ಸ್ಕೂಲ್​ ಡ್ರೆಸ್​ನಲ್ಲಿರುವ ಈ ಮುದ್ದು ಬಾಲಕ ಯಾರೇಳಿ ನೋಡೋಣ? ಬಿಗ್​​ಬಾಸ್​ 12ರ ಫೈನಲಿಸ್ಟ್​ಗಳಲ್ಲಿ ಒಬ್ಬ ಈತ

ಬಿಗ್ ಬಾಸ್​ 12ರ ಫೈನಲಿಸ್ಟ್​ ರಘು ಅವರ ಬಾಲ್ಯದ ಫೋಟೋ
ಬಿಗ್ ಬಾಸ್​ 12ರ ಫೈನಲಿಸ್ಟ್​ ರಘು ಅವರ ಬಾಲ್ಯದ ಫೋಟೋ
Published on

ಪ್ರಮುಖ ಮುಖ್ಯಾಂಶಗಳು

  • ಬಿಗ್​ಬಾಸ್​ ಶೋ ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ
  • ಪ್ರಸ್ತುತ ನಡೆಯುತ್ತಿರುವ 12ನೇ ಸೀಸನ್​ ಅಂತಿಮ ಘಟಕ್ಕೆ ತಲುಪಿದೆ
  • 6 ಫೈನಲಿಸ್ಟ್​ ಪೈಕಿ ಯಾರಿಗೆ 12 ಸೀಸನ್​ ಕಿರೀಟ?
  • ಈ ಮಧ್ಯೆ ಮ್ಯೂಟೆಂಟ್​ ರಘು ಅವರ ಬಾಲ್ಯದ ಫೋಟೋ ವೈರಲ್
ಬೆಂಗಳೂರು: ಬಿಗ್​ಬಾಸ್​ ಶೋ (BBK 12) ಬಗ್ಗೆ ವಿಶೇಷವಾಗಿ ಹಾಗೂ ಹೆಚ್ಚೇನು ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಕಾರ್ಯಕ್ರಮ, ವೀಕ್ಷಕರಿಂದ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಪ್ರಸ್ತುತ ನಡೆಯುತ್ತಿರುವ 12ನೇ ಸೀಸನ್​ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಗಿಲ್ಲಿ ನಟ, ಅಶ್ವಿನಿ, ರಘು ಸೇರಿ ಒಟ್ಟು ಆರು ಮಂದಿ ಫಿನಾಲೆ ರೇಸ್​ನಲ್ಲಿದ್ದಾರೆ. ಇವರ ಪೈಕಿ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬುದು ಭಾನುವಾರದ (ಜ.18) ಗ್ರ್ಯಾಂಡ್​ ಫಿನಾಲೆ ಸಂಚಿಕೆಯ ಕೊನೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಮಿಡ್​ವೀಕ್​ ಎಲಿಮಿನೇಷನ್​ನಲ್ಲಿ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋದ ಬಳಿಕ ಬಿಗ್ ಬಾಸ್​ ಸೀಸನ್​ 12ರ ಫಿನಾಲೆ ವೇದಿಕೆಯಲ್ಲಿ ಆರು ಮಂದಿ ಇರಲಿದ್ದಾರೆ ಎಂಬುದು ಖಚಿತವಾಯಿತು. ಈ ರೇಸ್​ನಲ್ಲಿ ಗಿಲ್ಲಿ ನಟ, ಅಶ್ವಿನಿ, ಮ್ಯೂಟೆಂಟ್​ ರಘು, ರಕ್ಷಿತಾ, ಕಾವ್ಯ ಮತ್ತು ಧನುಷ್​ ಇದ್ದಾರೆ. ಈ ಆರು ಫೈನಲಿಸ್ಟ್​ಗಳ ಪೈಕಿ ಯಾರು ಶನಿವಾರದ ಪ್ರೀ-ಫಿನಾಲೆಯಲ್ಲಿ ಎಲಿಮಿನೇಟ್​ ಆಗ್ತಾರೆ ಮತ್ತು ಯಾರು ಐವರು ಟಾಪ್​ 5 ಆಗಿ ಕೊನೆಯ ಸಂಚಿಕೆಗೆ ತಲುಪುತ್ತಾರೆ ಎಂಬುದು ವೀಕ್ಷಕರ ಕುತೂಹಲ.

