ಇರಾನ್ ತೈಲ ಪಡೆಯುವುದೇ ನಮ್ಮ ಅಜೆಂಡಾ: ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್ | Donald Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಐದನೇ ವಾರಕ್ಕೆ ಮುಂದುವರೆದಂತೆ ಇರಾನ್​ನ ತೈಲ ಪಡೆಯುವುದೇ ತಮ್ಮ ನೆಚ್ಚಿನ ವಿಷಯ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್‌ನ ಪ್ರಮುಖ ತೈಲ ಟರ್ಮಿನಲ್ ಆಗಿರುವ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಫೈನಾನ್ಷಿಯಲ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ನಿಜ ಹೇಳಬೇಕೆಂದರೆ, ಇರಾನ್‌ನಲ್ಲಿ ತೈಲವನ್ನು ಪಡೆಯುವುದು ನನ್ನ ನೆಚ್ಚಿನ ವಿಷಯ. ಆದರೆ ಅಮೆರಿಕದಲ್ಲಿರುವ ಕೆಲವು ಮೂರ್ಖ ಜನರು, ನೀವು ಯಾಕೆ ಹಾಗೆ ಮಾಡುತ್ತಿದ್ದೀರಿ? ಎಂದು ಕೇಳುತ್ತಾರೆ, ಅವರು ಮೂರ್ಖರು ಎಂದು ಕಿಡಿಕಾರಿದ್ದಾರೆ.
ಬಹುಶಃ ನಾವು ಖಾರ್ಗ್ ದ್ವೀಪವನ್ನು ತೆಗೆದುಕೊಳ್ಳುತ್ತೇವೆ ಅಥವಾ ತೆಗೆದುಕೊಳ್ಳದೆ ಇರಬಹುದು. ನಮಗೆ ಹಲವು ಆಯ್ಕೆಗಳಿವೆ. ಇದರರ್ಥ ನಾವು ಸ್ವಲ್ಪ ಸಮಯದವರೆಗೆ ಕಾಯಬೇಕಿತ್ತು. ಇರಾನ್​ಗೆ ಯಾವುದೇ ರಕ್ಷಣಾ ವ್ಯವಸ್ಥೆ ಇದೆ ಎಂದು ನಾನು ಭಾವಿಸುವುದಿಲ್ಲ. ಬಹಳ ಸುಲಭವಾಗಿ ನಾವು ಅದನ್ನು ತೆಗೆದುಕೊಳ್ಳಬಹುದು ಎಂದಿದ್ದಾರೆ.
ಇನ್ನೂ ಸಂದರ್ಶನದಲ್ಲಿ ಟ್ರಂಪ್ ಇರಾನ್ ನೀಡಿದ ಉಡುಗೊರೆ ಬಗ್ಗೆ ಹೇಳಿದ್ದು, ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್, ಅಮೆರಿಕಕ್ಕೆ ಪಾಕಿಸ್ತಾನ ಧ್ವಜ ಹೊತ್ತು ಹಾರ್ಮುಜ್ ಜಲಸಂಧಿ ಮೂಲಕ ತೈಲ ಟ್ಯಾಂಕರ್‌ಗಳನ್ನು ಸಾಗಿಸಲು ಇರಾನ್ ಸಂಸತ್ತಿನ ಸ್ಪೀಕರ್ ಅಧಿಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅವರು ನಮಗೆ ಪಾಕಿಸ್ತಾನ ಧ್ವಜ ಹೊತ್ತ 10 ಟ್ಯಾಂಕರ್‌ಗಳನ್ನು ಕೊಟ್ಟರು. ಈಗ ಅವರು 20 ನೀಡುತ್ತಿದ್ದಾರೆ. ಮತ್ತು 20 ಈಗಾಗಲೇ ಪ್ರಾರಂಭವಾಗಿವೆ. ಅವು ಜಲಸಂಧಿಯ ಮಧ್ಯಭಾಗಕ್ಕೆ ಹೋಗುತ್ತಿವೆ. ನನಗೆ ಹಡಗುಗಳನ್ನು ಅಧಿಕೃತಗೊಳಿಸಿದವರು ಅವರೇ ಎಂದು  ಹೇಳಿದ್ದಾರೆ.
ಈಗಾಗಲೇ ಅಮೆರಿಕದ ಭೂದಾಳಿಗೆ ತಿರುಗೇಟು ನೀಡಿರುವ ಇರಾನ್, ಅಮೆರಿಕದ ಪಡೆಗಳು ತನ್ನ ಭೂಪ್ರದೇಶಕ್ಕೆ ಬಂದಿಳಿದರೆ, ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ತನ್ನದೇ ಆದ ನೆಲದ ಆಕ್ರಮಣ ಮತ್ತು ಹೊಸ ದಾಳಿಗಳನ್ನು ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net