ಸ್ಪೇನ್: ದಕ್ಷಿಣ ಯುರೋಪ್ನಲ್ಲಿ ಈ ವರ್ಷದ ಬೇಸಿಗೆಯಲ್ಲಿ ಭೀಕರ ಕಾಡಾಗ್ನಿ (Spain Wildfire Donkeys) ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಸ್ಪೇನ್ ಒಂದರಲ್ಲೇ ಸುಮಾರು 24,00,000 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಧಗಧಗಿಸುವ ಬೆಂಕಿಯನ್ನು ನಿಯಂತ್ರಿಸಲು ಸರ್ಕಾರಗಳು ಉಪಗ್ರಹ, ಡ್ರೋನ್ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳನ್ನು ನೆಚ್ಚಿಕೊಂಡಿದ್ದರೆ, ಸ್ಪೇನ್ನ ಕ್ಯಾಟಲೋನಿಯಾ ಬೆಟ್ಟಗಳಲ್ಲಿ ಕತ್ತೆಗಳ ಪಡೆ ನೈಸರ್ಗಿಕವಾಗಿ ಕಾಡಾಗ್ನಿಗೆ ಬ್ರೇಕ್ ಹಾಕುವ ವಿಶಿಷ್ಟ ಕಾರ್ಯಾಚರಣೆ ನಡೆಸುತ್ತಿದೆ.