ಜರ್ಮನಿ ಮತ್ತು ಬೋಸ್ನಿಯಾ ದ್ವಿಪೌರತ್ವ ಹೊಂದಿರುವ 26 ವರ್ಷದ ವೈದ್ಯೆ ಸೆಲ್ಮಾ ಮತ್ತು ಪಾಕಿಸ್ತಾನದ ಡಿಫಾರ್ ಗ್ರಾಮದ 22 ವರ್ಷದ ಮೊಹಮ್ಮದ್ ಅಕ್ಮಲ್ ನಡುವೆ ರೋಬ್ಲಾಕ್ಸ್ ಆಟದ ಮೂಲಕ ಪರಿಚಯವಾಗಿತ್ತು. ಕಳೆದ ಐದು ತಿಂಗಳುಗಳಿಂದ ಆನ್‌ಲೈನ್‌ನಲ್ಲಿ ಇವರಿಬ್ಬರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಅಚ್ಚರಿಯ ವಿಷಯವೆಂದರೆ, ಅಕ್ಮಲ್‌ಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಸೆಲ್ಮಾ ಕಳುಹಿಸುವ ಸಂದೇಶಗಳಿಗೆ ಆತ ಕೇವಲ 'ಓಕೆ' ಎಂದು ಮಾತ್ರ ಉತ್ತರಿಸುತ್ತಿದ್ದ. ಆದರೂ ಇವರಿಬ್ಬರ ನಡುವೆ ಭಾವನಾತ್ಮಕ ಸಂಬಂಧ ಬೆಳೆದಿತ್ತು.