ನವದೆಹಲಿ/ಜ್ಯೂರಿಕ್: ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ(Swiss banks) ಭಾರತೀಯರ ಹಣದ ಪ್ರಮಾಣ 2025ರಲ್ಲಿ ಕುಸಿದಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ಬಿಡುಗಡೆ ಮಾಡಿದ ವಾರ್ಷಿಕ ಅಂಕಿಅಂಶಗಳ ಪ್ರಕಾರ, ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣ 8 ಶೇಕಡಕ್ಕೂ ಹೆಚ್ಚು ಇಳಿದು 3.25 ಬಿಲಿಯನ್ ಸ್ವಿಸ್ ಫ್ರಾಂಕ್‌ಗೆ ತಲುಪಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ₹36,793 ಕೋಟಿ ಆಗುತ್ತದೆ.