ಜಪಾನ್ ಮತ್ತು ಚೀನಾ ನಡುವೆ ಹೆಚ್ಚಿದ ಉದ್ವಿಗ್ನತೆ; ಸಂಘರ್ಷಕ್ಕೆ ಕಾರಣವೇನು? Japan and China
ಸಾಂದರ್ಭಿಕ ಚಿತ್ರ
Published on:
Copied
Follow Us
ಬೀಜಿಂಗ್: ತೈವಾನ್‌ಗೆ ಸಮೀಪವಿರುವ ದ್ವೀಪದಲ್ಲಿ ಕ್ಷಿಪಣಿಗಳನ್ನು ನಿಯೋಜಿಸುವ ಜಪಾನ್ನ(Japan and China) ಯೋಜನೆಗಳನ್ನು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಚೀನಾ ಹೇಳಿದೆ. ಅಲ್ಲದೆ, ಈ ಒಂದು ನೆಡೆ ಚೀನಾ ಮತ್ತು ಜಪಾನ್ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಯೋನಾಗುನಿ ದ್ವೀಪದಲ್ಲಿ ಜಪಾನ್ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಲು ಮತ್ತು ಮಿಲಿಟರಿ ಮುಖಾಮುಖಿಯನ್ನು ಪ್ರಚೋದಿಸಲು ಉದ್ದೇಶಪೂರ್ವಕ ನಡೆ ಎಂದು ಹೇಳಿದ್ದಾರೆ.
ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಭಾನುವಾರ ಯೋನಾಗುನಿ ದ್ವೀಪದಲ್ಲಿರುವ ಸೇನಾ ನೆಲೆಗೆ ಭೇಟಿ ನೀಡಿ, ಈ ನಿಯೋಜನೆಯು ನಮ್ಮ ದೇಶದ ಮೇಲೆ ಸಶಸ್ತ್ರ ದಾಳಿಯ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ ನಂತರ ಈ ಪ್ರತಿಕ್ರಿಯೆ ಬಂದಿದೆ.
ತೈವಾನ್ ಪ್ರದೇಶಕ್ಕೆ ಸಮೀಪದಲ್ಲಿರುವ ತನ್ನ ನೈಋತ್ಯ ಯೋನಾಗುನಿ ದ್ವೀಪದಲ್ಲಿ ಜಪಾನ್ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.‘
ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವಿರುವ ಟೈಪ್-03 ಮಧ್ಯಮ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ಹೊಂದಿದ ಘಟಕವನ್ನು ನಿಯೋಜಿಸುವ ಜಪಾನ್ನ ಯೋಜನೆಗಳು ಚೀನಾವನ್ನು ಕೆರಳಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಚೀನಾ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿದ್ದು, ಇದರಲ್ಲಿ ಪೂರ್ವ ಥಿಯೇಟರ್ ಕಮಾಂಡ್‌ನ ಭಾಗವಾಗಿರುವ ಪಿಎಲ್‌ಎ ನೌಕಾಪಡೆಯ ಘಟಕದ ಕವಾಯತು ಸೇರಿದೆ.
ಉದ್ವಿಗ್ನತೆಗೆ ಕಾರಣವೇನು?
ತೈವಾನ್ ಮೇಲೆ ಚೀನಾದ ದಾಳಿಯ ಬಗ್ಗೆ ಜಪಾನ್ ಪ್ರಧಾನಿ ಸನೇ ತಕೈಚಿಯು ಇತ್ತೀಚಿನ ಹೇಳಿಕೆಗಳಿಂದ ಉಭಯ ದೇಶಗಳ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವ ಮಧ್ಯೆಯೇ, ಎರಡೂ ಕಡೆಯಿಂದ ಕ್ಷಿಪಣಿಗಳ ನಿಯೋಜನೆ ಮತ್ತು ಮಿಲಿಟರಿ ಸಂಘರ್ಷಕ್ಕೆ ಕಾರಣವಾಗುವ ಹಂತಕ್ಕೆ ಬಂದಿದೆ.
ಈ ತಿಂಗಳ ಆರಂಭದಲ್ಲಿ ತಕೈಚಿ, ತೈವಾನ್ ಮೇಲೆ ಚೀನಾ ನಡೆಸುವ ಮಿಲಿಟರಿ ದಾಳಿಯು ಜಪಾನ್‌ಗೆ ಬದುಕುಳಿಯುವ-ಅಪಾಯದ ಪರಿಸ್ಥಿತಿಯನ್ನು ಉಂಟು ಮಾಡಬಹುದು. ಇದು ಜಪಾನ್‌ಗೆ ವಾಷಿಂಗ್ಟನ್ ಜೊತೆಗೆ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಟೀಕಿಸಿದ್ದರು.
ತೈವಾನ್ ಜಲಸಂಧಿಯಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಲು ಧೈರ್ಯ ಮಾಡಿದರೆ ಜಪಾನ್ ವಿರುದ್ಧ ದೃಢನಿಶ್ಚಯದ ಆತ್ಮರಕ್ಷಣೆಯನ್ನು ತೆಗೆದುಕೊಳ್ಳುವುದಾಗಿ ಚೀನಾ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಪ್ರತಿಜ್ಞೆ ಮಾಡಿದೆ,(ಏಜೆನ್ಸೀಸ್).