ಇರಾನ್​ಗೆ ಸರ್ವೋಚ್ಚ ನಾಯಕನಿಲ್ಲ; ಮೊಜ್ತಬಾ ಖಮೇನಿ ಸತ್ತಿದ್ದಾರೆ ಇಲ್ಲ, ಕೆಟ್ಟ ಸ್ಥಿತಿಯಲ್ಲಿದ್ದಾನೆ ಎಂದ ಡೊನಾಲ್ಡ್ ಟ್ರಂಪ್ | Donald Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ಮಿಯಾಮಿ: ಅಮೆರಿಕಾದ ವ್ಯಾಪಕ ಕಾರ್ಯಾಚರಣೆಗಳಿಂದ ಇರಾನ್ ಮಿಲಿಟರಿ ದುರ್ಬಲಗೊಂಡಿದ್ದು, ಅದರ ನಾಯಕತ್ವ ಕುಸಿದಿದೆ. ಮತ್ತು ಇರಾನ್​ಗೆ ಸರ್ವೋಚ್ಚ ನಾಯಕನಿಲ್ಲ, ಮೊಜ್ತಬಾ ಖಮೇನಿ ಸತ್ತಿದ್ದಾರೆ ಇಲ್ಲ, ಕೆಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಿಯಾಮಿಯಲ್ಲಿ ನಡೆದ ಭವಿಷ್ಯದ ಹೂಡಿಕೆಯ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯನ್ನು ಉಲ್ಲೇಖಿಸಿ, ಇರಾನ್​ನ ನಾಯಕತ್ವ ರಚನೆ ಕುಸಿದಿದೆ. ಅವರ ಮಗ ಮತ್ತು ಉತ್ತರಾಧಿಕಾರಿ ಮೊಜ್ತಾಬಾ ಖಮೇನಿ ಆ ಹುದ್ದೆಗೆ ನೇಮಕಗೊಂಡಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸರ್ವೋಚ್ಚ ನಾಯಕ ಇನ್ನು ಮುಂದೆ ಸರ್ವೋಚ್ಚನಲ್ಲ ಎಂದಿದ್ದಾರೆ.
ಮುಂದುವರೆದು, ಹಾಲಿ ಸರ್ವೋಚ್ಚ ನಾಯಕ ಸತ್ತಿದ್ದಾರೆ ಅಥವಾದ ತುಂಬಾ ಕೆಟ್ಟ ಸ್ಥಿತಿಯಲ್ಲಿರಬಹದು. ಆತನಿಂದ ಯಾವುದೇ ಸುದ್ದಿ ಬರುತ್ತಿಲ್ಲ. ಇಲ್ಲ ಇದರಿಂದ ನನ್ನನ್ನು ದೂರವಿಡಿ ಎಂದು ಹೇಳ್ತಿರಬಹುದು. ಯಾರೂ ಮುನ್ನಡೆಸಲು ಬಯಸದ ಏಕೈಕ ದೇಶ ಅದು ಎಂದು ವ್ಯಂಗ್ಯವಾಡಿದ್ದಾರೆ.
ನಾವು ಅವರನ್ನು ಹೊಡೆದಿದ್ದೇವೆ. ಇರಾನ್​ನ ಯುದ್ಧ ವಿಮಾನ ವಿರೋಧಿ ಮತ್ತು ಸಂವಹನ ಸಾಮರ್ಥ್ಯಗಳು ಸಂಪೂರ್ಣವಾಗಿ ನಾಶವಾಗಿವೆ. ಮತ್ತು ಅವರ ನಾಯಕರು ಎಲ್ಲರೂ ಸತ್ತಿದ್ದಾರೆ. ಅವರಿಗೆ ಏನಾಗುತ್ತಿದೆ ಎಂದು ತಿಳಿದಿಲ್ಲ. ಅವರು ಎಷ್ಟು ಹೊಡೆತ ತಿನ್ನುತ್ತಿದ್ದಾರೆಂದರೆ ಯಾರಾದರೂ ಮಾತುಕತೆಗೆ ಬರುತ್ತಾರೆ. ಬನ್ನಿ ಎಂದು ಬೇಡಿಕೊಳ್ಳುತ್ತಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ.
ಇನ್ನೂ ಇರಾನ್ ವಿರುದ್ಧದ ಯುದ್ದಕ್ಕೆ ಐದು ದಿನಗಳ ಕಾಲ ವಿರಾಮವನ್ನು ಘೋಷಣೆ ಮಾಡಿದ್ದಾಗಿ ಈ ಹಿಂದೆ ಟ್ರಂಪ್ ಹೇಳಿದ್ದರು. ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್​ ಮಾಡಿದ್ದ ಅವರು, ಕಳೆದ ಎರಡು ದಿನಗಳಿಂದ ಇರಾನ್ ಜೊತೆ ಅತ್ಯಂತ ಆಳವಾದ ಮತ್ತು ರಚನಾತ್ಮಕ ಚರ್ಚೆಗಳು ನಡೆದಿವೆ. ಈ ಮಾತುಕತೆಗಳ ಸಕಾರಾತ್ಮಕ ಧೋರಣೆಯನ್ನು ಗಮನಿಸಿ, ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ದಾಳಿಗಳನ್ನು 5 ದಿನಗಳ ಕಾಲ ಮುಂದೂಡುವಂತೆ ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದರು. ಈ ಮಾತುಕತೆಗಳು ವಾರದ ಪೂರ್ತಿ ಮುಂದುವರಿಯಲಿವೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net