ಇರಾನ್ ಆಡಳಿತದ ಶಿರಚ್ಛೇದಕ್ಕೆ ಇಸ್ರೇಲ್ ಸ್ಕೆಚ್? ಖಮೇನಿ ಕಚೇರಿ ಮೇಲೆ ಬಾಂಬ್ ಮಳೆ! Khamenei Targeted

ಇರಾನ್ ಆಡಳಿತದ ಶಿರಚ್ಛೇದಕ್ಕೆ ಇಸ್ರೇಲ್ ಸ್ಕೆಚ್? ಖಮೇನಿ ಕಚೇರಿ ಮೇಲೆ ಬಾಂಬ್ ಮಳೆ!
ಇರಾನ್ ಆಡಳಿತದ ಶಿರಚ್ಛೇದಕ್ಕೆ ಇಸ್ರೇಲ್ ಸ್ಕೆಚ್? ಖಮೇನಿ ಕಚೇರಿ ಮೇಲೆ ಬಾಂಬ್ ಮಳೆ!
Published on
ಟೆಲ್​ ಅವಿವ್​: ಇಡೀ ಜಗತ್ತು ಸ್ತಬ್ಧವಾಗುವಂತಹ ಭೀಕರ ಯುದ್ಧಕ್ಕೆ ಮಧ್ಯಪ್ರಾಚ್ಯ ಸಾಕ್ಷಿಯಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್(Khamenei Targeted) ಮೇಲೆ ನಡೆಸಿದ ಪ್ರಿವೆಂಟಿವ್ ಅಟ್ಯಾಕ್ ಈಗ ಇಡೀ ಗಲ್ಫ್ ರಾಷ್ಟ್ರಗಳನ್ನು ಯುದ್ಧದ ಜ್ವಾಲೆಗೆ ತಳ್ಳಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಇಸ್ರೇಲ್‌ನ ಅಧಿಕೃತ ಸುದ್ದಿ ಸಂಸ್ಥೆಗಳು ಖಚಿತಪಡಿಸಿವೆ.

ಖಮೇನಿ ನಿವಾಸದ ಮೇಲೆ ಬಾಂಬ್ ಮಳೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ನಡೆದ ಈ ಕಾರ್ಯಾಚರಣೆಯು ಇರಾನ್‌ನKhamenei Targeted ಆಡಳಿತದ ಶಿರಚ್ಛೇದ ಮಾಡುವ ಗುರಿ ಹೊಂದಿತ್ತು. ಟೆಹ್ರಾನ್‌ನಲ್ಲಿರುವ ಖಮೇನಿಯವರ ಕಚೇರಿ ಮತ್ತು ನಿವಾಸದ ಸಮೀಪ ಭೀಕರ ಸ್ಫೋಟಗಳು ಸಂಭವಿಸಿವೆ. ಕಳೆದ 47 ವರ್ಷಗಳಿಂದ ಅಮೆರಿಕಕ್ಕೆ ಸಾವು ಎಂದು ಕೂಗುತ್ತಿರುವ ಈ ಕ್ರೂರ ಆಡಳಿತವನ್ನು ಅಂತ್ಯಗೊಳಿಸುವುದೇ ನಮ್ಮ ಗುರಿ ಎಂದು ಟ್ರಂಪ್ ಗುಡುಗಿದ್ದಾರೆ.

ಇರಾನ್‌ನ ಭೀಕರ ಪ್ರತಿಾಘಾತ: ಅಮೆರಿಕದ ನೌಕಾಪಡೆ ನೆಲೆಯ ಮೇಲೆ ದಾಳಿ

ಅಮೆರಿಕದ ದಾಳಿಗೆ ಇರಾನ್ ಅಷ್ಟೇ ಭೀಕರವಾಗಿ ಪ್ರತಿಕ್ರಿಯಿಸಿದೆ. ಬಹ್ರೇನ್‌ನ ಜುಫೈರ್ ಪ್ರದೇಶದಲ್ಲಿರುವ ಅಮೆರಿಕದ 5ನೇ ನೌಕಾಪಡೆಯ ಪ್ರಧಾನ ಕಚೇರಿಯ ಮೇಲೆ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಅಮೆರಿಕದ ಅತ್ಯಂತ ಸುಸಜ್ಜಿತ ನೌಕಾ ನೆಲೆ ಬೆಂಕಿಯ ಉಂಡೆಯಾಗಿರುವುದು ಕಂಡುಬಂದಿದೆ. ಅಮೆರಿಕ ಈ ಬಗ್ಗೆ ಇನ್ನು ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಹಾನಿ ಭೀಕರವಾಗಿದೆ ಎಂದು ತಿಳಿದುಬಂದಿದೆ.

ದೋಹಾ, ದುಬೈ, ರಿಯಾದ್‌ನಲ್ಲಿ ಸ್ಫೋಟದ ಸದ್ದು

ಇರಾನ್‌ನ ಕ್ಷಿಪಣಿಗಳು ಕೇವಲ ಇಸ್ರೇಲ್ ಅಥವಾ ಅಮೆರಿಕಕ್ಕೆ ಸೀಮಿತವಾಗದೆ, ಅಮೆರಿಕದ ನೆಲೆಗಳಿಗೆ ಆಶ್ರಯ ನೀಡಿದ ಎಲ್ಲಾ ರಾಷ್ಟ್ರಗಳ ಮೇಲೆ ಹರಡಿವೆ.
ಕತಾರ್: ದೋಹಾ ಬಳಿಯಿರುವ ಅಮೆರಿಕದ ಅತಿದೊಡ್ಡ ವಾಯುನೆಲೆ ಅಲ್-ಉದೈದ್ ಮೇಲೆ ಕ್ಷಿಪಣಿಗಳು ಬಿದ್ದಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಕತಾರ್ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ.
ಯುಎಇ: ಅಬುಧಾಬಿ ಮತ್ತು ದುಬೈ ನಗರಗಳಲ್ಲಿ ಪ್ರಬಲ ಸ್ಫೋಟದ ಸದ್ದು ಕೇಳಿಬಂದಿದೆ. ಜನರು ಆತಂಕದಿಂದ ರಸ್ತೆಗಿಳಿದಿದ್ದಾರೆ.
ಕುವೈತ್ ಮತ್ತು ಸೌದಿ: ಕುವೈತ್‌ನ ಅಲ್-ಸಲೇಮ್ ವಾಯುನೆಲೆಯ ಮೇಲೆ ದಾಳಿಯಾಗಿದೆ ಮತ್ತು ರಿಯಾದ್‌ನಲ್ಲಿಯೂ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ.

ಜಾಗತಿಕ ತಲ್ಲಣ ಮತ್ತು ಯುದ್ಧದ ತೀವ್ರತೆ

ಅಮೆರಿಕ ಮತ್ತು ಇಸ್ರೇಲ್‌ನ ಈ ದಾಳಿಯು ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಬದಲಾಗಿ ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಸ್ಪಷ್ಟ ಪ್ರಯತ್ನವಾಗಿದೆ. ಇರಾನ್ ಸಹ ತನ್ನ ಶಸ್ತ್ರಾಗಾರವನ್ನು ಮುಕ್ತಗೊಳಿಸಿದ್ದು, ಅರಬ್ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಮೂಲಕ ಜಾಗತಿಕ ತೈಲ ಪೂರೈಕೆಗೆ ಕೊಡಲಿ ಪೆಟ್ಟು ನೀಡಿದೆ. ಇದು ಪರೋಕ್ಷವಾಗಿ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಿದೆ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net