ಇದೇ ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಸಹಜವಾಗಿಯೇ ಎದುರಾಗುವ ಒತ್ತಡದ ಬಗ್ಗೆಯೂ ಹರ್ಮನ್ಪ್ರೀತ್ ಮಾತನಾಡಿದರು. ನಾನೊಬ್ಬ ಸಾಮಾನ್ಯ ಅಭಿಮಾನಿಯಾಗಿ ಕ್ರಿಕೆಟ್ ನೋಡಲು ಪ್ರಾರಂಭಿಸಿದಾಗಿನಿಂದಲೂ ಈ ಹೈ-ವೋಲ್ಟೇಜ್ ಪಂದ್ಯದ ಒತ್ತಡವನ್ನು ಗಮನಿಸುತ್ತಾ ಬಂದಿದ್ದೇನೆ. ಈಗ ನಾನೇ ಸ್ವತಃ ಮೈದಾನಕ್ಕಿಳಿದು ಆಡುತ್ತಿರುವುದರಿಂದ ಈ ಒತ್ತಡ ಇನ್ನಷ್ಟು ಹೆಚ್ಚಾಗಿರುತ್ತದೆ. ಆದರೆ, ಇಂತಹ ದೊಡ್ಡ ಪಂದ್ಯಗಳನ್ನು ಒತ್ತಡವಾಗಿ ಪರಿಗಣಿಸದೆ, ಆಟವನ್ನು ಆನಂದಿಸುವಂತೆ ನಾವು ತಂಡದ ಆಟಗಾರ್ತಿಯರಿಗೆ ಸದಾ ಹೇಳುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ, ನಮಗೆ ಇದು ಮತ್ತೊಂದು ಸಾಮಾನ್ಯ ಪಂದ್ಯವಷ್ಟೇ ಎಂದು ಅವರು ಅಭಿಪ್ರಾಯಪಟ್ಟರು.