ನಾನು ಜೀವಂತವಾಗಿ ಆಚೆ ಬರುವುದಿಲ್ಲ!: ಅಡಿಯಾಲಾ ಜೈಲಿನಿಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆತಂಕಕಾರಿ ಸಂದೇಶ! Imran Khan

Former Prime Minister Imran Khan has written an open letter to the Chief Justice of the Supreme Court of Pakistan, stating that he is not receiving appropriate medical assistance in Adiala Jail.
ಅಡಿಯಾಲಾ ಜೈಲಿನಲ್ಲಿ ತಮಗೆ ಸೂಕ್ತ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಪಾಕ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗ ಪತ್ರ ಬರೆದಿದ್ದಾರೆ
Published on: 

ಇಸ್ಲಾಮಾಬಾದ್​: ಕಳೆದ ನಾಲ್ಕು ವರ್ಷಗಳಿಂದ ರಾವಲ್​ಪಿಂಡಿಯಲ್ಲಿರುವ ಅಡಿಯಾಲಾ ಜೈಲಿನಲ್ಲಿರುವ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಕುರಿತಾದ ಒಂದಿಲ್ಲೊಂದು ಸುದ್ದಿಗಳು, ಹೊರ ಬೀಳುತ್ತಲೇ ಇರುತ್ತವೆ. ಕೆಲ ದಿನಗಳ ಹಿಂದಷ್ಟೆ, ಹೃದಯ ಬಡಿತದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಗೆ ಹೋಗಿ ಬಂದಿದ್ದ ಖಾನ್​, ಈಗ ತಾವು ಸಾಯುವುದು ಬಹುತೇಕ ಖಚಿತ ಎಂಬ ಸಂದೇಶವನ್ನು ನೀಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಟೀಮ್​ ನಾಯಕನಾಗಿ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ ಇಮ್ರಾನ್ ಖಾನ್​, ನಂತರ ರಾಜಕೀಯದಲ್ಲಿ ಮಿಂಚಿ, ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ, ಈಗ ಅವರ ಆರೋಗ್ಯ ಸ್ಥಿತಿ ದಿನಕಳೆದಂತೆ ಹದಗೆಡುತ್ತಿದ್ದು, ಸಾವು ಸಮೀಪಿಸುತ್ತಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ನಾನು ಜೀವಂತವಾಗಿ ಆಚೆ ಬರುವುದಿಲ್ಲ!

ಇನ್ನು ತಮ್ಮ ಆಯೋಗ್ಯ ಸ್ಥಿತಿ ಹದಗೆಡುತ್ತಿರುವ ಹಿನ್ನಲೆ ಇಮ್ರಾನ್​ ಖಾನ್​, ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಾಧೀಶರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ತಮ್ಮ ಆರೋಗ್ಯ ದಿನದಿಂದ ಹಾಳಾಗುತ್ತಿದೆ. ನನಗೆ ಜೈಲಿನಲ್ಲಿ ದೊರೆಯಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ವೈಧ್ಯಕೀಯ ನೆರವನ್ನೂ ಕೂಡ ನೀಡಲಾಗುತ್ತಿಲ್ಲ, ನನಗೀಗ 71 ವರ್ಷವಾಗಿದ್ದು, ಸರ್ಕಾರ ಮತ್ತು ಜೈಲಾಡಳಿತ ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ತರದಿದ್ದರೆ, ನಾನು ಖಂಡಿತ ಜೀವಂತವಾಗಿ ಆಚೆ ಬರುವುದಿಲ್ಲ ಎಂದು ಪತ್ರದಲ್ಲಿ ಇಮ್ರಾನ್​ ಖಾನ್​ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಮನೆಯವರ ಭೇಟಿಗೂ ಅವಕಾಶವಿಲ್ಲ!

ಇನ್ನು ಇಮ್ರಾನ್​​ ಖಾನ್​ ಜೈಲುವಾಸದ ಬಗ್ಗೆ ಕುಟುಂಬ ವರ್ಗ ಕೂಡ ಆಕ್ರೋಶ ಹೊರಹಾಕಿದೆ. ಇಮ್ರಾನ್​​ಗೆ ದಿನದ 22 ಗಂಟೆ ಏಕಾಂಗಿ ಕೋಣೆಯಲ್ಲಿ ಇಡುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕೆಟ್ಟುಹೋಗಿದೆ. ಒಂದು ಕಣ್ಣು ಸಹ ಕಾಣುತ್ತಿಲ್ಲ. ಅವರಿಗೆ ಓದಲು ಪುಸ್ತಕ, ನೋಡಲು ಟಿವಿಯನ್ನೂ ನೀಡುತ್ತಿಲ್ಲ. ಇದರ ಜತೆಗೆ ವಕೀಲರನ್ನು ಹಾಗೂ ಮನೆಯವರ ಭೇಟಿಗೂ ಕಡಿವಾಣ ಹೇರಲಾಗಿದೆ ಎಂದು ಇಮ್ರಾನ್​ ಪತ್ನಿ ಹಾಗೂ ಮಕ್ಕಳು ಪಾಕ್​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Also Read
ಸಾಯಿ ಪಲ್ಲವಿ ಆ್ಯಕ್ಷನ್ ಸೀನ್‌ಗೆ ವಿರೋಧ: "ಸೀತೆ ರಾವಣನನ್ನೇ ಕೊಂದಿದ್ದಾಳೆ" ಎಂದು ಖಡಕ್ ಉತ್ತರ ಕೊಟ್ಟ ನಿರ್ದೇಶಕ ನಿತೇಶ್ ತಿವಾರಿ! Nitesh Tiwari
Former Prime Minister Imran Khan has written an open letter to the Chief Justice of the Supreme Court of Pakistan, stating that he is not receiving appropriate medical assistance in Adiala Jail.

ವೈಧ್ಯಕೀಯ ನೆರವು ನೀಡಲೇಬೇಕು!

ಕೆಲ ತಿಂಗಳುಗಳ ಹಿಂದೆ, ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪಾಕ್​ ಸುಪ್ರೀಂ ಕೋರ್ಟ್​, ಅಪರಾಧಿ ಏನೇ ತಪ್ಪು ಮಾಡಿರಲೀ, ಆದರೆ, ಆತನ ಆರೋಗ್ಯದ ಜತೆಗೆ ಆಟವಾಡುವುದು ಮಾನವೀಯತೆಯಲ್ಲ. ಇಮ್ರಾನ್​ ಖಾನ್​ ತಮಗೆ ಆರೋಗ್ಯ ಸಮಸ್ಯೆಯಿದೆ ಎಂದು ತಿಳಿಸಿದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ, ವೈಧ್ಯಕೀಯ ಸೇವೆ ನೀಡುವುದು ಸರ್ಕಾರ ಹಾಗೂ ಜೈಲಿನ ಅಧಿಕಾರಿಗಳ ಆದ್ಯ ಕರ್ತವ್ಯವೆಂದು ತಿಳಿಸಿತ್ತು.

ಆದರೆ, ನ್ಯಾಯಾಲಯದ ಆದೇಶದ ನಂತರವೂ, ಖಾನ್​ಗೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂಬ ಈ ಸುದ್ದಿ ಈಗ, ಜಾಗತಿಕ ಮಾನವ ಹಕ್ಕು ವೇದಿಕೆಯ ಗಮನವನ್ನು ಸೆಳೆದಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್​).