ಸಾಯಿ ಪಲ್ಲವಿ ಆ್ಯಕ್ಷನ್ ಸೀನ್‌ಗೆ ವಿರೋಧ: "ಸೀತೆ ರಾವಣನನ್ನೇ ಕೊಂದಿದ್ದಾಳೆ" ಎಂದು ಖಡಕ್ ಉತ್ತರ ಕೊಟ್ಟ ನಿರ್ದೇಶಕ ನಿತೇಶ್ ತಿವಾರಿ! Nitesh Tiwari

Director Nitesh Tiwari has provided a clarification regarding the criticism surrounding Sita's action sequences in the film 'Ramayana'.
'ರಾಮಾಯಣ' ಚಿತ್ರದಲ್ಲಿ ಸೀತೆಯ ಆ್ಯಕ್ಷನ್ ದೃಶ್ಯಗಳ ಕುರಿತ ಟೀಕೆಗೆ ನಿರ್ದೇಶಕ ನಿತೇಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.
Published on: 

ಮುಂಬೈ: ನಿತೇಶ್​ ತಿವಾರಿ ನಿರ್ದೇಶನದ ಹಾಗೂ ನಮಿತ್​ ಮಲೋತ್ರಾ ನಿರ್ಮಾಣದ ಬಹು ನೀರಿಕ್ಷಿತ ಸಿನಿಮಾ, 'ರಾಮಾಯಣ' ಭಾರತ ಸೇರಿದಂತೆ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇಲ್ಲಿವರೆಗೆ ಈ ಸಿನಿಮಾ ಸುಮಾರು 1,400 ಕೋಟಿಗೂ ಅಧಿಕ ಗಳಿಕೆಯನ್ನು ಮಾಡಿದೆ ಎಂದು ತಿಳಿದು ಬಂದಿದೆ.

ಭಾರತದ ಮಣ್ಣಿನ ಕಥೆಯನ್ನು ಪ್ರಪಂಚಕ್ಕೆ ತಿಳಿಸಲು ಮುಂದಾಗಿದ್ದ ನಮಿತ್ ಮಲೋತ್ರಾ, ನಿರ್ಮಾಣದ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದರೂ, ನಂತರದ ದಿನಗಳಲ್ಲಿ ಕಲೆಕ್ಷನ್​ ಪ್ರಮಾಣ ಏರಿಕೆ ಕಾಣುತ್ತ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.

ಈ ಸಿನಿಮಾದ ವಿಎಫ್​ಎಕ್ಸ್, ಗ್ರಾಫಿಕ್ಸ್​, ಸಿನಿಮಾಟೋಗ್ರಾಫಿ ಎಲ್ಲಕ್ಕಿಂತ ಹೆಚ್ಚಿನದಾಗಿ ಈ ಸಿನಿಮಾದ ವಿಲನ್​ ಅಂದರೆ ರಾವಣನ ಪಾತ್ರದಲ್ಲಿ ರಾಕಿಂಗ್​ಸ್ಟಾರ್​ ಯಶ್​ ಅಭಿನಯವನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಆದರೆ, ಇದರ ಬೆನ್ನಲೆ, ಕಥಾನಕದ ಬಹುಮುಖ್ಯ ಪಾತ್ರವಾದ ಸೀತೆಯನ್ನು ಒಬ್ಬ ಸೇನಾನಿ, ಕ್ಷಾತ್ರ ತೇಜವುಳ್ಳ ಮಹಿಳೆಯಾಗಿ ತೋರಿಸಿರುವುದು ಕೆಲವರ ನಿರಾಸೆಗೆ ಮತ್ತು ಬೇಸರಕ್ಕೆ ಕಾರಣವಾಗಿತ್ತು.

ಸೀತೆ ಆ್ಯಕ್ಷನ್​ ಸೀನ್​ಗೆ ಆಕ್ರೋಶ!

ಈ ಸಿನಿಮಾದಲ್ಲಿ ಸೀತಾ ಮಾತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ, ಚಿತ್ರದ ಕೆಲ ದೃಶ್ಯಗಳಲ್ಲಿ ಆ್ಯಕ್ಷನ್​ ಸೀನ್​ಗಳಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಕೆಲವೊಂದಿಷ್ಟು ಜನ ಸೀತಾ ಮಾತೆಯನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿದ್ದಾರೆ.

