ನೇತನ್ಯಾಹು ಆಜ್ಞೆಗಳನ್ನು ಪಾಲಿಸಿದ್ರೆ ಇಡೀ ಪ್ರದೇಶ ಹೊತ್ತಿ ಉರಿಯಲಿದೆ: ಟ್ರಂಪ್ ಅಶ್ಲೀಲ ಬೆದರಿಕೆಗೆ ಇರಾನ್ ತಿರುಗೇಟು | Iran

ಸ್ಪೀಕರ್ ಮೊಹಮ್ಮದ್-ಬಾಘರ್ ಘಾಲಿಬಾಫ್
ಸ್ಪೀಕರ್ ಮೊಹಮ್ಮದ್-ಬಾಘರ್ ಘಾಲಿಬಾಫ್
Published on
ಟೆಹ್ರಾನ್: ಹೋರ್ಮುಜ್ ಜಲಸಂಧಿ ತೆರೆಯದಿಂದ ಮುಂದಿನ 48 ಗಂಟೆಯೊಳಗೆ ಇರಾನ್​ ನರಕಕ್ಕೆ ಹೋಗುತ್ತದೆ ಎಂದು ಅಶ್ಲೀಲ ಪದಗಳಿಂದ ನಿಂದಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಇರಾನ್ ತಿರುಗೇಟು ನೀಡಿದ್ದು, ನೇತನ್ಯಾಹು ಆಜ್ಞೆಗಳನ್ನು ಪಾಲಿಸಿದ್ರೆ ಇಡೀ ಪ್ರದೇಶ ಹೊತ್ತಿ ಉರಿಯಲಿದೆ ಎಂದು ಎಚ್ಚರಿಸಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್-ಬಾಘರ್ ಘಾಲಿಬಾಫ್, ನಿಮ್ಮ ಅಜಾಗರೂಕ ನಡೆಗಳು ಅಮೆರಿಕದ ಪ್ರತಿಯೊಂದು ಕುಟುಂಬವನ್ನು ಜೀವಂತ ನರಕಕ್ಕೆ ಎಳೆಯುತ್ತಿವೆ. ಮತ್ತು ನೀವು ನೆತನ್ಯಾಹು ಆಜ್ಞೆಗಳನ್ನು ಪಾಲಿಸಬೇಕೆಂದು ಒತ್ತಾಯಿಸುತ್ತಿರುವುದರಿಂದ ಇಡೀ ಪ್ರದೇಶ ಹೊತ್ತಿ ಉರಿಯಲಿದೆ. ಯುದ್ಧದಿಂದ ನೀವು ಏನನ್ನೂ ಗಳಿಸುವುದಿಲ್ಲ. ಆ ತಪ್ಪು ಮಾಡಬೇಡಿ. ಇರಾನಿನ ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ಈ ಅಪಾಯಕಾರಿ ಆಟವನ್ನು ಕೊನೆಗೊಳಿಸುವುದು ಮಾತ್ರ ನಿಜವಾದ ಪರಿಹಾರ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಇರಾನ್ ಅನ್ನು ಅಶ್ಲೀಲ ಪದಗಳಿಂದ ನಿಂದಿಸಿ ಪೋಸ್ಟ್ ಹಾಕಿದ್ದ ಟ್ರಂಪ್, ಇರಾನ್​ ಮುಂದಿನ 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕವನ್ನು ನೋಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. 
ಇರಾನ್​ನಲ್ಲಿ ಮಂಗಳವಾರ ವಿದ್ಯುತ್ ಸ್ಥಾವರ ದಿನ ಮತ್ತು ಸೇತುವೆ ದಿನ ಎರಡು ಒಂದೇ ಆಗಿರುತ್ತದೆ. ಅಂತಹದ್ದನ್ನೂ ನೀವು ಎಂದೂ ನೋಡಿರಲ್ಲ. ಹುಚ್ಚು ಕಿಡಿಗೇಡಿಗಳೇ, ಆ ಫಕಿಂಗ್ ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕದಲ್ಲಿ ವಾಸಿಸುವಿರಿ - ಸುಮ್ಮನೇ ಕಾದು ನೋಡಿ! ಅಲ್ಲಾಹನಿಗೆ ಸ್ತೋತ್ರವಾಗಲಿ ಎಂದು ಬರೆದುಕೊಂಡಿದ್ದಾರೆ.
ಬಳಿಕ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್, ಇರಾನ್ ಬೇಗನೇ ಒಪ್ಪಂದ ಮಾಡಿಕೊಳ್ಳದಿದ್ದರೆ, ಅದಕ್ಕೆ ಮುಂದಾಗದಿದ್ದರೇ ನಾನು ಎಲ್ಲವನ್ನೂ ಗಾಳಿಗೆ ತೂರಿ ತೈಲವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net