ಝೆಲೆನ್ಸ್ಕಿ ಅವರು ಈ ಕಾರ್ಯಾಚರಣೆ ನಡೆದ ದೇಶಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಕನಿಷ್ಠ ನಾಲ್ಕು ಮಧ್ಯಪ್ರಾಚ್ಯ ದೇಶಗಳಲ್ಲಿ ಯುಕ್ರೇನ್ನ ಸುಮಾರು 228 ತಜ್ಞರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದಾಗ, ಪ್ರತಿಯಾಗಿ ಇರಾನ್ ಉಡಾಯಿಸಿದ ಡ್ರೋನ್ಗಳನ್ನು ತಡೆಯಲು ಯುಕ್ರೇನ್ ಸೈನಿಕರು ನೆರವಾಗಿದ್ದಾರೆ.