ಪ್ರಸ್ತುತ ತ್ರಿಕೋನ ಸರಣಿಯಲ್ಲಿ ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ, ಶ್ರೀಲಂಕಾ 'ಎ' ವಿರುದ್ಧದ ಇಂದಿನ ಪಂದ್ಯದಲ್ಲಿ 3 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಿಡಿಸಿ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದರೂ, ಮತ್ತೊಂದು ದೊಡ್ಡ ಸಿಕ್ಸರ್ ಬಾರಿಸುವ ಧಾವಂತದಲ್ಲಿ ವಿಕೆಟ್ ಕೈಚೆಲ್ಲಿದ್ದಾರೆ. ಇದರೊಂದಿಗೆ ಸರಣಿಯ ಸತತ ಮೂರು ಇನಿಂಗ್ಸ್‌ಗಳಿಂದ ಒಟ್ಟಾರೆ ಕೇವಲ 48 ಎಸೆತಗಳನ್ನು ಎದುರಿಸಿರುವ ವೈಭವ್, 44 ರನ್‌ಗಳ ಗರಿಷ್ಠ ಸ್ಕೋರ್‌ನೊಂದಿಗೆ ಒಟ್ಟು ಗಳಿಸಿರುವುದು ಕೇವಲ 79 ರನ್ ಮಾತ್ರ. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಈ ಯುವ ಬ್ಯಾಟರ್, ಪ್ರಸ್ತುತ ಸರಣಿಯಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದೆ ರನ್ ಗಳಿಸಲು ತೀವ್ರ ಹೆಣಗಾಡುತ್ತಿದ್ದಾರೆ.