ಅಮೆರಿಕ ಹಾಗೂ ಇಸ್ರೇಲ್ ಜೊತೆಗಿನ ಯುದ್ಧ ತಾರಕಕ್ಕೇರಿರುವ ಈ ಸಂದಿಗ್ಧ ಸಮಯದಲ್ಲಿ, ದೇಶದ ಚುಕ್ಕಾಣಿ ಯಾರ ಕೈಯಲ್ಲಿದೆ ಎಂಬ ಪ್ರಶ್ನೆ ಇದೀಗ ಇರಾನ್‌ನಲ್ಲಿ ಎದ್ದಿದೆ. ಏಕೆಂದರೆ, ಫೆಬ್ರವರಿ 28ರಂದು ತಮ್ಮ ತಂದೆ ಅಲಿ ಖಮೇನಿ ಅವರ ನಿಧನದ ಬಳಿಕ ಸರ್ವೋಚ್ಛ ನಾಯಕನಾಗಿ ಅಧಿಕಾರ ವಹಿಸಿಕೊಂಡ ಮೊಜ್ತಬಾ ಖಮೇನಿ, ಇದೀಗ ಯುದ್ಧದ ಗಾಯಗಳಿಂದಾಗಿ ಕಳೆದ ಕೆಲವು ವಾರಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ, ಇರಾನ್ ಆಡಳಿತ ವ್ಯವಸ್ಥೆಯಲ್ಲಿ ಈಗ ಉಂಟಾಗಿರುವ ಈ 'ಅಧಿಕಾರದ ಶೂನ್ಯತೆ' ಪಶ್ಚಿಮ ಏಷ್ಯಾದ ಯುದ್ಧದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.