ಅಟ್ಯಾಕ್​ ಮಾಡಿದ್ರೆ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಲಿದೆ ಯುದ್ಧ! ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಇರಾನ್​ | Iran US War

ಪ್ರಸ್ತುತ, ಪರ್ಷಿಯನ್ ಗಲ್ಫ್ ಮತ್ತು ಹೊರ್ಮುಜ್ ಜಲಸಂಧಿಯಿಂದ ಕೆಂಪು ಸಮುದ್ರದವರೆಗೆ (Red Sea) ಹರಡಿರುವ ಸಂಘರ್ಷವು ಮತ್ತಷ್ಟು ಹದಗೆಡಬಹುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
 Iran US War
ಅಟ್ಯಾಕ್​ ಮಾಡಿದ್ರೆ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಲಿದೆ ಯುದ್ಧ
Published on
  • ಇರಾನ್ ಮತ್ತು ಅಮೆರಿಕದ ನಡುವೆ ಮಾತಿನ ಸಮರ

  • ಈ ಬಾರಿ ಅಟ್ಯಾಕ್​ ಮಾಡಿದ್ರೆ ಹಿಂದೂ ಮಹಾಸಾಗರಕ್ಕೂ ಹಬ್ಬಲಿದೆ ಯುದ್ಧ

  • ಮತ್ತೊಮ್ಮೆ ಟ್ರಂಪ್​ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದ ಇರಾನ್​

Iran US War: ಇರಾನ್​ ಮತ್ತು ಅಮೆರಿಕ ನಡುವಿನ ಯುದ್ಧಕಿಂತ ಮಾತಿನ ಸಮರವೇ ಬಲು ಜೋರಾಗಿ ನಡೆಯುತ್ತಿವೆ. ವಿಶ್ವಸಂಸ್ಥೆಯಲ್ಲಿ ಉಭಯ ದೇಶಗಳು ಪರಸ್ಪರ ಎಚ್ಚರಿಕೆ ಕೊಟ್ಟಿದ್ದು, ಇರಾನಿಗೂ ಮುನ್ನ ಒಪ್ಪಂದಕ್ಕೆ ಶರಣಾಗದಿದ್ದರೆ ನಿಮ್ಮ ದೇಶವನ್ನು ನರಕಕ್ಕೆ ಕಳುಹಿಸುತ್ತೇನೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಯುಎಸ್​ ಅಧ್ಯಕ್ಷರ ಈ ಹೇಳಿಕೆಯಿಂದ ಕೆಂಡಾಮಂಡಲಗೊಂಡಿರುವ ಇರಾನ್, ನಾವು ಯಾರಿಗೂ ತಲೆಬಾಗುವುದಿಲ್ಲ ಎಂದು ಹೊಸ ವಾರ್ನಿಂಗ್ ರವಾನಿಸಿದೆ.

ಅಮೆರಿಕ ಅಥವಾ ಇಸ್ರೇಲ್ ಮತ್ತೊಮ್ಮೆ ದಾಳಿ ನಡೆಸಿದರೆ ಈ ಯುದ್ಧ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಬಹುದು ಎಂದು ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರ ಸಲಹೆಗಾರ ಯಾಹ್ಯಾ ರಹೀಮ್ ಸಫಾವಿ ಎಚ್ಚರಿಸಿದ್ದಾರೆ. ಪ್ರಸ್ತುತ, ಪರ್ಷಿಯನ್ ಗಲ್ಫ್ ಮತ್ತು ಹೊರ್ಮುಜ್ ಜಲಸಂಧಿಯಿಂದ ಕೆಂಪು ಸಮುದ್ರದವರೆಗೆ (Red Sea) ಹರಡಿರುವ ಸಂಘರ್ಷವು ಮತ್ತಷ್ಟು ಹದಗೆಡಬಹುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ನಿದ್ದೆಯಲ್ಲಿ ಬರುವ ಕನಸುಗಳು ಭಯ ಹುಟ್ಟಿಸುತ್ತಾ? ಹಾಗಿದ್ರೆ, ಯಾವ ಕನಸು ಅಪಾಯದ ಮುನ್ಸೂಚನೆ? ಇಲ್ಲಿದೆ ಮಾಹಿತಿ | Scary Dreams

