ಅಮೆರಿಕದ ಷರತ್ತನ್ನು ಒಪ್ಪದ ಇರಾನ್; ಕಳೆದ ಒಂದು ದಿನದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ; ಜೆಡಿ ವ್ಯಾನ್ಸ್​ | JD Vance

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
Published on
ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಶಾಂತಿ ಮಾತುಕತೆಯಲ್ಲಿ ಇರಾನ್ ಅಮೆರಿಕದ ಷರತ್ತುಗಳನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದು, ಕಳೆದ ಒಂದು ದಿನದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್(JD Vance) ಹೇಳಿದ್ದಾರೆ.
ಇಸ್ಲಾಮಾಬಾದ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅಧ್ಯಕ್ಷರು(ಡೊನಾಲ್ಡ್ ಟ್ರಂಪ್) ನಾವು ಉತ್ತಮ ನಂಬಿಕೆಯಿಂದ ಬಂದು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು. ಆದರೆ ದುರದೃಷ್ಟವಶಾತ್, ಯಾವುದೇ ಪ್ರಗತಿಯಾಗಲಿಲ್ಲ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲ್ಲ ಮತ್ತು ಅಭಿವೃದ್ಧಿಪಡಿಸಲ್ಲ ಎಂಬ ಬದ್ಧತೆ ಅಮೆರಿಕಕ್ಕೆ ಬೇಕು. ಅವರ ಪರಮಾಣು ಕಾರ್ಯಕ್ರಮ ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದರಿಂದ ನಾಶವಾಗಿವೆ. ಆದ್ರೆ ಮುಂದೆ ಅಭಿವೃದ್ಧಿಪಡಿಸಲ್ಲ ಎಂಬ ಭರವಸೆಯನ್ನು ಇರಾನ್ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ನಾವು ಇರಾನ್ ಅನ್ನು ಸಂಪೂರ್ಣವಾಗಿ ಸೋಲಿಸಿದ್ದೇವೆ. ಬಹುಶಃ ಅವರು ಒಪ್ಪಂದ ಮಾಡಿಕೊಳ್ಳಬಹುದು ಅಥವಾ ಮಾಡಿಕೊಳ್ಳದಿರಬಹುದು. ಅಮೆರಿಕದ ದೃಷ್ಟಿಕೋನದಿಂದ, ನನಗೆ ಅದು ಮುಖ್ಯವಲ್ಲ, ಟೆಹ್ರಾನ್ ಅನ್ನು ಮಿಲಿಟರಿಯಾಗಿ ಸೋಲಿಸಿದ್ದೇವೆ. ಇರಾನ್‌ನ ಮಿಲಿಟರಿ ಸಾಮರ್ಥ್ಯಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ನಾವು ಅವರ ನೌಕಾಪಡೆಯನ್ನು, ವಾಯುಪಡೆಯನ್ನು ಸೋಲಿಸಿದ್ದೇವೆ. ಯುದ್ಧ ವಿಮಾನ ತಡೆಯುವ ಅವರ ರಾಡರ್ ಸಿಸ್ಟಮ್​ ಅನ್ನು ಹೊಡೆದಾಕಿದ್ದೇವೆ. ಅವರ ನಾಯಕರೆಲ್ಲರೂ ಸತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಪರಮಾಣು ವಿಷಯದ ಜೊತೆ ಹೊರ್ಮುಜ್ ಜಲಸಂಧಿ ವಿಚಾರವೂ ಒಂದು. ಇರಾನ್ ಅದನ್ನು ಮುಚ್ಚಿದೆ. ಯುಎಸ್ ನೌಕಾಪಡೆಯು ಜಲಸಂಧಿಯಲ್ಲಿ ಗಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದೆ, ಅಲ್ಲಿ ಹಡಗು ಚಟುವಟಿಕೆಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. ನಮ್ಮ ದೇಶಕ್ಕೆ ದೋಣಿಗಳು ಸಾಗಿ ಹೋಗುತ್ತಿವೆ, ದೊಡ್ಡ, ಸುಂದರವಾದ ಟ್ಯಾಂಕರ್‌ಗಳು ಮತ್ತು ನಾವು ಅವುಗಳನ್ನು ತೈಲ ಮತ್ತು ಅನಿಲ ಮತ್ತು ಇತರ ಎಲ್ಲದರಿಂದ ತುಂಬಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಹೊರತಾಗಿ ಮಾತುಕತೆಗಳ ಪ್ರಮುಖ ಚರ್ಚಾ ವಿಷಯಗಳಲ್ಲಿ ಹಾರ್ಮುಜ್ ಜಲಸಂಧಿಯೂ ಒಂದು. ಪರ್ಷಿಯನ್ ಕೊಲ್ಲಿಯ ಪ್ರಮುಖ ಸಮುದ್ರ ದಟ್ಟಣೆಯ ತಾಣ ಇದಾಗಿದ್ದು, ಇರಾನ್‌ನಿಂದ ಬಹುತೇಕ ನಿರ್ಬಂಧಿಸಲ್ಪಟ್ಟಿದೆ. ಯುಎಸ್ ನೌಕಾಪಡೆಯು ಜಲಸಂಧಿಯಲ್ಲಿ ಗಣಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದೆ, ಅಲ್ಲಿ ಹಡಗು ಚಟುವಟಿಕೆಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. "ನಮ್ಮ ದೇಶಕ್ಕೆ ದೋಣಿಗಳು ಸಾಗಿ ಹೋಗುತ್ತಿವೆ, ದೊಡ್ಡ, ಸುಂದರವಾದ ಟ್ಯಾಂಕರ್‌ಗಳು ಮತ್ತು ನಾವು ಅವುಗಳನ್ನು ತೈಲ ಮತ್ತು ಅನಿಲ ಮತ್ತು ಇತರ ಎಲ್ಲದರಿಂದ ತುಂಬಿಸುತ್ತಿದ್ದೇವೆ. ಮತ್ತು ಅದನ್ನು ನೋಡಲು ತುಂಬಾ ಸುಂದರವಾದ ವಿಷಯವಾಗಿದೆ" ಎಂದು ಅವರು ಹೇಳಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net