ಫಿಫಾ ವಿಶ್ವಕಪ್ ವೇಳೆ ಆಟಗಾರರ ಅಪಹರಣ?! ಜೂನ್ 24 ರಂದು ಮೈದಾನಕ್ಕಿಳಿಯಲಿದೆಯಂತೆ ದೈತ್ಯ ಯುಎಫ್​ಒ? Aliens

ಫಿಫಾ ವಿಶ್ವಕಪ್ ವೇಳೆ ಆಟಗಾರರ ಅಪಹರಣ?! ಜೂನ್ 24 ರಂದು ಮೈದಾನಕ್ಕಿಳಿಯಲಿದೆಯಂತೆ ದೈತ್ಯ ಯುಎಫ್​ಒ? Aliens
ಫಿಫಾ ವಿಶ್ವಕಪ್ ವೇಳೆ ಆಟಗಾರರ ಅಪಹರಣ?! ಜೂನ್ 24 ರಂದು ಮೈದಾನಕ್ಕಿಳಿಯಲಿದೆಯಂತೆ ದೈತ್ಯ ಯುಎಫ್​ಒ? Aliens
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ದೈತ್ಯ ಯುಎಫ್‌ಒ ಒಂದರ ಆಗಮನವಾಗಲಿದೆಯಂತೆ!
  • ನೂರಾರು ಜನರನ್ನು ಅಪಹರಿಸಲಿದೆ ಎಂಬ ವಿಲಕ್ಷಣ, ವಿಚಿತ್ರ ಹಾಗೂ ಭಯಾನಕ ಭವಿಷ್ಯವಾಣಿ ಇದು
  • ಬ್ರೆಜಿಲ್‌ನ ಪ್ರಸಿದ್ಧ ಜ್ಯೋತಿಷಿ ವೋ ಬಹಿಯಾನೋ ಅವರು ಈ ವಿಲಕ್ಷಣ ಭವಿಷ್ಯವಾಣಿಯನ್ನು ನುಡಿದ್ದಾರೆ
  • ಜೂನ್ 2 ರಂದು ಹರಿಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ
Aliens : ಏಲಿಯನ್​​ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಅಂದಹಾಗೆ, ಏಲಿಯನ್‌ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಏಲಿಯನ್​ಗಳ ಇರುವಿಕೆಯನ್ನೇ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್​ಒ (ಯೂನಿಫೈಡ್​ ಫ್ಲೈಯಿಂಗ್​ ಆಬ್ಜೆಕ್ಟ್​) ಎಂದು ಕರೆಯಲಾಗುತ್ತದೆ. ಈ ಯುಎಫ್​ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳಿಕೊಳ್ಳುತ್ತಿರುತ್ತಾರೆ. ಆದರೆ, ಇಂದಿಗೂ ಏಲಿಯನ್​ ಇರುವಿಕೆ ಪ್ರಶ್ನೆಯಾಗೇ ಉಳಿದಿದೆ.
ಈ ನಡುವೆ, ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ದೈತ್ಯ ಯುಎಫ್‌ಒ ಒಂದರ ಆಗಮನವಾಗಲಿದ್ದು, ಅದು ಅಲ್ಲಿ ಸೇರಿರುವ ನೂರಾರು ಜನರನ್ನು ಅಪಹರಿಸಲಿದೆ ಎಂಬ ವಿಲಕ್ಷಣ, ವಿಚಿತ್ರ ಹಾಗೂ ಭಯಾನಕ ಭವಿಷ್ಯವಾಣಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ, ಇಂತಹ ನಿಗೂಢ ಅತಿಮಾನುಷ ಶಕ್ತಿಗಳ ಕುರಿತಾದ ಊಹಾಪೋಹಗಳು ಮತ್ತು ಭವಿಷ್ಯದ ಮುನ್ಸೂಚನೆಗಳು ಇಂಟರ್ನೆಟ್ ಲೋಕದಲ್ಲಿ ಸದಾ ಕುತೂಹಲ ಹಾಗೂ ಸಂಚಲನವನ್ನು ಸೃಷ್ಟಿಸುತ್ತಿರುತ್ತವೆ.
ಬ್ರೆಜಿಲ್‌ನ ಪ್ರಸಿದ್ಧ ಮನಶ್ಶಾಸ್ತ್ರಜ್ಞೆ ಹಾಗೂ ಜ್ಯೋತಿಷಿ ವೋ ಬಹಿಯಾನೋ (ನಿಜವಾದ ಹೆಸರು ಎಲಿಸಾಂಗೆಲಾ ಡಿ ಸೋಜಾ) ಈ ವಿಲಕ್ಷಣ ಭವಿಷ್ಯವಾಣಿಯನ್ನು ನುಡಿದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 23 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಇವರು ಜೂನ್ 2 ರಂದು ಈ ಕುರಿತು ಪ್ರಕಟಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಫಿಫಾ ವಿಶ್ವಕಪ್ ವೇಳೆ ದೈತ್ಯ ಯುಎಫ್‌ಒ ಬಂದು ಜನರನ್ನು ಅಪಹರಿಸಲಿದೆ ಎಂದು ಅವರು ಹೇಳಿರುವ ಈ ಮಾತುಗಳು ಇಂಟರ್ನೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಈಡುಮಾಡಿದ್ದು, ಸದ್ಯ ಜಾಗತಿಕ ಮಟ್ಟದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ವೋ ಬಹಿಯಾನೋ ಅವರ ಈ ಭವಿಷ್ಯವಾಣಿಯ ಪ್ರಕಾರ, ಜೂನ್ 24, 2026 ರಂದು ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್‌ನಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆಯಲಿರುವ 'ಗ್ರೂಪ್ ಸಿ' ಪಂದ್ಯದ ವೇಳೆ ಈ ದೈತ್ಯ ನೌಕೆಯು ಭೂಮಿಗೆ ಇಳಿಯಲಿದ್ದು, ಅಲ್ಲಿನ ಆಟಗಾರರು ಮತ್ತು ಅಧಿಕಾರಿಗಳನ್ನು ಅಪಹರಿಸಿ ಚಂದ್ರನಿಗೆ ಕರೆದೊಯ್ಯಲಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ಆ ದಿನ ಈ ಮೈದಾನದಲ್ಲಿ ಬ್ರೆಜಿಲ್ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವೆ ಪಂದ್ಯ ನಿಗದಿಯಾಗಿದ್ದು, ಅಂದು ಮಿಯಾಮಿಯ ಆ ಕ್ರೀಡಾಂಗಣಕ್ಕೆ ಹೋಗದಂತೆ ಅವರು ಜನರಿಗೆ ಎಚ್ಚರಿಕೆ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net