ಇಸ್ರೇಲ್ ಮೇಲೆ ಲೆಬನಾನ್ ಭೀಕರ ದಾಳಿ: ಹೈಫಾ ತೈಲ ಘಟಕದ ಮೇಲೆ ಮಿಸೈಲ್​ ಮಳೆ! Haifa Oil Refinery

ಇಸ್ರೇಲ್‌ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಲೆಬನಾನ್ ದಾಳಿ
ಇಸ್ರೇಲ್‌ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಲೆಬನಾನ್ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್‌ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಲೆಬನಾನ್ ಭೀಕರ ಮಿಸೈಲ್ ದಾಳಿ
  • ಇಸ್ರೇಲ್‌ಗೆ ಶೇ. 60 ರಷ್ಟು ಇಂಧನ ಪೂರೈಸುವ ಈ ಘಟಕಕ್ಕೆ ಭಾರಿ ನಷ್ಟ
  • ಮುಂದುವರಿದ ರಕ್ಷಣಾ ಕಾರ್ಯ
ಇಸ್ರೇಲ್​: ಕಳೆದೊಂದು ತಿಂಗಳಿನಿಂದ ಆರಂಭವಾದ ಮಧ್ಯಪ್ರಾಚ್ಯ ಸಂಘರ್ಷ ದಿನಕಳೆದಂತೆ ತೀವ್ರವಾಗುತ್ತಿದ್ದು ಸೋಮವಾರ (ಮಾರ್ಚ್​ 30) ಇಸ್ರೇಲ್​ನಲ್ಲಿರುವ ಹೈಫಾ ತೈಲ ಸಂಸ್ಕರಣಾಗಾರ (Haifa Oil Refinery) ದ ಮೇಲೆ ಲೆಬನಾನ್​ ದಾಳಿ ಮಾಡಿದೆ ಎಂದು ವರದಿಯಾಗಿದೆ.
ಈ ತೈಲ ಸಂಸ್ಕರಣಾಗಾರವು ಇಸ್ರೇಲ್​ನ ಉತ್ತರಕ್ಕಿರುವ ಹೈಫಾದಲ್ಲಿದ್ದು, ಇದು ಇಸ್ರೇಲ್​ನ ಪ್ರಮುಖ ತೈಲ ಸಂಸ್ಕರಣಾಗಾರದಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಇದು ಇಂದು ಲೆಬನಾನ್​ ನಡೆಸಿದ ಎರಡನೇ ದಾಳಿಯಾಗಿದ್ದು, ಈ ಮಿಸೈಲ್​ ದಾಳಿಯಲ್ಲಿ ನೂರಾರು ಜನ ಗಾಯಗೊಂಡಿದ್ದು, ಸಂಸ್ಕರಣಾಗಾರ ತೀವ್ರ ನಷ್ಟವನ್ನು ಅನುಭವಿಸಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್​ನ ಮಿಲಿಟರಿ (IDF) ನಮ್ಮ ಪಡೆಗಳು ಈಗಾಗಲೇ ಹೈಫಾದಲ್ಲಿ ಜಮಾವಣೆ ಆಗಿದೆ ಮತ್ತು ಬೆಂಕಿಯನ್ನು ನಂದಿಸುವ ಮತ್ತು ಅಲ್ಲಿರುವ ಜನರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದೆ.
ಈ ಸಂಸ್ಕರಣಾಗಾರ ಇಸ್ರೇಲ್​ಗೆ ಸರಿಸುಮಾರು ಶೇ.60 ರಷ್ಟು ತೈಲವನ್ನು ಪೂರೈತಿಸುತ್ತಿದ್ದು, ಶೇ.59 ಗ್ಯಾಸೋಲಿನ್​, ಶೇ.65 ಡೀಸೆಲ್​ ಮತ್ತು ಶೇ.52 ಜೆಟ್​ ಇಂಧನವನ್ನು ಈ ತೈಲ ಸಂಸ್ಕರಣಾ ಘಟಕ ಪೂರೈಸುತ್ತಿತ್ತು.
ಆದರೆ ಈ ದಾಳಿಯ ಕುರಿತಿ ಇಸ್ರೇಲ್​ ಆಗಲಿ ಅಥವಾ ಲೆಬನಾನ್​ ಸರ್ಕಾರ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಅಥವಾ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈಗ ಈ ತೈಲ ಸಂಸ್ಕರಣಾ ಘಟಕದ ಮೇಲಿನ ದಾಳಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದ್ದು, ಯುದ್ಧದ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net