ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದಾಗ, ಕೇವಲ ಒಂದು ವಾರದಲ್ಲಿ ಇರಾನ್ ಅನ್ನು ಮಣಿಸಿ ಅಲ್ಲಿ ತಮ್ಮ ಆಡಳಿತ ಸ್ಥಾಪಿಸಬಹುದು ಎಂದು ಭಾವಿಸಿದ್ದವು. ಆದರೆ ಇರಾನ್ ಸೇನೆ ನೀಡಿದ ತಿರುಗೇಟು ಅಮೆರಿಕದ ಲೆಕ್ಕಾಚಾರವನ್ನೆಲ್ಲ ತಲೆಕೆಳಗೆ ಮಾಡಿದೆ. ಇರಾನ್ ಸೈನ್ಯ ಅಮೆರಿಕದ ಪಡೆಗಳಿಗೆ ಎಷ್ಟು ಭೀಕರವಾಗಿ ಹಾನಿ ಮಾಡಿದೆ ಎಂದರೆ, ಯುದ್ಧದಿಂದ ಹೊರಬರುವುದು ಹೇಗೆ ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿಳಿಯದಂತಾಗಿತ್ತು. ಅಂತಿಮವಾಗಿ ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸುವ ಅನಿವಾರ್ಯತೆ ಅಮೆರಿಕಕ್ಕೆ ಎದುರಾಗಿದೆ.