ಬದುಕಿನಲ್ಲಿ ಇಷ್ಟೊಂದು ಮಿತವ್ಯಯ ಪಾಲಿಸುತ್ತಿದ್ದರೂ, ಈ ದಂಪತಿಯ ಜ್ಞಾನದ ಹಸಿವು ಮತ್ತು ಸಾಂಸ್ಕೃತಿಕ ಆಸಕ್ತಿ ಮಾತ್ರ ಅತ್ಯಂತ ಶ್ರೀಮಂತವಾಗಿತ್ತು. ಅವರ ಮನೆಯಲ್ಲಿ ನೂರಾರು ಪುಸ್ತಕಗಳು, ದಿನಪತ್ರಿಕೆಗಳ ಕಟಿಂಗ್ಸ್‌ಗಳು ಹಾಗೂ ಹಳೆಯ ಸಂಗೀತದ ರೆಕಾರ್ಡ್‌ಗಳ ಅಪರೂಪದ ಸಂಗ್ರಹವಿತ್ತು. ಇವರು ಕೇವಲ ಮಕ್ಕಳ ಚಿಕಿತ್ಸೆಗೆ ಮಾತ್ರವಲ್ಲದೆ, ಚೀನಾದಲ್ಲಿ ಸಂಭವಿಸಿದ ಭೂಕಂಪ ಪೀಡಿತರ ಪರಿಹಾರ ನಿಧಿಗೆ, ಬಡವರ ಶಿಕ್ಷಣಕ್ಕೆ ಮತ್ತು ಹಲವಾರು ಸಾಮಾಜಿಕ ಕಾರ್ಯಗಳಿಗೂ ತಮ್ಮ ಜೀವಿತಾವಧಿಯಲ್ಲಿ ಧನಸಹಾಯ ಮಾಡಿದ್ದರು. ತಮ್ಮ ಕೊನೆಯ ಆಸೆಯಂತೆಯೇ, ಇಬ್ಬರ ಮರಣದ ನಂತರ ಕಳೆದ ಏಪ್ರಿಲ್ ತಿಂಗಳಲ್ಲಿ ಸಾಗರದಲ್ಲಿ ಇವರ ಚಿತಾಭಸ್ಮವನ್ನು ವಿಸರ್ಜಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇವರ ನಿಸ್ವಾರ್ಥ ಕಾರುಣ್ಯದಿಂದಾಗಿ ಹೊಸ ಜೀವನ ಪಡೆದುಕೊಂಡ ಆ 455 ಮಕ್ಕಳ ಉಸಿರಾಟ ಮತ್ತು ನಗುವಿನಲ್ಲಿಯೇ ಈ ಪುಣ್ಯ ದಂಪತಿಯ ಶ್ರೇಷ್ಠ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಫೌಂಡೇಶನ್ ಭಾವುಕವಾಗಿ ಸ್ಮರಿಸಿದೆ, (ಏಜೆನ್ಸೀಸ್).