ಒಂದು ವೇಳೆ ಈ ಮಾತ್ರೆ ಏನಾದರೂ ದೊಡ್ಡ ಪ್ರಗತಿ ಸಾಧಿಸಿದರೆ ಅಥವಾ ಲೋನ್ವಿ ಕಂಪನಿಯ ಹೇಳಿಕೆ ನಿಜವಾಗಿದ್ದರೆ, ಮಾನವ ಜನಾಂಗದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಇದು ಸಂಪೂರ್ಣವಾಗಿ ಯಶಸ್ವಿಯಾದರೆ, ಆರೋಗ್ಯ ವ್ಯವಸ್ಥೆಗಳು, ನಿವೃತ್ತಿ ವಯಸ್ಸು, ಜನಸಂಖ್ಯೆ ಹಾಗೂ ಆರ್ಥಿಕ ಸ್ಥಿತಿ ಎಲ್ಲವೂ ತಲೆಕೆಳಗಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ, ಜೀವಕೋಶ ದುರಸ್ತಿ, ಆನುವಂಶಿಕ ಮಾರ್ಪಾಡುಗಳು, ಸಂಯೋಜನೆಯ ಚಿಕಿತ್ಸೆಗಳಂತಹ ಬಹು ಮಾರ್ಗಗಳನ್ನು ಅನ್ವೇಷಿಸಲಾಗುತ್ತದೆ. ಜೀವಿತಾವಧಿ ಸಂಶೋಧನೆಯ ಕ್ಷೇತ್ರವು ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, (ಏಜೆನ್ಸೀಸ್).