ನಾನು ಸಂಸದನಾದರೂ ಹೋಟೆಲ್​ ಕೊಡಲಿಲ್ಲ: ಭಾರತ, ಅಮೆರಿಕನ್ನರಿಗೆ ಸಕಲ ಸವಲತ್ತು, ಪಾಕಿಸ್ತಾನದವರಿಗೆ ಗೇಟ್​ಪಾಸ್​; UAE ವಿರುದ್ಧ ಕೈಸರ್​ ಕಿಡಿ! Asad Qaiser on UAE

ಯುಎಇ ವಿರುದ್ಧ ಪಾಕ್ ಸಂಸದ ಅಸಾದ್​​ ಕೈಸರ್ ಆಕ್ರೋಶ
ಯುಎಇ ವಿರುದ್ಧ ಪಾಕ್ ಸಂಸದ ಅಸಾದ್​​ ಕೈಸರ್ ಆಕ್ರೋಶ
Published on

ಪ್ರಮುಖ ಮುಖ್ಯಾಂಶಗಳು

  • ನಾನು ಸಂಸದನಾದರೂ ನನಗೆ ಹೋಟೆಲ್ ರೂಮ್ ಕೊಡಲಿಲ್ಲ!
  • ಯುಎಇ ಹೋಟೆಲ್‌ನಲ್ಲಿ ಪಾಕಿಸ್ತಾನಿಗಳಿಗೆ ನಿರ್ಬಂಧ ಹೇರಿ, ಭಾರತೀಯರು ಹಾಗೂ ಅಮೆರಿಕನ್ನರಿಗೆ ಆದ್ಯತೆ
  • ಯುಎಇ ವಿರುದ್ಧ ಪಾಕ್ ಸಂಸದ ಅಸಾದ್​​ ಕೈಸರ್ ಆಕ್ರೋಶ
ಇಸ್ಲಾಮಾಬಾದ್​: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಹಾಗೂ ಅಲ್ಲಿನ ನಾಗರಿಕರಿಗೆ ಇತರ ದೇಶದ ನಾಗರಿಕರಿಗೆ ನೀಡುವ ಬೆಲೆ ಮತ್ತು ಗೌರವವನ್ನು ನೀಡಲಾಗುತ್ತಿಲ್ಲವೆಂದು ಪಾಕಿಸ್ತಾನದ ಸಂಸದರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.
ಪಾಕಿಸ್ತಾನದ ನ್ಯಾಷನಲ್​ ಅಸೆಂಬ್ಲಿಯಲ್ಲಿ ಸಂಸದ ಹಾಗೂ ಮಾಜಿ ಸ್ಪೀಕರ್​ ಅಸಾದ್ ಕೈಸರ್ (Asad Qaiser on UAE), ಯುನೈಟೆಡ್​ ಅರಬ್​ ಎಮರೈಟ್ಸ್​ನಲ್ಲಿ ತಮಗಾದ ಅವಮಾನದ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.

ಭಾರತ, ಅಮೆರಿಕನ್ನರಿಗೆ ಗೌರವ; ನಮಗೆ ಗೇಟ್​ಪಾಸ್​!

ಕೆಲ ದಿನಗಳ ಹಿಂದೆ ತಮ್ಮ ಯುಎಇ ಪ್ರವಾಸದ ಬಗ್ಗೆ ಮಾತನಾಡಿಸ ಕೈಸರ್​, ನಾನು ಇತ್ತೀಚೆಗೆ ಯುನೈಟೆಡ್​ ಅರಬ್​ ಎಮರೈಟ್ಸ್​ಗೆ ಪ್ರವಾಸಕ್ಕೆಂದು ಹೋದಾಗ, ನನ್ನ ವಿಮಾನದ ಹಾರಾಟ ರದ್ದಾಗಿತ್ತು. ಹೀಗಾಗಿ ವಿಮಾನಯಾನ ಸಂಸ್ಥೆಯವರು ಮುಂದಿನ ವಿಮಾನ ಹಾರಾಟವಾಗುವವರೆಗೆ ಪ್ರಯಾಣಿಕರಿಗೆ ತಂಗಲು ಹೋಟೆಲ್​ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.

ಆದರೆ, ಅಲ್ಲಿ ಕೇವಲ ಭಾರತ ಮತ್ತು ಅಮೆರಿಕದ ಪಾಸ್​ಪೋರ್ಟ್​ ಹೊಂದಿದ್ದ ಪ್ರಯಾಣಿಕರಿಗೆ ಮಾತ್ರ ಹೋಟೆಲ್​ ನೀಡುತ್ತಿದ್ದರು. ಪಾಕಿಸ್ತಾನದ ಪಾಸ್​ಪೋರ್ಟ್​ ಹೊಂದಿದ್ದ, ಯಾವೊಬ್ಬನಿಗೂ ಅಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ನಾನು ಪಾಕಿಸ್ತಾನದ ರಾಜಕೀಯ ನಾಯಕ ಎಂದರೂ ಸಹ ನನಗೂ ಕೂಡ ಅಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿಲ್ಲ ಎಂದಿದ್ದಾರೆ.


ನಮ್ಮವರೇ ಹೀಗೆ ಮಾಡಿದರೆ ಹೇಗೆ?

ಯುಎಇ ಮಾತನ್ನು ಪ್ರಾರಂಭಿಸಿದರೆ, ಯುನಿವರ್ಸ್​ಲ್​ ಬ್ರದರ್​ಹೂಡ್​ ಬಗ್ಗೆ ಮಾತನಾಡುತ್ತೆ, ಆದರೆ ಅದೇ ಧರ್ಮದ ನಮ್ಮನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತೆ. ಈ ರೀತಿಯ ದ್ವಂದ್ವ ನೀತಿಯಿಂದ ಜಗತ್ತಿಗೆ ತಪ್ಪಾದ ಸಂದೇಶ ರವಾನೆಯಾಗುತ್ತದೆ ಎಂದು ಕೈಸರ್​ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಾಕಿಸ್ತಾನ ಕೂಡ, ಯನೈಟೆಡ್​ ಅರಬ್​ ಎಮರೈಟ್ಸ್​​ ಜೊತೆಗಿನ ಸ್ನೇಹ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ತುರ್ತು ಅಗತ್ಯವಿದೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net