ಸೀತೆ ಒಬ್ಬಳು ಯೋಧಳಾಗಿದ್ದೆ, ರಾವಣ ಅಪಹರಣ ಮಾಡಲು ಬಂದಾಗ, ಆಕೆ ಅವನೊಂದಿಗೆ ಹೋರಾಟ ಮಾಡುತ್ತಿದ್ದಳಲ್ಲವೇ? ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಮಾತೆಯನ್ನು ಸೌಮ್ಯ, ಗಂಭೀರ ಸ್ವಭಾವದ ರಾಜಕುಮಾರಿಯಾಗಿ ಚಿತ್ರಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಸೀತೆಯನ್ನು ತಪ್ಪಾಗಿ ಚಿತ್ರಿಸಿದ್ದಾರೆಂದು ಆಕ್ರೋಶ ಹೊರಹಾಕಲಾಗಿತ್ತು.

ಸೀತೆ ರಾವಣನನ್ನೇ ಕೊಂದಿದ್ದಾಳೆ!

ಈಗ, ಜನರ ಮನದಲ್ಲಿ ಸೀತೆ ಪಾತ್ರದ ಬಗ್ಗೆ ಎದ್ದಿರುವ ಗೊಂದಲಕ್ಕೆ ಖುದ್ದು ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ತೆರೆ ಎಳೆದಿದ್ದಾರೆ. ನಾನು ಈ ಸಿನಿಮಾವನ್ನು ಕೇವಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿ ತಯಾರಿಸಿಲ್ಲ. ನಮ್ಮ ದೇಶದಲ್ಲಿ ನೂರಕ್ಕೂ ಅಧಿಕ ಪ್ರಕಾರದ ರಾಮಾಯಣಗಳಿವೆ.

Also Read
ಫೋನ್ ಟ್ಯಾಪಿಂಗ್, ಇವಿಎಂ ಹ್ಯಾಕ್ ಬಿಜೆಪಿಗೆ ಹೊಸದೇನಲ್ಲ: 7 ಕಿ.ಮೀ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ಬರಬೇಕಿತ್ತಾ? ಕೇಂದ್ರ ಸರ್ಕಾರದ ವಿರುದ್ಧ ಎಂ.ಬಿ. ಪಾಟೀಲ್ ಆಕ್ರೋಶ! MB Patil
Director Nitesh Tiwari has provided a clarification regarding the criticism surrounding Sita's action sequences in the film 'Ramayana'.

ಇನ್ನು ಸೀತಾ ಪಾತ್ರದ ಬಗ್ಗೆ ಹೇಳುವುದಾದರೆ, ಅದ್ಭುತ ರಾಮಾಯಣ ಹಾಗೂ 15 ನೇ ಶತಮಾನದ ಒಡಿಯಾ ಬಿಲಂಕ ರಾಮಾಯಣದ ಪ್ರಕಾರ ಸೀತೆ ಕೇವಲ ಒಬ್ಬ ಸೌಮ್ಯ ಸ್ವಭಾವದ ಹೆಣ್ಣು ಮಾತ್ರವಲ್ಲ, ಆಕೆಯೊಬ್ಬಳು ಸಶಕ್ತ ಯೋಧೆ, ಯುದ್ಧಕಲಾ ನಿಪುಣೆ ಹಾಗೂ ಸರ್ವಶಕ್ತ ರಾಜಕುಮಾರಿ ಎಂದು ಹೇಳಲಾಗಿದೆ. ನಾನೂ ಈ ಕೃತಿಗಳನ್ನು ಆಧರಿಸಿಯೇ ಸೀತೆ ಪಾತ್ರವನ್ನು ಹೆಣೆದಿದ್ದೆನೆಂದು ಹೇಳಿದ್ದಾರೆ.

ಅಂತಯೇ, ಈ ಕೃತಿಗಳಲ್ಲಿ ಪ್ರಭು ಶ್ರೀರಾಮನು ಅಶಕ್ತನಾಗಿ ಬಿದ್ದಿದ್ದಾಗ, ಸೀತಾ ಮಾತೆ ಮಹಾಕಾಳಿಯ ರೂಪವನ್ನು ತಾಳಿ, ಸಾವಿರ ತಲೆಗಳನ್ನು ಹೊಂದಿದ್ದ ರಾಕ್ಷಕ ನಾಯಕ ಸಹಸ್ರ ರಾವಣನನ್ನು ಸಂಹರಿಸುತ್ತಾಳೆಂದು ಹೇಳಲಾಗಿದೆ. ಇದನ್ನೆಲ್ಲಾ ಓದಿ, ಪಾತ್ರಸೃಷ್ಟಿ ಮಾಡುವಾಗ ನಾನು, ಸೀತೆಯನ್ನು ಒಬ್ಬ ಸಮರ್ಥ ಯೋಧಳಾಗಿಯೇ ಚಿತ್ರಿಸಿದ್ದೇನೆಂದು ನಿರ್ದೇಶಕ ನಿತೇಶ್​ ತಿವಾರಿ ತಿಳಿಸಿದ್ದಾರೆ, (ಏಜೆನ್ಸೀಸ್​).