ಸುಮ್ಮನಿರಿ, ಇಲ್ಲಾಂದ್ರೆ ಉಡಾಯಿಸಿ ಬಿಡ್ತೀವಿ! ಇರಾನ್​ ಪರ ವಾಲಿದ ಓಮನ್​; ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬೆದರಿಕೆ! Donald Trump threatens Oman

ಓಮನ್​ ದೇಶಕ್ಕೆ ಡೊನಾಲ್ಡ್​ ಟ್ರಂಪ್​ ಬೆದರಿಕೆ
ಓಮನ್​ ದೇಶಕ್ಕೆ ಡೊನಾಲ್ಡ್​ ಟ್ರಂಪ್​ ಬೆದರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ
  • ಓಮನ್​ ದೇಶಕ್ಕೆ ಡೊನಾಲ್ಡ್​ ಟ್ರಂಪ್​ ಬೆದರಿಕೆ
  • ಇರಾನ್​ ಪರ ವಾಲುತ್ತಿದ್ದ ಓಮನ್​
  • ಸುಮ್ಮನಿರಿ, ಇಲ್ಲಾಂದ್ರೆ ಉಡಾಯಿಸಿ ಬಿಡ್ತೀವಿ: ಎಂದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಾರ್ಮೋಡ ಕವಿಯುತ್ತಿದ್ದು, ಹೊರ್ಮುಜ್​ ಜಲಸಂಧಿಗೆ ಸಂಬಂಧಿಸಿದಂತೆ ಇರಾನ್​ ಜೊತೆ ಕೇವಲ ಅಮೆರಿಕ ಮಾತ್ರ ಮಾತನಾಡಲಿದೆ. ಈ ವಿಷಯದ ಬಗ್ಗೆ ಇರಾನ್​ಗೆ ಬೆಂಬಲ ಸೂಚಿಸಲು ಬಂದ ದೇಶಕ್ಕೆ ತಕ್ಕ ಪಾಠವನ್ನು ಕಲಿಸ ಬೇಕಾಗುತ್ತದೆ ಎಂದು ಡೊನಾಲ್ಡ್​​​ ಟ್ರಂಪ್​ ಓಮನ್​ ದೇಶಕ್ಕೆ ಬೆದರಿಕೆ (Donald Trump threatens Oman) ಹಾಕಿದ್ದಾರೆ.

ಸುಮ್ಮನಿರಿ ಇಲ್ಲಾಂದ್ರೆ ಉಡಾಯಿಸಿ ಬಿಡ್ತಿವಿ!

ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಓಮನ್​ ಈ ವಿಚಾರದಲ್ಲಿ ಸರಿಯಾಗಿ ವರ್ತಿಸಬೇಕು, ಇಲ್ಲದಿದ್ದರೆ ಅವರನ್ನು ಉಡಾಯಿಸಿ ಬಿಡ್ತಿವಿ ಎಂದು ಬೆದರಿಕೆ ಹಾಕಿದ್ದಾರೆ.
ಹೊರ್ಮುಜ್​ ಜಲಸಂಧಿಯನ್ನು ಇರಾನ್​ ಹಾಗೂ ಅದರ ಮಿತ್ರ ದೇಶ ಓಮನ್​ ಜಂಟಿಯಾಗಿ ನಿರ್ವಹಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಟ್ರಂಪ್​, ಅಂತಾರಾಷ್ಟ್ರೀಯ ಜಲಸಂಧಿ ಎಲ್ಲರಿಗೂ ಸಂಬಂಧ ಪಟ್ಟಿದೆ, ಓಮನ್​ ಕೂಡ ಇತರೆ ದೇಶಗಳೆಂತೆ ವರ್ತಿಸಬೇಕೆಂದು ಹೇಳಿದ್ದಾರೆ.
ಓಮನ್​ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿತ್ರರಾಷ್ಟ್ರವಾಗಿದ್ದು, ಇರಾನ್​ ನಡುವಿನ ಸಂಘರ್ಷದಲ್ಲಿ ಮಿಸೈಲ್​ ದಾಳಿಯನ್ನು ಸಹ ಎದುರಿಸಿದೆ. ಆದರೆ ಇತ್ತೀಚೆಗೆ ಇರಾನ್​ ಕಡೆ ಓಮನ್​ ವಾಲುತ್ತಿರುವ ಹಿನ್ನಲೆ ಈ ಬೆದರಿಕೆ ಅಮೆರಿಕ ಅಧ್ಯಕ್ಷರಿಂದ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರ ಮತ್ತು ಅದರ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಓಮನ್​ ದೇಶಕ್ಕೆ ತೆರಳಿದ ನಂತರ ಓಮನ್​ ಇರಾನ್​ ಪರ ಮಾತನಾಡಲು ಪ್ರಾರಂಭಿಸಿತ್ತು ಎಂಬ ವದಂತಿಯಿದೆ.
ಇರಾನ್​ ಮೇಲೆ ಅಮೆರಿಕ ದಾಳಿ!
ಗುರುವಾರ (ಮೇ.28) ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಅಮೆರಿಕ ಹೊರ್ಮುಜ್​ ಜಲಸಂಧಿ ಸಮೀಪದಲ್ಲಿರುವ ಬಂದರ್​ ಅಬ್ಬಾಸ್​ ವಿಮಾನ ನಿಲ್ದಾಣದ ಮೇಲೆ ಅಮರಿಕ ಡ್ರೋನ್​ ದಾಳಿ ನಡೆಸಿದೆ. ಹೊರ್ಮುಜ್​ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡುಗಗಳ ಮೇಲೆ ಇರಾನ್​ ದಾಳಿ ಮಾಡಿದ ಹಿನ್ನಲೆ ನಾವು ಪ್ರತೀದಾಳಿ ನಡೆಸಿದ್ದೆವೆ ಎನ್ನುವುದು ಅಮೆರಿಕದ ವಾದವಾಗಿದೆ.

ಇರಾನ್​ನಿಂದ ಪ್ರತಿದಾಳಿ!

ಇರಾನಿನ ಬಂದರ್​ ಅಬ್ಬಾಸ್​ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ ನಡೆಸಿದ ಹಿನ್ನಲೆ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ವಾಯುನೆಲೆಗಳ ಮೇಲೆ ಪ್ರತಿದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಆದರೆ ಇರಾನ್​ ಅಮೆರಿಕದ ಯಾವ ವಾಯುನೆಲೆ ಮೇಲೆ ದಾಳಿ ನಡೆಸಿದೆ ಎಂದು ಸ್ಪಷ್ಟವಾಗಿಲ್ಲ, ಆದರೆ ವದಂತಿಗಳ ಪ್ರಕಾರ ಯುಎಸ್​ನ ಮಿತ್ರ ದೇಶವಾಗಿರುವ ಕುವೈತ್​ ಮೇಲೆ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net