ಭಾರತದಿಂದ ಹೂಡಿಕೆಗಳು ಬರುತ್ತಿವೆ; ಅದೇ ಪಾಕಿಸ್ತಾನದಿಂದ ಏನಿದೆ? ಅಮೆರಿಕ ಕಾಂಗ್ರೆಸ್ ಸದಸ್ಯನ ಹೇಳಿಕೆ ವೈರಲ್​

ಅಮೆರಿಕದ ಕಾಂಗ್ರೆಸ್ ಸದಸ್ಯ
ಅಮೆರಿಕದ ಕಾಂಗ್ರೆಸ್ ಸದಸ್ಯ
Published on

ಪ್ರಮುಖ ಮುಖ್ಯಾಂಶಗಳು

  • ಯುಎಸ್​ ನೆಲದಲ್ಲಿ ಭಾರತ ಬೆಂಬಲಿಸಿದ ಅಮೆರಿಕದ ಕಾಂಗ್ರೆಸ್ ಸದಸ್ಯ
  • ಭಾರತ ಹೂಡಿಕೆಗಳನ್ನು ತರುತ್ತಿವೆ. ಆದರೆ, ಪಾಕಿಸ್ತಾನದಿಂದ ಏನು ಬರುತ್ತಿವೆ? ಎಂದು ಪ್ರಶ್ನೆ
ಯುಎಸ್: ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದ, ಜಾಗತಿಕವಾಗಿ ಇತರೆ ದೇಶಗಳ ಮೇಲೆ ಸುಂಕ ಸಮರ ಸಾರುತ್ತಿದ್ದಾರೆ. ಇದು ಭಾರತದ ಮೇಲೂ ದೊಡ್ಡ ಪರಿಣಾಮ ಬೀರಿದೆ. ರಷ್ಯಾದಿಂದ ತೈಲ ಖರೀದಿಸಿದರೆ, ಶೇ.500ರಷ್ಟು ಮತ್ತು ಹೆಚ್ಚುವರಿ ಶೇ.50ರಷ್ಟು ಎಂದೆಲ್ಲ ಸುಂಕದ ಬೆದರಿಕೆಯೊಡ್ಡುತ್ತಿರುವ ಟ್ರಂಪ್​ ರಾಷ್ಟ್ರದ ಕಾಂಗ್ರೆಸ್​ ಸದಸ್ಯ ಇದೀಗ ಭಾರತದ ಪರ ಬ್ಯಾಟ್​ ಬೀಸಿದ್ದಾರೆ. 
ಡೊನಾಲ್ಡ್​ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಸದಸ್ಯರಾದ ಅಮೆರಿಕದ ಕಾಂಗ್ರೆಸ್ ಸದಸ್ಯ ರಿಚ್ ಮೆಕ್‌ಕಾರ್ಮಿಕ್, ಟ್ರಂಪ್ ಅಳವಡಿಸಿಕೊಳ್ಳುತ್ತಿರುವ ನೀತಿಗಳ ಬಗ್ಗೆ ಪ್ರಮುಖ ಹೇಳಿಕೆಗಳನ್ನೇ ಹರಿಬಿಟ್ಟಿದ್ದಾರೆ. ಈ ಮಧ್ಯೆ, ಟ್ರಂಪ್ ಭಾರತದ ಬಗ್ಗೆ ತೋರಿರುವ ವರ್ತನೆಯನ್ನೂ ಟೀಕಿಸಿದ್ದಾರೆ. ಭಾರತ ಅಮೆರಿಕದಲ್ಲಿ ಒಂದಷ್ಟು ಹೂಡಿಕೆಗಳನ್ನಾದರು ಮಾಡುತ್ತಿದೆ. ಆದರೆ, ಪಾಕಿಸ್ತಾನ ಮಾಡುತ್ತಿರುವುದಾದರೂ ಏನು? ಎಂದು ಪ್ರಶ್ನಿಸಿದರು.
ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತವನ್ನು ದೂರವಿಡುವುದು ನಮಗೆಲ್ಲರಿಗೂ ದೊಡ್ಡ ಸಮಸ್ಯೆಯಾಗಲಿದೆ.  ಪಾಕಿಸ್ತಾನವು 300 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆದರೆ, ಅಮೆರಿಕಕ್ಕೆ ಎಷ್ಟರ ಮಟ್ಟಿಗೆ ಹೂಡಿಕೆಯನ್ನು ತರುತ್ತಿದೆ? ಭಾರತ ಹೂಡಿಕೆಯನ್ನು ಮಾತ್ರ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಅಮೆರಿಕದಲ್ಲಿ ಹೂಡಿಕೆಗಳನ್ನು ಸಹ ಮಾಡುತ್ತಿದೆ" ಎಂದು ಕಾರ್ಮಿಕ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರನ್ನು ರಾಷ್ಟ್ರೀಯವಾದಿ ಎಂದು ಕರೆದ ಕಾರ್ಮಿಕ್, ಭಾರತವು ಅಗ್ಗದ ಇಂಧನದಿಂದ ತನ್ನ ಆರ್ಥಿಕತೆಯನ್ನು ವಿಸ್ತರಿಸಲು ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ, ಭಾರತದ ವಿರುದ್ಧ ದ್ವೇಷದ ಕಿಡಿಯನ್ನು ಸೋಕಿಸಿದೆ ಎಂದಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net