

ವಾಷಿಂಗ್ಟನ್: ಕಳೆದೊಂದು ವರ್ಷದಿಂದ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಜಾರಿಯಲ್ಲಿದ್ದು, ಅಲ್ಲಲ್ಲಿ ಕದನ ವಿರಾಮ ಘೋಷಣೆಯಾಗುತ್ತಿದ್ದರೂ, ಸಂಪೂರ್ಣ ಶಾಂತಿ ಇನ್ನುವರೆಗೆ ನೆಲೆಸಿಲ್ಲ.
ಹೀಗಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷವನ್ನು ಹೇಗಾದರೂ ನಿಲ್ಲಿಸಬೇಕೆಂದು ವಿಶ್ವದ ನಾಯಕರು ಪ್ರಯತ್ನ ಮಾಡುತ್ತಿದ್ದರೆ, ಈಗ ಅಮೆರಿಕದ ಗುಪ್ತಚರ ಇಲಾಖೆ ಇನ್ನೊಂದು ಶಾಕಿಂಗ್ ಮಾಹಿತಿ ಹೊರಹಾಕಿದೆ.
ಒಂದು ಕಡೆ ಶಾಂತಿ ಸ್ಥಾಪನೆ ಬಗ್ಗೆ ಮಾತನಾಡುತ್ತಿರುವ ಇರಾನ್ ಈಗ ಅಮೆರಿಕದ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಹಂಚಿಕೊಂಡಿದೆ ಎಂದು ಕೆಲ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇರಾನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ವಲಯದಲ್ಲಿರುವ ಅಧಿಕಾರಿಗಳು ಹಾಗೂ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಿದೆ ಎಂದು ತಿಳಿದುಬಂದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಇನ್ನು ಇರಾನ್ ಯಾವ ಮಾದರಿಯಲ್ಲಿ ಸಂಭಾವ್ಯ ದಾಳಿ ನಡೆಸಬಹುದೆಂದು ಲೆಕ್ಕ ಹಾಕಿರುವ ಅಮೆರಿಕ, ಇರಾನ್ ನೇರವಾಗಿ ವೈಮಾನಿಕ ದಾಳಿ, ಅಥವಾ ಘೋಷಿತ ಯುದ್ಧ ನಡೆಸುವುದೆಲ್ಲಾ ಅಸಾಧ್ಯವಾಗಿದೆ.
ಆದರೆ, ನಮ್ಮ ದೇಶದಲ್ಲಿರುವ ಇರಾನ್ ಬೆಂಬಲಿಗರನ್ನು ಗುರುತಿಸಿ, ಸೂಸೈಡ್ ಬಾಂಬಿಂಗ್, ಡರ್ಟಿ ಬಾಂಬಿಂಗ್ ಅಥವಾ ಕೆಮಿಕಲ್ ವೆಪನ್ಗಳನ್ನು ಬಳಿಸಿಕೊಂಡು ದಾಳಿ ನಡೆಸಬಹುದೆಂದು ಹೇಳಲಾಗುತ್ತಿದೆ.
ರಾಜಕೀಯ ನಾಯಕರ ಅಥವಾ ಸಾರ್ವಜನಿಕ ಸಭೆಗಳಿಗೆ ಪ್ರವೇಶ ಪಡೆದು ಅಲ್ಲಿ ಆತ್ಮಾಹುತಿ ಬಾಂಬಿಂಗ್ ಮಾಡುವುದು ಮಧ್ಯಪ್ರಾಚ್ಯದವರ ಸಾಂಪ್ರದಾಯಿಕ ವಿಧಾನವಾಗಿದ್ದು, ಇದನ್ನು ಆದಷ್ಟು ಬೇಗ ಹಾಗೂ ಪರಿಣಾಮಾತ್ಮಕವಾಗಿ ಎದುರಿಸುವ ಜವಾಬ್ದಾರಿ ಅಮೆರಿಕದ ಮೇಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಾಹಿತಿ ಪ್ರಕಾರ, ಟೆಹ್ರಾನ್ ಅಮೆರಿಕದ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳ ಪಟ್ಟಿ ಹೀಗಿದೆ:
ಲೆಬನಾನ್ ಯುದ್ಧಕ್ಕೆ ಫುಲ್‌ಸ್ಟಾಪ್: ಲೆಬನಾನ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ನೌಕಾ ದಿಗ್ಬಂಧನ ತೆರವು: ಇರಾನ್‌ನ ಪ್ರಮುಖ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು.
ನಿರ್ಬಂಧಗಳ ರದ್ದು: ಇರಾನ್ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ರದ್ದುಗೊಳಿಸಬೇಕು.
ಆಸ್ತಿ ಬಿಡುಗಡೆ: ವಿದೇಶಗಳಲ್ಲಿ ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ನ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಆಸ್ತಿಯನ್ನು ಮುಕ್ತಗೊಳಿಸಬೇಕು.
ಅಮೆರಿಕ ಸೇನೆ ವಾಪಸ್: ಮಧ್ಯಪ್ರಾಚ್ಯ ಭಾಗದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಸೇನಾ ಪಡೆಯನ್ನು ಗಣನೀಯವಾಗಿ ಕಡಿತಗೊಳಿಸಬೇಕು.
ಯುದ್ಧ ನಷ್ಟ ಪರಿಹಾರ: ಈವರೆಗೆ ನಡೆದಿರುವ ದಾಳಿ ಮತ್ತು ಹಾನಿಗೆ ಅಮೆರಿಕವೇ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು.
ದಾಳಿಗೆ ಬ್ರೇಕ್: ಇರಾನ್ ಭೂಪ್ರದೇಶದ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು.
ಇತ್ತ ವಾಷಿಂಗ್ಟನ್ ಮಾತ್ರ, ಯಾವುದೇ ಶಾಂತಿ ಮಾತುಕತೆ ಶುರುವಾಗಬೇಕಿದ್ದರೂ ಮೊದಲು ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳ ಮೇಲೆಯೇ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದಿದೆ, (ಏಜೆನ್ಸೀಸ್).