ಟೆಲ್ಅವಿವ್: ಇರಾನ್ ಜೊತೆಗಿನ ಯುದ್ಧವು ಒಂದು ತಿಂಗಳು ಪೂರೈಸಿ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Israel Defense Budget) ಜಗತ್ತೇ ಬೆರಗಾಗುವಂತಹ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಸೋಮವಾರ (ಮಾ.30) ಮುಂಜಾನೆ ನಡೆದ ತುರ್ತು ಸಂಸತ್ ಅಧಿವೇಶನದಲ್ಲಿ, ಇಸ್ರೇಲ್ ತನ್ನ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸುವ ಮೂಲಕ ಇರಾನ್ ವಿರುದ್ಧದ ಹೋರಾಟದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಬಲವಾದ ಸಂದೇಶ ರವಾನಿಸಿದೆ.