭಾರತಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಅಗತ್ಯವಿಲ್ಲ: ಮತಗಳ್ಳತನ ಹೇಳಿಕೆ ನೀಡಿದ ಫಿಲಿಬೆಕ್​ಗೆ ಮೆಲೋನಿ ಆಪ್ತೆ ಬರ್ಗಾಮಿನಿ ತಿರುಗೇಟು | Deborah Bergamini 
Published on: 

ನವದೆಹಲಿ: ಬಿಜೆಪಿಯನ್ನು ಗುರಿಯಾಗಿಸಿಕೊಂಡು ಹೈದರಾಬಾದ್​ನಲ್ಲಿ ನಡೆದ ಭಾರತ್ ಸಮ್ಮಿಟ್​ನಲ್ಲಿ ಮತಗಳ್ಳತನ ಘೋಷಣೆ ಕೂಗಿದ ಯುರೋಪಿಯನ್ ಸಮಾಜವಾದಿ ನಾಯಕ ಜಿಯಾಕೊಮೊ ಫಿಲಿಬೆಕ್ ಅವರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಪ್ತೆ ಮತ್ತು ಶಾಸಕಿ ಡೆಬೊರಾ ಬರ್ಗಾಮಿನಿ ಟೀಕಿಸಿದ್ದು, ಭಾರತಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಡೆಬೊರಾ ಬರ್ಗಾಮಿನಿ, ದೇಶೀಯ ರಾಜಕೀಯ ವಿವಾದಗಳನ್ನು ಪರಿಹರಿಸಿಕೊಳ್ಳಲು ಭಾರತಕ್ಕೆ ತನ್ನದೇ ಆದ ರಾಜಕೀಯ ಸಂಸ್ಥೆಗಳು ಮತ್ತು ನ್ಯಾಯಾಂಗವಿದೆ. ವಿದೇಶಿ ರಾಜಕೀಯ ಪ್ರತಿನಿಧಿಗಳು ಸ್ನೇಹಪರ ದೇಶದ ದೇಶೀಯ ರಾಜಕೀಯ ಚರ್ಚೆಯಲ್ಲಿ ಮಧ್ಯಪ್ರವೇಶಿಸಬಾರದು ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ, ಪ್ರತಿಯೊಬ್ಬರಿಗೂ ತಮಗೆ ಸೂಕ್ತವೆನಿಸುವ ವಾದಗಳನ್ನು ಮಂಡಿಸಲು ಅಥವಾ ಆರೋಪಗಳನ್ನು ಮಾಡಲು ಸ್ವಾತಂತ್ರ್ಯವಿದೆ. ಅದಕ್ಕೆ ನನ್ನ ಬೆಂಬಲವಿದೆ. ಆದರೆ, ಸಹಜವಾಗಿಯೇ, ಅವರು ಆ ವಾದ ಅಥವಾ ಆರೋಪಗಳಿಗೆ ಸೂಕ್ತ ಆಧಾರಗಳನ್ನು ಒದಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Also Read
ದೆಹಲಿಯಲ್ಲಿಂದು ಸೋನಿಯಾ ಗಾಂಧಿ ಆತ್ಮಕಥೆ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಭಾಗಿ | Sonia Gandhi
ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಅಗತ್ಯವಿಲ್ಲ: ಮತಗಳ್ಳತನ ಹೇಳಿಕೆ ನೀಡಿದ ಫಿಲಿಬೆಕ್​ಗೆ ಮೆಲೋನಿ ಆಪ್ತೆ ಬರ್ಗಾಮಿನಿ ತಿರುಗೇಟು | Deborah Bergamini 

ಇದೇ ವೇಳೆ ಇಟಲಿ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಎತ್ತಿ ತೋರಿಸಿದ ಅವರು, ಯುರೋಪಿಯನ್ ಪ್ರತಿನಿಧಿಗಳು ಭಾರತಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡುವುದು ಸೂಕ್ತವಲ್ಲ ಮತ್ತು ಅಗತ್ಯವೂ ಇಲ್ಲ ಎಂದಿದ್ದಾರೆ.

ಡೆಬೊರಾ ಬರ್ಗಮಿನಿ ಅವರು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಬೆಂಬಲಿಸುವ ಆಡಳಿತ ಒಕ್ಕೂಟದ ಭಾಗವಾಗಿರುವ ಕೇಂದ್ರ-ಬಲಪಂಥೀಯ ರಾಜಕೀಯ ಪಕ್ಷವಾದ ಫೋರ್ಜಾ ಇಟಾಲಿಯಾ ಸದಸ್ಯೆ ಮತ್ತು ರಾಷ್ಟ್ರೀಯ ಉಪ ಕಾರ್ಯದರ್ಶಿಯಾಗಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಶೃಂಗಸಭೆ 2026 ರಲ್ಲಿ ಭಾಗವಹಿಸಿದ್ದ ಯುರೋಪಿಯನ್ ಸೋಷಿಯಲಿಸ್ಟ್‌ಗಳ ಪಕ್ಷದ (ಪಿಇಎಸ್) ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದರು. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು (ಏಜೆನ್ಸೀಸ್).