ಸಂಸತ್ ಆವರಣದಲ್ಲಿ ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮುಖಾಮುಖಿ; ಕ್ಷಣಕಾಲ ಪರಸ್ಪರ ಮಾತುಕತೆ; ವಿಡಿಯೋ ವೈರಲ್ | PM Modi-Rahul Gandhi
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಮಾತುಕತೆ
Published on:
Copied
Follow Us
ನವದೆಹಲಿ: ಸಂಸತ್ ಆವರಣದಲ್ಲಿ ನಡೆದ ಮಹಾತ್ಮ ಜ್ಯೋತಿಬಾ ಪುಲೆ ಅವರ 200ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(PM Modi-Rahul Gandhi) ಮುಖಾಮುಖಿಯಾಗಿ ಕ್ಷಣಕಾಲ ಪರಸ್ಪರ ಮಾತುಕತೆ ನಡೆಸಿದ್ದು, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಸಮಾಜ ಸುಧಾರಕನಿಗೆ ಪುಷ್ಪ ನಮನ ಸಲ್ಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
ಈ ವೇಳೆ ಅಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಎಲ್ಲರಿಗೂ ನಮಸ್ಕರಿಸಿ ವಾಪಸ್, ರಾಹುಲ್ ಗಾಂಧಿ ಹತ್ತಿರ ಎದುರಿಗೆ ನಿಂತು ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪ್ರತಿಯಾಗಿ ರಾಹುಲ್ ಸಂಭಾಷಣೆ ನಡೆಸುತ್ತಿರುವುದು ಅಪರೂಪದಲ್ಲೇ ಅಪರೂಪದ ಘಟನೆಯಾಗಿ ಕಾಣಿಸಿಕೊಂಡಿದೆ.
ಚುನಾವಣಾ ರ್ಯಾಲಿ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ಇಬ್ಬರು ನಾಯಕರು ಪರಸ್ಪರ ಟೀಕಾ ಪ್ರಹಾರ ನಡೆಸುತ್ತಿರುತ್ತಾರೆ. ಇತ್ತೀಚೆಗೆ ರಾಹುಲ್ ಗಾಂಧಿ ಅಮೆರಿಕದ ವ್ಯಾಪಾರ ಒಪ್ಪಂದ ಕುರಿತು ಪ್ರಧಾನಿ ಮೋದಿಯನ್ನು ರಾಜಿ ಮಾಡಿಕೊಂಡ ನಾಯಕ, ಅಮೆರಿಕದ ಗುಲಾಮರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಅದೇ ರೀತಿ ಪಂಚರಾಜ್ಯಗಳ ಚುನಾವಣೆ ಸಭೆಗಳಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿಯನ್ನು ಸ್ವಯಂಘೋಷಿತ ರಾಜಕುಮಾರ್ ಎಂದು ವ್ಯಂಗ್ಯವಾಡಿದ್ದರು (ಏಜೆನ್ಸೀಸ್).