ಭಯೋತ್ಪಾದನೆ ಪೋಷಿಸುವ ದೇಶದಲ್ಲಿ ಸಿಂಧೂ ನದಿ ಹರಿಯಲ್ಲ: ಆಪರೇಷನ್​ ಸಿಂಧೂರ್​ ಮೂಲಕ ನಮ್ಮ ಶಕ್ತಿ ತೋರಿಸಿದ್ದೆವೆ; ಪಾಕಿಸ್ತಾನಕ್ಕೆ ರಾಜನಾಥ್​ ಸಿಂಗ್​ ಎಚ್ಚರಿಕೆ | Rajnath Singh warns Pakistan

ಉಗ್ರರನ್ನು ಪೋಷಿಸುವ ದೇಶಕ್ಕೆ ಸಿಂಧೂ ನದಿ ನೀರು ಬಿಡುವುದಿಲ್ಲ: ರಾಜನಾಥ್​ ಸಿಂಗ್​
ಉಗ್ರರನ್ನು ಪೋಷಿಸುವ ದೇಶಕ್ಕೆ ಸಿಂಧೂ ನದಿ ನೀರು ಬಿಡುವುದಿಲ್ಲ: ರಾಜನಾಥ್​ ಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಉಗ್ರರನ್ನು ಪೋಷಿಸುವ ದೇಶಕ್ಕೆ ಸಿಂಧೂ ನದಿ ನೀರು ಬಿಡುವುದಿಲ್ಲ: ರಾಜನಾಥ್​ ಸಿಂಗ್​
  • ಆಪರೇಷನ್ ಸಿಂಧೂರ್ ಮೂಲಕ ನಾವು ಸರಿಯಾದ ಬುದ್ಧಿ ಕಲಿಸಿದ್ದೆವೆ
  • ಮಿಲಿಟರಿ ರಫ್ತಿನತ್ತ ನಮ್ಮ ಚಿತ್ತ: ರಾಜನಾಥ್​ ಸಿಂಗ್​
ಹೈದರಾಬಾದ್​: ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರಕ್ಕೆ ಸಿಂಧೂ ನದಿ ನೀರು ತಲುಪಲು ಭಾರತ ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಝನಾಥ್​ ಸಿಂಗ್ (Rajnath Singh warns Pakistan)​ ಶತ್ರುದೇಶದ ವಿರುದ್ಧ ಗುಡುಗಿದ್ದಾರೆ.
ಹೈದರಾಬಾದ್​ನಲ್ಲಿ ತೆಲಂಗಾಣ ಬಿಜೆಪಿ ಆಯೋಜಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ಸಿಂಗ್​, ಶಾಂತಿ ಮಾತುಕತೆಗೆ ಬಗ್ಗದವರನ್ನು ಆಪರೇಷನ್​ ಸಿಂಧೂರ್​ ಮೂಲಕ ನೆಲಕ್ಕೆ ಎನ್​ಡಿಎ ಸರ್ಕಾರ ಕೆಡವಿದೆ ಎಂದು ಹೇಳಿದ್ದಾರೆ.

ಸಿಂಧೂ ನೀರು ಪಾಕಿಸ್ತಾನಕ್ಕೆ ಸೇರಲ್ಲ!

ಕಾಶ್ಮೀರದ ಪಹಲ್ಗಾಮ್​ನಲ್ಲಿ ಪಾಕಿಸ್ತಾನ ನಡೆಸಿದ ಉಗ್ರ ಕೃತ್ಯದ ನಂತರ ಸಿಂಧೂ ನದಿ ಒಪ್ಪಂದವನ್ನು ನಮ್ಮ ಸರ್ಕಾರ ತಿರಸ್ಕರಿಸಿ, ಒಂದು ತೊಟ್ಟು ನೀರು ಗಡಿದಾಟದಂತೆ ನೋಡಿಕೊಂಡಿದೆ. ಭಯೋತ್ಪಾದನೆಗೆ ಅವಕಾಶ ನೀಡುವ ದೇಶಕ್ಕೆ ನಾವು ನೀರನ್ನು ಸಹ ಕೊಡುವುದಿಲ್ಲ ಎಂಬ ಸಂದೇಶವನ್ನು ಸ್ಪಷ್ಟ ಪಡಿಸಿದ್ದೆವೆ ಎಂದು ಹೇಳಿದರು.
ಪಾಕಿಸ್ತಾನ ಈಗಲಾದರೂ ಬುದ್ಧಿ ಕಲಿಯಬೇಕು. ಇನ್ಮುಂದೆ ಭಾರತದ ವಿರುದ್ಧ ಭಯೋತ್ಪಾದನಾ ಕೆಲಸದಲ್ಲಿ ತೊಡಗಿಕೊಂಡರೆ ಬೆಳೆಕಾಳುಗಳ ಸರಬರಾಜನ್ನು ನಿಲ್ಲಿಸುತ್ತೆವೆಂದು ಎಚ್ಚರಿಕೆ ನೀಡಿದ್ದಾರೆ.

ಮಿಲಿಟರಿ ರಫ್ತಿನತ್ತ ಗಮನ!

ಮಿಲಿಟರಿ ಸ್ವಾವಲಂಬನೆಯತ್ತ ಸರ್ಕಾರದ ಪ್ರಯತ್ನಗಳ ಬಗ್ಗೆ ಮಾತನಾಡಿದ ಸಚಿವರು, ಭಾರತವು ದೇಶೀಯ ಅಗತ್ಯಗಳಿಗೆ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳಿಗೂ ಸರಕುಗಳನ್ನು ಉತ್ಪಾದಿಸುತ್ತಿದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ದೇಶದ ರಫ್ತು 2 ಟ್ರಿಲಿಯನ್ ಡಾಲರ್ ತಲುಪುತ್ತದೆ, ರಕ್ಷಣಾ ಉತ್ಪಾದನೆಯು ಪ್ರಸ್ತುತ 1.50 ಲಕ್ಷ ಕೋಟಿ ರೂ.ಗಳಾಗಿದ್ದು, ಒಂದು ತಿಂಗಳೊಳಗೆ 1.7 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ರಕ್ಷಣಾ ರಫ್ತು 39,000 ಕೋಟಿ ರೂ.ಗಳನ್ನು ತಲುಪಿದೆ ಮತ್ತು ಅದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಾರತವು ಪ್ರಸ್ತುತ 100 ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net