ಅವರು ನನ್ನನ್ನು ಕೊಂದರೂ ಪರವಾಗಿಲ್ಲ! ಡಿಸೆಂಬರ್​ನಲ್ಲಿ ಬಾಂಗ್ಲಾದೇಶಕ್ಕೆ ಹೋಗ್ತಿನಿ: ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ! Sheikh Hasina

ಮಾಜಿ ಪ್ರಧಾನಿ ಶೇಖ್ ಹಸೀನಾ ಭಾವುಕ ಘೋಷಣೆ
ಮಾಜಿ ಪ್ರಧಾನಿ ಶೇಖ್ ಹಸೀನಾ ಭಾವುಕ ಘೋಷಣೆ
Published on

ಪ್ರಮುಖ ಮುಖ್ಯಾಂಶಗಳು

  • "ನನ್ನನ್ನು ಕೊಂದರೂ ಪರವಾಗಿಲ್ಲ, ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ"
  • ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾವುಕ ಘೋಷಣೆ
  • 10 ವರ್ಷ ಜೈಲು ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ತಾಯ್ನಾಡಿಗೆ ಮರಳಲು ಶೇಖ್ ಹಸೀನಾ ನಿರ್ಧಾರ
ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನ ಮಂತ್ರಿ ಶೇಖ್​ ಹಸೀನಾ (Sheikh Hasina), ಅವರು ನನ್ನನ್ನು ಬಂಧಿಸಲಿ, ಅಥವಾ ಕೊಂದರು ಪರವಾಗಿಲ್ಲ, ನಾನು ಡಿಸೆಂಬರ್​ ವೇಳೆಗೆ ಬಾಂಗ್ಲಾದೇಶವನ್ನು ಪ್ರವೇಶಿಸಲಿದ್ದೆನೆಂದು ಹೇಳಿದ್ದಾರೆಂದು ವರದಿಯಾಗಿದೆ.
ದೇಶದ ಅಧಿಕಾರಿಂದ ಪದಚ್ಯುತರಾಗಿ, ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​ ಹಸೀನಾ, ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದು, 2026 ರ ಕೊನೆಯಲ್ಲಿ ತವರನ್ನು ಪ್ರವೇಶಿಸುವ ಮಾತನ್ನು ಆಡಿದ್ದಾರೆ.

ಅವರು ನನ್ನನ್ನು ಕೊಂದರೂ ಪರವಾಗಿಲ್ಲ!

2024 ರಲ್ಲಿ ಬಾಂಗ್ಲಾದೇಶದಲ್ಲಿ ಸಂಭವಿಸಿದ ಆಂತರಿಕ ದಂಗೆಯಿಂದ ದೇಶ ತೊರೆದ 78 ವರ್ಷದ ಶೇಖ್​ ಹಸೀನಾ, ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದರು. ನನ್ನ ಪಕ್ಷ ಆವಾಮಿ ಲೀಗ್​ನ ಕಾರ್ಯಕರ್ತರು ಬಾಂಗ್ಲಾದಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ನಾನು ಭಾರತದಲ್ಲಿ ಇರುವುದು ಸರಿಯಲ್ಲ. ಆದ್ದರಿಂದ ನಾನು ಡಿಸೆಂಬರ್​ನಲ್ಲಿ ಬಾಂಗ್ಲಾದೇಶಕ್ಕೆ ತೆರಳಿದ್ದೆನೆ.
ನಾನು ಬಾಂಗ್ಲಾ ತಲುಪುತಿದ್ದಂತೆ ಅಲ್ಲಿನ ಸರ್ಕಾರ ನನ್ನನ್ನು ಬಂಧಿಸಲಿ ಅಥವಾ ಕೊಂದೇ ಹಾಕಲಿ ಆದರೆ ನಾನು ಬಾಂಗ್ಲಾದೇಶವನ್ನು ಪ್ರವೇಶ ಮಾಡಲಿದ್ದೆನೆಂದು ಶೇಖ್​ ಹಸೀನಾ ತಿಳಿಸಿದ್ದಾರೆ. ಒಂದು ವೇಳೆ ಸಾವು ಸಂಭವಿಸಿದರು ನನ್ನ ತವರಿನಲ್ಲಿಯೇ ಪ್ರಾಣ ಬಿಡುತ್ತೆನೆಂದು ಭಾವುಕರಾಗಿ ಹೇಳಿದ್ದಾರೆ.

ಶೇಖ್​ ಹಸೀನಾಗೆ 10 ವರ್ಷ ಜೈಲು ಶಿಕ್ಷೆ!

ಸರ್ಕಾರಿ ವಸತಿ ಯೋಜನೆಯಲ್ಲಿ ಭೂ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಾಂಗ್ಲಾದೇಶ ಸ್ಥಳೀಯ ನ್ಯಾಯಾಲಯ ಸೋಮವಾರ (ಫೆ.2) ದೇಶಭ್ರಷ್ಟ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಢಾಕಾ ವಿಶೇಷ ನ್ಯಾಯಾಧೀಶರ ನ್ಯಾಯಾಲಯ, ನ್ಯಾ. ರಬಿಯುಲ್ ಅಲಂ ತೀರ್ಪನ್ನು ಪ್ರಕಟಿಸಿದ್ದು, ಹಸೀನಾ ಅವರಿಗೆ ಪ್ರತಿ ಪ್ರಕರಣಕ್ಕೆ 5 ವರ್ಷದಂತೆ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವರದಿಯಾಗಿದೆ. ರಾಜುಕ್ ನ್ಯೂ ಟೌನ್ ಯೋಜನೆಯಡಿ ಪ್ಲಾಟ್‌ಗಳ ಹಂಚಿಕೆಯಲ್ಲಿ ಅಕ್ರಮಗಳ ಆರೋಪದ ಮೇಲೆ 78 ವರ್ಷದ ಶೇಖ್ ಹಸೀನಾ, ಸೋದರಳಿಯ ರದ್ವಾನ್ ಮುಜೀಬ್ ಸಿದ್ದಿಕ್ ಮತ್ತು ಸೊಸೆಯಂದಿರಾದ ತುಲಿಪ್ ರಿಜ್ವಾನಾ ಸಿದ್ದಿಕ್ ಮತ್ತು ಅಜ್ಮಿನಾ ಸಿದ್ದಿಕ್ ಮತ್ತು ಇತರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net