ಇರಾನ್‌ನ ಸರ್ಕಾರಿ ಸ್ವಾಮ್ಯದ ಫಾರ್ಸ್ ಸುದ್ದಿ ಸಂಸ್ಥೆ ಬಿಡುಗಡೆಗೊಳಿಸಿದ ವಿಡಿಯೋ ಸಂದೇಶದಲ್ಲಿ ಸಫಾವಿ ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ಘರ್ಷಣೆಯು ಈಗಾಗಲೇ ಪರ್ಷಿಯನ್ ಗಲ್ಫ್ ಮತ್ತು ಹೊರ್ಮುಜ್ ಜಲಸಂಧಿಯಿಂದ ಕೆಂಪು ಸಮುದ್ರದವರೆಗೆ ಹರಡಿದೆ. ಇದು ಹೀಗೆ ಮುಂದುವರಿದರೆ, ಈ ಯುದ್ಧವು ಹಿಂದೂ ಮಹಾಸಾಗರ ಮತ್ತು ಅದರಾಚೆಗೂ ವ್ಯಾಪಿಸುವುದರಲ್ಲಿ ಅನುಮಾನ ಬೇಡ" ಎಂದಿದ್ದಾರೆ. ಕುಪಿತಗೊಂಡ ಸಫಾವಿ ಅವರು, ಹಿಂದೂ ಮಹಾಸಾಗರದಲ್ಲಿ ಯಾವ ಪ್ರದೇಶಗಳು ಅಥವಾ ನೆಲೆಗಳನ್ನು ಟಾರ್ಗೆಟ್​ ಮಾಡಲಿದ್ದೀವಿ ಎಂಬುದರ ಬಗ್ಗೆ ಯಾವುದೇ ರೀತಿಯಲ್ಲೂ ಹೇಳಿಕೆ ನೀಡಿಲ್ಲ. ವಾಣಿಜ್ಯ ಹಡಗುಗಳು, ಸೇನಾ ನೆಲೆಗಳು ಅಥವಾ ನಿರ್ದಿಷ್ಟ ದೇಶಗಳನ್ನು ಗುರಿಯಾಗಿಸುವುದರ ಕುರಿತು ಹೆಚ್ಚೇನೂ ಹೇಳಿಲ್ಲ.

ಭಾರತಕ್ಕೇನು ತೊಂದರೆ?

ಯುದ್ಧವು ಹಿಂದೂ ಮಹಾಸಾಗರಕ್ಕೂ ವ್ಯಾಪಿಸಬಹುದು ಎಂಬ ಎಚ್ಚರಿಕೆ ಇದೀಗ ಭಾರತಕ್ಕೆ ಏನಾದರೂ ತೊಂದರೆ ಕಾಡಲಿದೆಯಾ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಯು ತೈಲ ಬೆಲೆಗಳು, ಹಡಗು ವೆಚ್ಚಗಳು ಮತ್ತು ವಿಮಾ ವೆಚ್ಚಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಏಕೆಂದರೆ, ಪಶ್ಚಿಮ ಏಷ್ಯಾದಿಂದ ಭಾರತಕ್ಕೆ ಇಂಧನ ಪೂರೈಕೆ ಮತ್ತು ಸಮುದ್ರ ವ್ಯಾಪಾರ ಮಾರ್ಗಗಳು ಪರಿಣಾಮ ಬೀರಬಹುದು. ಆದರೆ, ಸಫಾವಿ ನೀಡಿರುವ ಎಚ್ಚರಿಕೆ ಸದ್ಯಕ್ಕೆ ಎಚ್ಚರಿಕೆ ಮಾತ್ರವಾಗಿದ್ದು, ಅಮೆರಿಕ ಏನಾದರೂ ಉದ್ಧಟತನ ತೋರಿದರೆ ಖಂಡಿತ ಯುದ್ಧವು ಹಿಂದೂ ಮಹಾಸಾಗರಕ್ಕೆ ಯಾವ ರೂಪದಲ್ಲಿ ಬೇಕಾದರೂ ಹರಡುವ ಸಾಧ್ಯತೆಗಳು ಹೆಚ್ಚಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net