ರಘು ಅವರ ಕ್ಯೂಟೆಸ್ಟ್​ ಫೋಟೋ

ಬಿಗ್ ಬಾಸ್​ ಸೀಸನ್​ 12ರ ಮಧ್ಯಂತರ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶಿಸಿದ ಕಟ್ಟುಮಸ್ತಾದ ದೇಹ ಹೊಂದಿರುವ ರಘು, ರಿಷಾ ಮತ್ತು ಸೂರಜ್​ ಜತೆ ವೈರ್ಲ್​ ಕಾರ್ಡ್​ ಸ್ಪರ್ಧಿಯಾಗಿ ಖಡಕ್ ಎಂಟ್ರಿಕೊಟ್ಟರು. ಬಿಗ್ ಮನೆಗೆ ಬಂದ ಮೊದಲೇ ದಿನವೇ ಅಶ್ವಿನಿ ಜತೆ ಮಾತಿನ ಚಕಮಕಿಗಿಳಿದ ರಘು, ಆ ನಂತರ ತಮ್ಮ ಮುಗ್ಧತೆಯಿಂದಲೇ ನೋಡುಗರ ಹೃದಯ ಗೆದ್ದರು. ಅಂದಿನಿಂದ ಕಠಿಣ ಟಾಸ್ಕ್​ ಸೇರಿ ಇತರೆ ಚಟುವಟಿಕೆಗಳನ್ನು ಉತ್ತಮವಾಗಿ ಮಾಡಿಕೊಂಡು ಬಂದಿರುವ ರಘು, ಇಂದು ಫಿನಾಲೆ ವೇದಿಕೆ ಹತ್ತಿರುವುದು ಅವರ ಅಭಿಮಾನಿಗಳಲ್ಲಿ ಬಹಳ ಖುಷಿ ತಂದಿದೆ. ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ, ಅವರ ಶಾಲಾ ಸಮಯದ ಫೋಟೋವೊಂದು ನಮಗೆ ಲಭಿಸಿದೆ.

ಗುಂಡು ಮುಖದ ರಘು....

ಬೆಂಗಳೂರಿನ ಇಂಡಿಯನ್ ಹೈಸ್ಕೂಲ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ರಘು ಅವರ ಮುದ್ದಾದ ಫೋಟೋವಿದು ಎಂದು ಹೇಳಲಾಗಿದೆ. ಶಾಲೆಯ ಸಮಯದಲ್ಲಿ ರಘು ಮುದ್ದು ಮುಖದ ಹುಡುಗ ಎಂಬುದಂತು ಇದರಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇದರೊಟ್ಟಿಗೆ ಅದೇ ಶಾಲೆಯ ಕ್ರೀಡಾ ದಿನದಂದು ಅತಿಥಿಯಾಗಿ ಭೇಟಿ ನೀಡಿರುವ ರಘು, ಮಕ್ಕಳಿಗೆ ಬಹುಮಾನ ವಿತರಿಸಿರುವ ಫೋಟೋಗಳು ಸಹ ಲಭಿಸಿವೆ. ಕೇವಲ ಬಿಗ್ ಬಾಸ್​ನಲ್ಲಿ ಮಾತ್ರ ಕಾಣಲು ಸಿಕ್ಕಿದ್ದ ರಘು ಅವರ ಬಾಲ್ಯದ ಫೋಟೋಗಳು ನಿಜಕ್ಕೂ ಅವರ ಅಭಿಮಾನಿಗಳಲ್ಲಿ ಮಂದಹಾಸ ಮೂಡಿಸುತ್ತದೆ ಎಂದೇ ಹೇಳಬಹುದು.
ಬಿಗ್ ಬಾಸ್​ ಇತಿಹಾಸದಲ್ಲೇ ಇದು ಮೊದಲು!
ಬಿಗ್ ಬಾಸ್​ ಇತಿಹಾಸದಲ್ಲೇ ಇದು ಮೊದಲು ಅನಿಸುತ್ತದೆ. ಫಿನಾಲೆಗೂ ಮೊದಲೇ ಜನರು ಇವರೇ ಗೆಲ್ತಾರೆ ಮತ್ತು ಸೀಸನ್​ 12ರ ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎಂದು ಬಹಳ ಖಚಿತವಾಗಿ ಹೇಳುತ್ತಿರುವುದು. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ, ರಸ್ತೆಬದಿ ಮತ್ತು ನಗರದ ಸರ್ಕಲ್, ಆಟೋ​ಗಳಲ್ಲಿ ಬೃಹತ್​ ಪೋಸ್ಟರ್​, ಬ್ಯಾನರ್​ಗಳನ್ನು ಹಾಕುವ ಮೂಲಕ ನಿರೀಕ್ಷೆಗೂ ಮೀರಿದ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಜನರ ಅಭಿಪ್ರಾಯ ಗಿಲ್ಲಿ ಪರವಾಗಿಯೇ ಇದೆ. ಗಿಲ್ಲಿಯೇ ವಿನ್ನರ್​ ಎಂದು ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಮೀರಿ ಅಭಿಮಾನಿಯೊಬ್ಬರು ಗಿಲ್ಲಿ ಮುಖದ ಟ್ಯಾಟೂವನ್ನು ತಮ್ಮ ತೋಳಿನ ಮೇಲೆ ಹಾಕಿಸಿಕೊಳ್ಳುವ ಮೂಲಕ ಆತನೇ ಗೆಲ್ಲಬೇಕು ಎಂದಿದ್ದಾರೆ. ಅಷ್ಟಕ್ಕೂ ಅಧಿಕೃತ ಘೋಷಣೆಯೊಂದೇ ಇದಕ್ಕೆಲ್ಲ ಸ್ಪಷ್ಟ ಉತ್ತರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net