ವೈಭವ್​ ಅಲ್ಲವೇ ಅಲ್ಲ... ವೀರೂ ಪ್ರಕಾರ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಆಡಬಲ್ಲ ಟೀಮ್​ ಇಂಡಿಯಾದ ಸ್ಟಾರ್ ಈತ! Virender Sehwag

ವೈಭವ್​ ಅಲ್ಲವೇ ಅಲ್ಲ... ವೀರೂ ಪ್ರಕಾರ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಆಡಬಲ್ಲ ಟೀಮ್​ ಇಂಡಿಯಾದ ಸ್ಟಾರ್ ಈತ! Virender Sehwag
ವೈಭವ್​ ಅಲ್ಲವೇ ಅಲ್ಲ... ವೀರೂ ಪ್ರಕಾರ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಆಡಬಲ್ಲ ಟೀಮ್​ ಇಂಡಿಯಾದ ಸ್ಟಾರ್ ಈತ! Virender Sehwag
Published on

ಪ್ರಮುಖ ಮುಖ್ಯಾಂಶಗಳು

  • ಯಶಸ್ವಿ ಜೈಸ್ವಾಲ್​ ಪರ ಬ್ಯಾಟ್​ ಬೀಸಿದ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್
  • ಯಶಸ್ವಿ ಜೈಸ್ವಾಲ್ ಅವರು ಕ್ರಿಕೆಟ್‌ನ ಮೂರೂ ಮಾದರಿಗಳಲ್ಲೂ ಆಡಬೇಕು ಎಂದು ವೀರೂ
  • ಅವಕಾಶ ಸಿಕ್ಕಾಗಲೆಲ್ಲ ಜೈಸ್ವಾಲ್​ ಅದ್ಭುತವಾಗಿ ಆಡಿದ್ದಾರೆ ಎಂದು ಹೊಗಳಿದ ನಜಾಫ್‌ಗಢ್ ನವಾಬ
Virender Sehwag : ಟೆಸ್ಟ್ ಕ್ರಿಕೆಟ್‌ನಲ್ಲಿ ಕೆ.ಎಲ್. ರಾಹುಲ್ ಅವರೊಂದಿಗೆ ಭಾರತದ ಖಾಯಂ ಆರಂಭಿಕ ಆಟಗಾರನಾಗಿ ಮಿಂಚುತ್ತಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಕ್ರಿಕೆಟ್‌ನ ಮೂರೂ ಮಾದರಿಗಳಲ್ಲೂ (ಟೆಸ್ಟ್, ಏಕದಿನ, ಟಿ20) ಆಡಬೇಕು ಎಂದು ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಬ್ಯಾಟ್ ಬೀಸಿದ್ದಾರೆ. 
ಭಾರತದ ಪರ ಈಗಾಗಲೇ 23 ಟಿ20 ಮತ್ತು 4 ಏಕದಿನ ಪಂದ್ಯಗಳನ್ನು ಆಡಿರುವ ಜೈಸ್ವಾಲ್, ಪ್ರಸ್ತುತ ಸೀಮಿತ ಓವರ್‌ಗಳ (ವೈಟ್-ಬಾಲ್) ಯಾವುದೇ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಪ್ರಸ್ತುತ ಟೀಮ್​ ಇಂಡಿಯಾದ ಏಕದಿನ ತಂಡದ ಆರಂಭಿಕ ಸ್ಥಾನಗಳಲ್ಲಿ ಶುಭಮಾನ್ ಗಿಲ್ ಮತ್ತು ರೋಹಿತ್ ಶರ್ಮಾ ಗಟ್ಟಿಯಾಗಿ ನೆಲೆಯೂರಿದ್ದರೆ, ಟಿ20 ಮಾದರಿಯಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹೀಗಿದ್ದರೂ ಜೈಸ್ವಾಲ್ ಅವರಲ್ಲಿ ಮೂರೂ ಮಾದರಿಗಳಿಗೆ ಸೂಕ್ತವಾಗುವ ಅದ್ಭುತ ಸಾಮರ್ಥ್ಯವಿದೆ ಎಂದು ಸೆಹ್ವಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಸ್ವತಃ ಆರಂಭಿಕ ಆಟಗಾರನಾಗಿರುವುದರಿಂದ ಸದ್ಯ ಅವರಿಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸೀಮಿತ ಅವಕಾಶಗಳು ಸಿಗುತ್ತಿವೆ ಎಂದು ವೀರೇಂದ್ರ ಸೆಹ್ವಾಗ್ ವಿಶ್ಲೇಷಿಸಿದ್ದಾರೆ. ಪ್ರಸ್ತುತ ತಂಡದಲ್ಲಿ ಜಾಗವಿಲ್ಲ, ಏಕೆಂದರೆ ಏಕದಿನ ತಂಡಕ್ಕೆ ಶುಭಮಾನ್ ಗಿಲ್ ನಾಯಕರಾಗಿದ್ದಾರೆ ಮತ್ತು ರೋಹಿತ್ ಶರ್ಮಾ ಇನ್ನೂ ಆಡುತ್ತಿದ್ದಾರೆ. ರೋಹಿತ್ ಶರ್ಮಾ ನಿವೃತ್ತರಾದ ತಕ್ಷಣ ಜೈಸ್ವಾಲ್ ವೈಟ್-ಬಾಲ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಆಡುವುದನ್ನು ನೀವು ನೋಡುತ್ತೀರಿ. ಇನ್ನೂ ಋತುರಾಜ್ ಗಾಯಕ್ವಾಡ್ ಅವರು ಜೈಸ್ವಾಲ್​ ಅವರಿಗೆ ಪ್ರಬಲ ಸ್ಪರ್ಧಿಯಾಗಬಹುದು, ಆದರೆ ನೀವು ಮೂವರು ಓಪನರ್‌ಗಳನ್ನು ಆಯ್ಕೆ ಮಾಡಿದರೆ ಅದರಲ್ಲಿ ಜೈಸ್ವಾಲ್ ಖಂಡಿತ ಇರುತ್ತಾರೆ ಎಂದು ಸೆಹ್ವಾಗ್ 'ಕ್ರಿಕ್‌ಬಜ್' ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಜೈಸ್ವಾಲ್ ಇದುವರೆಗೆ ಆಡಿರುವ ಕೇವಲ 4 ಏಕದಿನ ಪಂದ್ಯಗಳಲ್ಲಿ 57.00 ರ ಅತ್ಯುತ್ತಮ ಸರಾಸರಿಯಲ್ಲಿ 171 ರನ್ ಗಳಿಸಿದ್ದು, ಅಜೇಯ 116 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಈ ಪ್ರದರ್ಶನವನ್ನು ಶ್ಲಾಘಿಸಿದ ಸೆಹ್ವಾಗ್, ಗಿಲ್ ಅಥವಾ ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರು ಲಭ್ಯವಿಲ್ಲದಿದ್ದಾಗ ಮಾತ್ರ ಜೈಸ್ವಾಲ್‌ಗೆ ಒನ್-ಡೇ ತಂಡದಲ್ಲಿ ಅವಕಾಶ ಸಿಕ್ಕಿದೆ. ಅವಕಾಶ ಸಿಕ್ಕಾಗಲೆಲ್ಲಾ ಅವರು ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನೇನೂ ತಂಡದಿಂದ ಕೈಬಿಟ್ಟಿಲ್ಲ, ಕೇವಲ ಹಿರಿಯ ಆಟಗಾರರು ಮರಳಿದ್ದರಿಂದ ಅವರು ಹೊರಗುಳಿಯಬೇಕಾಯಿತು ಎಂದು ಜೈಸ್ವಾಲ್ ಪರ ಬ್ಯಾಟ್ ಬೀಸಿದ್ದಾರೆ.
ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಜೈಸ್ವಾಲ್ ಅವರೊಂದಿಗೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡ ಪ್ರಬಲ ಪೈಪೋಟಿಯಲ್ಲಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ನೆನಪಿಸಿದ್ದಾರೆ. ಇಶಾನ್ ಕಿಶನ್ ಅವರು ಒನ್-ಡೇನಲ್ಲಿ ಅತ್ಯಂತ ವೇಗದ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ, ಹೀಗಾಗಿ ಅವರೂ ಕೂಡ ರೇಸ್‌ನಲ್ಲಿದ್ದಾರೆ. ಆದಾಗ್ಯೂ, ಜೈಸ್ವಾಲ್ ಮೂರೂ ಮಾದರಿಯ ಕ್ರಿಕೆಟ್ ಆಡಬಲ್ಲ ಅದ್ಭುತ ಆಟಗಾರನಾಗಿರುವುದರಿಂದ ಅವರನ್ನು ಏಕದಿನ ಮತ್ತು ಟಿ20 ಎರಡರಲ್ಲೂ ನೋಡಲು ನಾನು ಖಂಡಿತ ಬಯಸುತ್ತೇನೆ ಎಂದು ಸೆಹ್ವಾಗ್ ವಿವರಿಸಿದ್ದಾರೆ. 
ವಿಶೇಷವೆಂದರೆ, ಆಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಇಬ್ಬರಿಗೂ ಸ್ಥಾನ ಕಲ್ಪಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net